ಬೇಸಿಗೆಗೆ ಸಲಹೆ ಸರಳ

ಬಿರು ಬೇಸಿಗೆ ಬಂದೇ ಬಿಡ್ತು. ಅದಕ್ಕಾಗಿ ಜನರು ಹೆಚ್ಚಿನ ಕಾಳಜಿ ವಹಿಸಲೇಬೇಕು.

*ನೀವು ಎಸಿ ರೂಮಿಗೆ ಹೊಸಬರಾದರೆ ಆರಂಭದಲ್ಲಿ ಕಾಣಿಸಿಕೊಳ್ಳುವ ಅನಾರೋಗ್ಯಗಳಿವು. ನಿಮ್ಮ ಶ್ವಾಸಕೋಶಕ್ಕೆ ಈ ತಣ್ಣನೆ ಹವಾ ಕಿರಿಕಿರಿ ಎನಿಸಿದರೆ, ಉಸಿರಾಟಕ್ಕೂ ಸಮಸ್ಯೆ ಆದೀತು. ಎಸಿರೂಮಿ ನಲ್ಲಿದ್ದವರು ಹೆಚ್ಚು ನೀರು ಕುಡಿದರೆ ಆಗಾಗ್ಗೆ ಕಾಣಿಸಿಕೊಳ್ಳುವ ಬಳಲಿಕೆ ದೂರವಾಗುತ್ತದೆ. ಇನ್ನು ನಮ್ಮ ದೇಹ ಆಯಾ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವುದರಿಂದ ಎಸಿ ರೂಮಿನಲ್ಲಿ ತಂಪಾದ ವಾತಾವರಣದಿಂದಾಗಿ ನೀರು ಕುಡಿಯುವುದನ್ನು ಮರೆಯುತ್ತೇವೆ. ಇದರಿಂದ ನಿರ್ಜಲೀಕರಣ ಸಂಸ್ಯೆ ಎದುರಾಗುವ ಸಾಧ್ಯತೆಗಳಿರುತ್ತವೆ.
*ಏರ್ ಕಂಡೀಶನರ್ ಕೆಲವು ವಂಶವಾಹಿ ರೋಗಗಳಿಗೆ ಪ್ರಚೋದಕ ಎಂಬುದೂ ಸಾಬೀತಾಗಿದೆ. ನಿಮ್ಮ ಪೂರ್ವಜರಲ್ಲಿ ಕಡಿಮೆ ರಕ್ತದೊತ್ತಡ, ವಾತರೋಗವಿದ್ದರೆ ಅದು ನಿಮಗೂ ವರ್ಗಾವಣೆಯಾದಂತೆ.
*ಚರ್ಮಕ್ಕೆ ಅಗತ್ಯವಾದ ವಿಟಮಿನ್‌ಗಳು ಸೂರ್ಯನ ಕಿರಣದಿಂದ ಸಿಕ್ಕರೂ, ಅದರ ಪ್ರಯೋಜನ ಪಡೆಯಲು ಹಿಂಜರಿಯುತ್ತಾರೆ.
*ಬಳಕೆ ಮಾಡುವ ಎಸಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೇ ಹೋದಲ್ಲಿ ಇದರಿಂದ ಅಲರ್ಜಿ ಹಾಗೂ ಚರ್ಮದ ಕಾಯಿಲೆ ಸೃಷ್ಟಿಸುವ ಸೋಂಕುಗಳು ಆರಂಭವಾಗುತ್ತದೆ.
*ಎಸಿ ಕೋಣೆಯಲ್ಲಿ ಹಲವರೊಟ್ಟಿಗೆ ಕೆಲಸ ಮಾಡುತ್ತಿದ್ದರೆ ಪಕ್ಕದವರ ಶೀತಜ್ವರದಂಥ ಸಾಂಕ್ರಾಮಿಕ ರೋಗಗಳೂ ಬಹುಬೇಗನೆ ನಿಮಗೂ ಅಟ್ಯಾಕ್ ಆಗುತ್ತವೆ.
*ದಿನಕ್ಕೆ ೮-೧೦ ಗ್ಲಾಸ್ ಗಳಷ್ಟು ನೀರನ್ನು ಕುಡಿಯಿರಿ. ಇದರಿಂದ ದೇಹಕ್ಕೆ ಎದುರಾಗುವ ನಿರ್ಜಲೀಕರಣ ಸಮಸ್ಯೆ ದೂರಾಗುತ್ತದೆ.
*ಹೆಚ್ಚು ಬಿಸಿ ಇರುವ ನೀರಿನ ಬಳಕೆಯನ್ನು ಕಡಿಮೆ ಮಾಡಿ. ಕಠಿಣ ಸಾಬೂನು ಬಳಕೆ ನಿಲ್ಲಿಸಿ. ಇಂತಹ ಸೋಪುಗಳು ಚರ್ಮವನ್ನು ಒಣಗುವಂತೆ ಮಾಡುತ್ತವೆ.
* ಗ್ಲಿಸರಿನ್ ಅಂಶ ಅರುವ ಸೋಪುಗಳ ಬಳಕೆ ಮಾಡಿ. ಈ ಬಗ್ಗೆ ವೈದ್ಯರ ಸಲಹೆಗಳನ್ನು ಪಡೆಯುವುದು ಉತ್ತಮ.
*ಅಗತ್ಯವಿಲ್ಲದಿರುವಾಗ ಎಸಿ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಎಸಿಗೆ ಹೆಚ್ಚು ಅವಲಂಬಿತರಾಗಬೇಡಿ. ಯಾವಾಗ ತಂಪಿನ ಅಗತ್ಯವಿದೆ ಎಂಬುದನ್ನು ನಿಮ್ಮ ದೇಹಕ್ಕೆ ತಿಳಿಯುತ್ತದೆ. ನೈಸರ್ಗಿಕವಾಗಿ ಬಾರದ ವಸ್ತುಗಳ ಬಳಕೆ ನಿಯಂತ್ರಿಸಿ.
* ೪-೬ ವಾರಗಳಿಗೊಮ್ಮೆ ಎಸಿಗಳ ಫಿಲ್ಟರ್ ಬದಲಾಯಿಸುತ್ತಿರಿ. ಫಿಲ್ಟರ್ ಗಳನ್ನು ಆಗಾಗ ಸ್ವಚ್ಛಗೊಳಿಸಿ, ಇದರಿಂತ ಎದುರಾಗುವ ಸೋಂಕುಗಳನ್ನು ತಡೆಗಟ್ಟಬಹುದು.

Leave a Comment