ಬೇಸರದಲ್ಲಿ ಹೊಟೇಲ್ ತೊರೆದ ಕೊಹ್ಲಿ ಬಳಗ

ನವದೆಹಲಿ, ಜು ೧೨- ಪ್ರಸಕ್ತ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಕನಸು ಭಗ್ನಗೊಂಡ ಬಳಿಕ ನಾಯಕ ವಿರಾಟ್ ಕೊಹ್ಲಿ ಅವರು ಬೇಸರದಿಂದಲೇ ಅಭಿಮಾನಿಗಳ ಕೈ ಕುಲುಕುತ್ತ ಮ್ಯಾಂಚೆಸ್ಟರ್ ಹೊಟೇಲ್ ಖಾಲಿ ಮಾಡಿ ಹೊರ ನಡೆದ ದೃಶ್ಯವಳಿಗಳು ಕ್ಯಾಮಾರದಲ್ಲಿ ಸೆರೆಯಾಗಿವೆ.

ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲುಂಡಿರುವ ಟೀಂ ಇಂಡಿಯಾ ಪ್ಯಾಕಿಂಗ್ ಶುರು ಮಾಡಿ ಭಾರತದತ್ತ ಪ್ರಯಾಣ ಬೆಳೆಸಲು ಮುಂದಾಗಿದ್ದು. ಪೇಚು ಮುಖದಿಂದಲೇ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆ ಮ್ಯಾಂಚೆಸ್ಟರ್ ಹೊಟೇಲ್‌ನಿಂದ ಹೊರ ಬಂದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೊಟೇಲ್ ಹೊರಗೆ ಇಂಗ್ಲೀಷ್ ಅಭಿಮಾನಿಗಳ ದಂಡೇ ನೆರೆದಿತ್ತು. ಕೊಹ್ಲಿ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಕೊಹ್ಲಿ ಕೈ ಕುಲುಕಿ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಕೊಹ್ಲಿ ತಂಡದ ಸದಸ್ಯರು ಪಂದ್ಯ ಸೋತ ಬೇಸರದಲ್ಲಿಯೇ ಹೊಟೇಲ್‌ನಿಂದ ಹೊರಬರುತ್ತಿರುವುದು ಕಂಡು ಬಂದಿದೆ.

ವಿಶ್ವಕಪ್‌ನಲ್ಲೂ ಐಪಿಎಲ್ ನಾಕೌಟ್ ಮಾದರಿಗೆ ಸಲಹೆ

ಐಪಿಎಲ್‌ನಂತೆ ವಿಶ್ವಕಪ್‌ನಲ್ಲೂ ನಾಕೌಟ್ ಮಾದರಿಯನ್ನು ಅನುಸರಿಸಿ ಪಂದ್ಯಗಳನ್ನು ಆಯೋಜಿಸಬೇಕು ಎಂದು ಐಸಿಸಿಗೆ ವಿರಾಟ್ ಕೊಹ್ಲಿ ಸಲಹೆ ನೀಡಿದ್ದಾರೆ. ಕ್ರಿಕೆಟ್‌ನಲ್ಲಿ ಏನೆಲ್ಲ ಆಗಬಹುದು ಎಂಬ ಭವಿಷ್ಯದ ಬಗ್ಗೆ ಯಾರಿಗೆ ಗೊತ್ತಿದೆ. ಈ ಪಂದ್ಯಾವಳಿಯ ಪ್ರಮಾಣ ನೋಡುತ್ತ ಈ ವಿಷಯಗಳು ಪರಿಗಣನೆಗೆ ಬರಬಹುದು ಎಂದು ನಾನು ಭಾವಿಸುತ್ತೇನೆ. ಅದು ನಿಜವಾಗಿಯೂ ಮಾನ್ಯ ಅಂಶವಾಗಿದೆ. ಅದು ಯಾವಾಗ ಕಾರ್ಯಗತಗೊಳ್ಳುತ್ತದೆ ಎಂದು ತಿಳಿದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಐಪಿಎಲ್‌ನ ನಾಕೌಟ್‌ನಲ್ಲಿ ಕ್ವಾಲಿಫಯರ್ ೧, ೨ ಎಂದು ಮೊದಲಿಗೆ ಆಡಿಸಲಾಗುತ್ತದೆ. ಲೀಗ್ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಅಗ್ರ ಎರಡು ತಂಡಗಳು ಕ್ವಾಲಿಫಯರ್ ೧ ರಲ್ಲಿ ಸೆಣಸಲಿವೆ. ನಂತರ, ಇದರಲ್ಲಿ ಗೆದ್ದು ತಂಡ ನೇರವಾಗಿ ಫೈನಲ್ ಪ್ರವೇಶ ಮಾಡಲಿದೆ. ಸೋತ ಗೆದ್ದ ಕ್ವಾಲಿಫಯರ್ ೨ ರ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯವಾಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್ ಪ್ರವೇಶ ಮಾಡಲಿದೆ.  ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಎರಡು ತಂಡಗಳಿಗೆ ಫೈನಲ್ ತಲುಪಲು ಎರಡು ಅವಕಾಶವಿರುತ್ತದೆ. ಆದರೆ, ಕ್ವಾಲಿಫಯರ್ ೨ ರ ತಂಡಗಳಿಗೆ ಒಂದೇ ಅವಕಾಶ ಇರುತ್ತದೆ.

ಇನ್ನು ಐಪಿಎಲ್‌ನಂತೆ ಐಸಿಸಿ ವಿಶ್ವಕಪ್‌ನಲ್ಲಿ ಫ್ಲೆಆಪ್ ಮಾದರಿ ಅನುಸರಿಸಿದ್ದಲ್ಲಿ ಅಗ್ರಸ್ಥಾನ ಗಳಿಸಿದ್ದ ತಂಡಗಳಿಗೆ ಫೈನಲ್ ತಲುಪಲು ಉತ್ತಮ ಅವಕಾಶಗಳು ಲಭ್ಯವಿರುತ್ತದೆ. ಒಂದು ವೇಳೆ ಕ್ವಾಲಿಫಯರ್ ಹಂತದಲ್ಲಿ ಸೋತರು ಮೂರನೇ ಸ್ಥಾನಕ್ಕೂ ಅವಕಾಶವಿರಲಿದೆ ಎಂದು ಹೇಳಿದ್ದಾರೆ.

Leave a Comment