ಬೇವಿನ ಎಲೆ ಉಪಯೋಗ

ಚೈತ್ರ ಮಾಸದಲ್ಲಿ ಬೇವಿನ ಚಿಗುರೆಲೆಗಳ  ಸೇವನೆ……  ಬಹಳ ಒಳ್ಳೇಯದು ಬೇವಿನ ಚಿಗುರೆಲೆಗಳನ್ನ  ಕೊಂಚ ನೀರಿನೊಂದಿಗೆ ಖಾಲಿ ಹೊಟ್ಟೆಯಲ್ಲಿ ದಿನದ ಪ್ರಥಮ ಆಹಾರವಾಗಿ ಸೇವಿಸಲಾಗುತ್ತದೆ. ಆಯುರ್ವೇದದ ಪ್ರಕಾರ ಈ ಚಿಗುರೆಲೆಗಳು ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕ, ಉರಿಯೂತ ನಿವಾರಕ ಹಾಗೂ ಶಿಲೀಂಧ್ರನಿವಾರಕ ಗುಣಗಳನ್ನು ಹೊಂದಿವೆ. ನಿತ್ಯವೂ ೮-೧೦ ಬೇವಿನ ಎಲೆಗಳನ್ನು ಒಂದು ತಿಂಗಳ ಕಾಲ ಸೇವಿಸುವ ಮೂಲಕ ವರ್ಷವಿಡೀ ದೇಹವನ್ನು ಎದುರಾಗುವ ಹಲವು ಬಗೆಯ ಸೋಂಕಿನಿಂದ ರಕ್ಷಿಸಿಕೊಳ್ಳ ಬಹುದಾಗಿದೆ.

health-neeeee ಈ ಎಲೆಗಳಲ್ಲಿ ನಿಂಬಿನ್, ನಿಂಬಿನೆನ್, ನಿಮೋಲೈಡ್, ನಿಮಾಂಡಿಯಲ್, ನಿಂಬಿನೈನ್ ಸಹಿತ ಸುಮಾರು ನೂರಾಮೂವತ್ತು ಬಗೆಯ ಅವಶ್ಯಕ ಪೋಷಕಾಂಶಗಳಿವೆ ಹಾಗೂ ಇವು ಹಲವಾರು ಬಗೆಯ ತೊಂದರೆಗಳ ವಿರುದ್ದ ಹೋರಾಡುವ ಗುಣ ಹೊಂದಿವೆ.

ತಲೆಹೊಟ್ಟನ್ನು ನಿವಾರಿಸುವುದರಿಂದ ತೊಡಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ ಇವುಗಳ ಬಳಕೆಯಾಗುತ್ತದೆ ಹಾಗೂ ಮಲೇರಿಯಾದಂತದ ಮಾರಣಾಂತಿಕ ರೋಗದಿಂದ ರಕ್ಷಣೆ ಒದಗಿಸುತ್ತದೆ.

ಬೇವಿನಲ್ಲಿರುವ ಪೋಷಕಾಂಶಗಳ ವಿವರ ಒಂದು ಕಪ್ (ಮೂವತ್ತೈದು ಗ್ರಾಂ) ನಷ್ಟು ಎಳೆಯ ಬೇವಿನ ಎಲೆಗಳಲ್ಲಿರುವ ಪೋಷಕಾಂಶಗಳೆಂದರೆ: ೪೫ ಕ್ಯಾಲೋರಿಗಳು ೨.೪೮ ಗ್ರಾಂ ಪ್ರೋಟೀನ್ ೮.೦೧ ಗ್ರಾಂ ಕಾರ್ಬೋಹೈಡ್ರೇಟುಗಳು ೦.೦೩ ಗ್ರಾಂ ಕೊಬ್ಬು ೧೭೮.೫ ಮಿಲಿಗ್ರಾಂ ಕ್ಯಾಲ್ಸಿಯಂ ೫.೯೮ ಮಿಲಿಗ್ರಾಂ ಕಬ್ಬಿಣ ೬.೭೭ ಗ್ರಾಂ ಕರಗದ ನಾರು .

ನಿತ್ಯವೂ ಬೇವಿನ ಎಲೆಗಳನ್ನು ಕುದಿಸಿದ ನೀರನ್ನು ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ.

ಈ ಎಲೆಗಳಲ್ಲಿರುವ ರಾಸಾಯನಿಕ ಸಂಯುಕ್ತಗಳು ದೇಹದ ಇನ್ಸುಲಿನ್ ಬಳಸಿಕೊಳ್ಳುವ ಕ್ಷಮತೆಯನ್ನು ಅತ್ಯುತ್ತಮವಾಗಿಸುತ್ತದೆ ಹಾಗೂ ಈ ಮೂಲಕ ಇನ್ಸುಲಿನ್ ಅನ್ನು ಗರಿಷ್ಟ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವಂತೆ ಮಾಡುತ್ತದೆ. ತನ್ಮೂಲಕ ಮಧುಮೇಹ ಎದುರಾಗುವ ಸಾಧ್ಯತೆಯಿಂದ ರಕ್ಷಣೆ ಒದಗಿಸುತ್ತದೆ.

ಒಂದು ವೇಳೆ ಮೊಡವೆಗಳಿಂದ ನೀವು ಬಳಲುತ್ತಿದ್ದರೆ ಬೇವು ಇದಕ್ಕೆ ಅತ್ಯುತ್ತಮ ಪರಿಹಾರ ಒದಗಿಸಬಲ್ಲುದು. ಬೇವಿನಿಂದ ಪ್ರತ್ಯೇಕಿಸಲ್ಪಟ್ಟ ಪೋಷಕಾಂಶಗಳು ಮೊಡವೆಯ ಜಿಡ್ಡುಗಳನ್ನು ನಿವಾರಿಸಿ ಇವುಗಳಲ್ಲಿ ಅಡಗಿದ್ದ ಬ್ಯಾಕ್ಟೀರಿಯಾಗಳನ್ನೂ ನಿವಾರಿಸುತ್ತವೆ. ಜೊತೆಗೇ ಆರ್ದ್ರತೆಯನ್ನು ಒದಗಿಸಿ ಚರ್ಮ ಒಣಗದಿರುವಂತೆ ಮಾಡುತ್ತದೆ. ಅಲ್ಲದೇ ತುರಿಕೆ, ಕೆಂಪಗಾಗುವುದು, ಮೊಡವೆಗಳು ಮತ್ತು ಚರ್ಮದಲ್ಲಿ ಕಲೆಗಳು ಮೂಡುವುದು ಮೊದಲಾದ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.

health-neem1

ಬೇವಿನ ಎಳೆಯ ಕಡ್ಡಿಯನ್ನು ಜಗಿಯುವ ಮೂಲಕ ಹಲ್ಲುಗಳ ಸಂಧುಗಳ ನಡುವೆ ಉತ್ಪತ್ತಿಯಾದ ಕೂಳೆಯನ್ನು ನಿವಾರಿಸಿ ಇಲ್ಲಿ ಕುಳಿಗಳಾಗುವ ಸಾಧ್ಯತೆಯನ್ನು ತಪ್ಪಿಸಬಹುದು. ತಲೆಹೊಟ್ಟಿನ ನಿವಾರಣೆ ಇದರ ಶಿಲೀಂಧ್ರ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳು ತಲೆಹೊಟ್ಟನ್ನು ನಿವಾರಿಸಲೂ ಸಮರ್ಥವಾಗಿವೆ. ಅಲ್ಲದೇ ಕೂದಲ ಬುಡದ ಆರೋಗ್ಯವನ್ನು ಹೆಚ್ಚಿಸಿ ಆರೋಗ್ಯಕರ ಕೂದಲು ಉದ್ದವಾಗಿ ಬೆಳೆಯಲು ನೆರವಾಗುತ್ತದೆ
ಹಲವಾರು ಅಧ್ಯಯನಗಳ ಪ್ರಕಾರ ಕ್ಯಾನ್ಸರ್ ಬರದೇ ಇರುವಂತೆ ಮಾಡುವ ಶಕ್ತಿ ಬೇವಿನ ಎಲೆಗಳಿಂದ ನಿವಾರಿಸಲ್ಪಟ್ಟ ಪೋಷಕಾಂಶಗಳಿಗಿವೆ.

ಇವು ಜೀವಕೋಶಗಳ ಅಸಹಜ ಸಾವನ್ನು ತಡೆಯುವುದು, ಅನಿಯಂತ್ರಿತ ಜೀವಕೋಶ ಬೆಳವಣಿಗೆಯನ್ನು ತಡೆಗಟ್ಟುವುದು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ. ಕರುಳಿನ ಹುಣ್ಣುಗಳನ್ನು ಗುಣಪಡಿಸುತ್ತದೆ ಒಂದು ವೇಳೆ ಕರುಳಿನಲ್ಲಿ ಹುಣ್ಣುಗಳಾಗಿದ್ದು ಭಾರೀ ಉರಿ ಇದ್ದರೆ ಬೇವಿನ ಎಲೆಗಳನ್ನು ಹಸಿಯಾಗಿ ಜಗಿದು ನುಂಗುವುದರಿಂದ ತಕ್ಷಣವೇ ಪರಿಹಾರ ದೊರಕುತ್ತದೆ.

ಈ ಹುಣ್ಣುಗಳನ್ನು ಶಮನಗೊಳಿಸುವ ಜೊತೆಗೇ ನಿತ್ಯದ ಸೇವನೆಯ ಮೂಲಕ ಕರುಳುಗಳಿಗೆ ಎದುರಾಗುವ ಮಲಬದ್ದತೆ, ಹೊಟ್ಟೆಯುಬ್ಬರಿಕೆ, ಹೊಟ್ಟೆಯ ಸೆಡೆತ ಮೊದಲಾದ ಇತರ ತೊಂದರೆಗಳಿಂದಲೂ ರಕ್ಷಿಸುತ್ತದೆ.

Leave a Comment