ಬೇರ್​ಗ್ರಿಲ್ಸ್​-ರಜಿನಿಕಾಂತ್​ ಫಸ್ಟ್ ಮೋಷನ್​ ಪೋಸ್ಟರ್​ ಬಿಡುಗಡೆ​​; ಮ್ಯಾನ್​ ವರ್ಸಸ್​ ವೈಲ್ಡ್​​ನಲ್ಲಿ ತಲೈವಾ ಸ್ಟೈಲ್​ಗೆ ಅಭಿಮಾನಿಗಳು ಫಿದಾ

ಮೈಸೂರು.ಫೆ.೧೯.ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗುವ ಜಗದ್ವಿಖ್ಯಾತ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಚಿತ್ರೀಕರಣ ಇತ್ತೀಚೆಗೆ ಎಚ್.ಡಿ.ಕೋಟೆಯ ಬಂಡೀಪುರ ಅಭಯಾರಣ್ಯದಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ ಭಾಗವಹಿಸಿದ್ದರು. ಖ್ಯಾತ ನಿರೂಪಕ ಬೇರ್ ಗ್ರಿಲ್ಸ್ ಜೊತೆ ರಜನಿ ಕಾಂತ್ ಅರಣ್ಯ ಸುತ್ತಾಡಿ ಚಿತ್ರೀಕರಣ ಮುಗಿಸಿದ್ದರು. ಇದೀಗ ಈ ಚಿತ್ರೀಕರಣದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

ಬೇರ್ ಗ್ರಿಲ್ಸ್ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ರಜನಿ ಜೊತೆಗೆ ನಡೆಸಿದ ಚಿತ್ರೀಕರಣದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಟ್ವೀಟ್ನಲ್ಲಿ ರಜನಿಕಾಂತ್ ಜೊತೆಗೆ ಕಳೆದ ಕ್ಷಣಗಳು ವಿಶೇಷವಾಗಿತ್ತು ಎಂದು ಬರೆದುಕೊಂಡಿದ್ದಾರೆ. ರಜನಿಕಾಂತ್ ಒಬ್ಬರು ನಟರು. ಆದರೆ ಕಾಡಿನಲ್ಲಿ ಎಲ್ಲವೂ ಭಿನ್ನವಾಗಿರುತ್ತದೆ. ಲೆಜೆಂಡ್ ಜೊತೆಗೆ ಕಳೆದ ಸಮಯ ಸಖತ್ ಫನ್ ಆಗಿತ್ತು. ಸದ್ಯದಲ್ಲೇ ಈ ಎಪಿಸೋಡ್ ನಿಮ್ಮ ಮುಂದೆ ಬರಲಿದೆ ಎಂದು ಬರೆದುಕೊಂಡಿದ್ದಾರೆ.

ಜನವರಿ ತಿಂಗಳಿನಲ್ಲಿ ಬಂಡೀಪುರದ ಅಭಯಾರಣ್ಯದಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣ ನಡೆದಿತ್ತು. ಒಂದು ದಿನಗಳ ಕಾಲ ರಜಿನಿಕಾಂತ್ ಮತ್ತು ನಿರೂಪಕ ಬೇರ್ಗ್ರಿಲ್ಸ್ ಕಾಡಿನಲ್ಲಿ ಸುತ್ತಾಟ ನಡೆಸುತ್ತಾ ಚಿತ್ರೀಕರಣ ಮುಗಿಸಿದ್ದರು. ರಜನಿಕಾಂತ್ ನಂತರ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೂಡ ಬಂಡೀಪುರಕ್ಕೆ ಆಗಮಿಸಿ, ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

Leave a Comment