ಬೇರೆ ಪಕ್ಷ‌ಕ್ಕೆ ಹೋಗುವವರು ಉದ್ಧಾರ ಆಗಲ್ಲ; ಸಿ.ಟಿ.ರವಿ ತಿರುಗೇಟು

ಬೆಂಗಳೂರು: ಬುಧವಾರ ಸುಪ್ರೀಂಕೋರ್ಟ್ ತೀರ್ಪು ನೋಡಿಕೊಂಡು ನಾವು ಉಪಚುನಾವಣೆ ಪ್ರಕ್ರಿಯೆ ಆರಂಭಿಸುತ್ತೇವೆ. ಕೋರ್ಟ್ ತೀರ್ಪಿನ ಮೇಲೆ ಉಪಚುನಾವಣೆ ನಡೆಯುವುದು ಬಿಡುವುದು ನಿರ್ಧಾರವಾಗಲಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ ಟಿ ರವಿ, ನಮ್ಮದು ಸಿದ್ಧಾಂತ ಇಟ್ಟುಕೊಂಡಿರುವ ಪಕ್ಷ. ಪಕ್ಷ ಬಿಟ್ಟು ಬೇರೆ ಪಕ್ಷ‌ಕ್ಕೆ ಹೋಗುವವರು ಕೆಡುತ್ತಾರೆ. ಅವರು ಹೋದರು ಅಂತ ನಮ್ಮ ಪಕ್ಷ ಕೆಡುವುದಿಲ್ಲ. ಹೋಗುತ್ತೇವೆ ಅಂದವರನ್ನು ತಡೆಯಲು ಆಗುವುದಿಲ್ಲ ಎಂದು ರಾಜು ಕಾಗೆಗೆ ಟಾಂಗ್ ನೀಡಿದರು.

ಶರತ್ ಬಚ್ಚೇಗೌಡ ಮತ್ತು ಅವರ ಕುಟುಂಬಕ್ಕೆ ಪಕ್ಷ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಪಕ್ಷ ಅವರಿಗೆ ಏನ್ ಕಡಿಮೆ ಮಾಡಿದೆ? ಪಕ್ಷ ಯಾವ ಥರದಲ್ಲೂ ಕಡಿಮೆ ಮಾಡಿಲ್ಲ. ಇದನ್ನು ಶರತ್ ಯೋಚನೆ ಮಾಡಲಿ. ಇವತ್ತಿನ ನಮ್ಮ ತೀರ್ಮಾನ ಇವತ್ತಿಗೆ ಮಾತ್ರ ಇರಬಾರದು. ಮುಂದಿನ ರಾಜಕೀಯ ಬದುಕಿನ ಬಗ್ಗೆಯೂ ಯೋಚನೆ ಮಾಡಬೇಕು. ಅವರು ಪಕ್ಷದ ನಿರ್ಧಾರ ಒಪ್ಪಬೇಕು. ಹಿರಿಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಬಂಡಾಯ ಸ್ಪರ್ಧೆಗೆ ಮುಂದಾಗಿರುವ ಶರತ್ ಬಚ್ಚೇಗೌಡ ಅವರಿಗೆ ಸಿ ಟಿ ರವಿ ಸಲಹೆ ನೀಡಿದರು.

Leave a Comment