ಬೆಸ್ಕಾಂ ನೌಕರ ನೇಣಿಗೆ ಶರಣು

ಮಧುಗಿರಿ, ಜ. ೧೨- ಬೆಸ್ಕಾಂ ನೌಕರರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಬೆಸ್ಕಾಂ ವಸತಿ ಗೃಹದಲ್ಲಿ ನಡೆದಿದೆ.

ಮೊಹಮದ್ ಸಾಧಿಕ್(38) ಮೃತಪಟ್ಟಿರುವ ದುರ್ದೈವಿ. ಇವರು ಬೆಸ್ಕಾಂ ನೌಕರರಾಗಿದ್ದು, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಸಂಬಂಧ ಮಧುಗಿರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment