ಬೆಳ್ಳಿ ಪದಕ ಬೇಟಿಯಾಡಿದ ಶೂಟರ್ ಸಂಜೀವ್

ಪಾಲೆಂಬಂಗ್, ಆ ೨೧- ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟರ್ ಸಂಜೀವ್ ರಜಪೂತ್ ಅವರು ಬೆಳ್ಳಿ ಪದಕ ಬೇಟೆಯಾಡಿದ್ದಾರೆ.

ಪುರುಷರ ೫೦ ಮೀ. ರೈಫಲ್ ೩ ಪೊಜಿಷನ್ ವಿಭಾಗದಲ್ಲಿ ಶೂಟರ್ ಸಂಜೀವ್ ರಜಪೂತ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದು, ೪೫೨.೭ ಸ್ಕೋರ್ ಗಳಿಸುವ ಮೂಲಕ ೩೭ರ ಹರಯದ ಸಂಜೀವ್ ದ್ವಿತೀಯ ಬಹುಮಾನಕ್ಕೆ ಮುತ್ತಿಕ್ಕಿದರು.

ಇದೇ ಸ್ಪರ್ಧೆಯ ಕಣದಲ್ಲಿದ್ದ ಚೀನಾದ ಹ್ಯೂಯಿ ಜೆಚೆಂಗ್ ಅವರು ೪೫೩.೩ ಸ್ಕೋರ್ ಪಡೆದು ಪ್ರಥಮ ಸ್ಥಾನ ಗಳಿಸಿ ಚಿನ್ನಕ್ಕೆ ಮುತ್ತಿಟ್ಟಿರು, ಜಪಾನಿನ ಮಟ್ಸುಮೊಟೊ ತಕಾಯುಕಿ ಅವರು ೪೪೧.೫ ಸ್ಕೋರ್ ಗಳಿಸಿ ಕಂಚಿಗೆ ತೃಪ್ತಿಪಡೆದುಕೊಂಡರು.

Leave a Comment