ಬೆಳ್ಳಿತೆರೆಗೆ ಬರಲಿದೆ ಸಿದ್ದಗಂಗಾ ಶ್ರೀಗಳ ಚಿತ್ರ: ಕಿಚ್ಚ ಸುದೀಪ್ ನಟನೆ?

ಬೆಂಗಳೂರು, ಜ ೩೧-  ಲೋಕಕಲ್ಯಾಣಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ತ್ರಿವಿಧ ದಾಸೋಹಿ, ನಡೆದಾಡುವ ದೇವರು.. ಕಾಯಕ ಯೋಗಿ.. ಸಿದ್ಧಗಂಗಾ ಶ್ರೀಗಳ ಸಾಕ್ಷಚಿತ್ರ ಈಗಾಗಲೇ ಚಿತ್ರರಸಿಕರನ್ನು ಸೆಳೆದಿತ್ತು. ಇದೀಗ ಶ್ರೀಗಳ ಬಯೋಪಿಕ್ ತಯಾರಿಗೆ ಸಿದ್ದತೆ ನಡೆದಿದೆ.

ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿ  ಇಂದಿಗೆ  ೧೧ ದಿನಗಳೇ ಕಳೆದಿದ್ದು, ಇವತ್ತಿಗೂ ಶತಾಯುಷಿಯ ನೆನಪು ಜನರನ್ನು ಕಾಡುತ್ತಿದೆ. ಇದರ ನಡುವೆ ಶ್ರೀಗಳ ಜೀವನ ಚರಿತ್ರೆಯನ್ನು ಸಿನಿಮಾವಾಗಿ ತರುವ ಪ್ರಯತ್ನ ನಡೆದಿತ್ತು. ಇದೀಗ ‘ತ್ರಿವಿಧ ದಾಸೋಹಿ’ಯ ಜೀವನ ವೃತ್ತಾಂತವನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳುವ ಶುಭ ಸೂಚನೆ ಸಿಕ್ಕಿದ್ದು, ನಿರ್ದೇಶಕ ಪುರುಷೋತ್ತಮ್ ಅವರು ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸಿದ್ದಾರೆ.

ಇನ್ನು ಶ್ರೀಗಳ ಪಾತ್ರಧಾರಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂದು ಎಲ್ಲೆಡೆ ಭಾರಿ ಕುತುಹಲ ಹುಟ್ಟುವುದು ಸಹಜ. ಆ ಪಾತ್ರಕ್ಕೆ ಕಿಚ್ಚ ಸುದೀಪ್ ನಟಿಸುವ ಸಾಧತ್ಯೆ ಇದೆ.  ಶ್ರೀಗಳ ಪಾತ್ರದಲ್ಲಿ ಕಿಚ್ಚ ಸುದೀಪ್ ತರುವುದಕ್ಕೆ ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ. ಶ್ರೀಗಳ ಪಾತ್ರಕ್ಕೆ ಸುದೀಪ್ ಅವರೇ ಹೋಲಿಕೆಯಾಗಲಿದ್ದಾರೆ ಎಂಬುದು ನಿರ್ದೇಶಕರ ಅಭಿಪ್ರಾಯ. ಸುದೀಪ್ ಎತ್ತರ, ದೈಹಿಕ ವರ್ಚಸ್ಸು, ಶ್ರೀಗಳಿಗೆ ಹೋಲಿಕೆ ಆಗುತ್ತೆ. ಹೀಗಾಗಿ ಶ್ರೀಗಳ ಪಾತ್ರದಲ್ಲಿ ಕಿಚ್ಚರನ್ನು ಕಾಣಿಸಿಕೊಳ್ಳಲು ಚಿಂತಿಸಿದ್ದೇವೆ. ಸದ್ಯಕ್ಕೆ ಸುದೀಪ್ ಶೂಟಿಂಗ್‌ಗಾಗಿ ಹೈದರಬಾದ್‌ನಲ್ಲಿದ್ದಾರೆ. ಅವರು ಬೆಂಗಳೂರಿಗೆ ಬಂದ ತಕ್ಷಣ ಸಿನಿಮಾ ಕುರಿತು ಚರ್ಚೆ ನಡೆಸುತ್ತೇವೆ ನಿರ್ದೇಶಕ ಪುರುಷೋತ್ತಮ್ ತಿಳಿಸಿದ್ದಾರೆ.

ಈ ಮೊದಲ ಜ್ಞಾನ ಜ್ಯೋತಿ ಸಿದ್ದಗಂಗಾ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು, ಈ ಚಿತ್ರದಲಲಿ ಮಠದ ಸಂಪೂರ್ಣ ಪುರುಷೋತ್ತಮ್? ಕನ್ನಡದ ಭರವಸೆಯ ನಿರ್ದೇಶಕರು. ನಮ್ಮವರು, ಮಹಾಶರಣ ಹರಳಯ್ಯ, ಪಗಡೆಯಂತಹ ವಿಭಿನ್ನ ಚಿತ್ರಗಳನ್ನು ಕೊಟ್ಟ ನಿರ್ದೇಶಕ. ಈ ಹಿಂದೆ ಪುರುಷೋತ್ತಮ್ ಸಿದ್ಧಗಂಗಾ ಕ್ಷೇತ್ರದ ಇತಿಹಾಸ ಕುರಿತು ‘ಜ್ಞಾನ ಯೋಗಿ ಸಿದ್ಧಗಂಗೆ’ ಅಂತಾ ಸಿನಿಮಾ ಮಾಡಿದ್ದರು. ಈ ಸಿನಿಮಾದಲ್ಲಿ ಖುದ್ದು ಶಿವಕುಮಾರ ಸ್ವಾಮೀಜಿಗಳು ಕಾಣಿಸಿಕೊಂಡಿದ್ದರು. ಇದೀಗ ‘ಕಾಯಕ ಯೋಗಿ’ ಅಂತಾ ಶ್ರೀಗಳ ಬಯೋಪಿಕ್ ಮಾಡಲು ಮುಂದಾಗಿದ್ದಾರೆ.

ಈಗಾಗಲೇ ಸಿನಿಮಾದ ಕಥೆ- ಚಿತ್ರಕಥೆ ಸಿದ್ಧವಾಗಿದ್ದು, ಉಳಿದ ತಯಾರಿ ನಡೀತಿವೆ. ವಿಶೇಷವೆಂದರೆ ಶಿವಕುಮಾರ ಸ್ವಾಮೀಜಿಗಳೇ ಸಿನಿಮಾಗೆ ಕ್ಲ್ಯಾಪ್ ಮಾಡಿದ್ದರು. ಆದರೆ ಕಾರಣಾಂತರದಿಂದ ಸಿನಿಮಾ ಟೇಕಾಫ್ ಆಗುವುದು ತಡವಾಗಿತ್ತು. ಇದೀಗ

Leave a Comment