ಬೆಳ್ತಂಗಡಿ: ೭ ಹೋಟೆಲ್‌ಗಳ ಮಾಲಕ-ಗ್ರಾಹಕರಿಗೆ ದಂಡ!

ಮಂಗಳೂರು, ಮೇ ೨೬- ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದ ಅಂಗಡಿಗಳ ಮೇಲೆ ಮುಖ್ಯಾಧಿಕಾರಿ ಸುಧಾಕರ್ ನೇತೃತ್ವದಲ್ಲಿ ದಾಳಿ ನಡೆಸಿ ದಂಡ ವಿಧಿಸಿದ್ದಾರೆ.
ಸೀಯಾಳದ ಪಾರ್ಸೆಲ್ ಮಾತ್ರ ಕೊಂಡೊಯ್ಯುವ ಅವಕಾಶವಿದ್ದು ಎರಡು ಅಂಗಡಿಗಳಲ್ಲಿ ಕುಡಿಯಲು ನೀಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ದಂಡ ವಿಧಿಸಿದೆ. ಬಳಿಕ ಮಾಸ್ಕ್ ಧರಿಸದೇ ಬಂದವರಿಗೆ ೫೦ ಮಂದಿಗೆ ತಲಾ ನೂರು ರುಪಾಯಿ ದಂಡ ವಿಧಿಸಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ, ಮಕ್ಕಳನ್ನು ಮತ್ತು ವೃದ್ಧರನ್ನು ಪೇಟೆಗೆ ಕರೆದುಕೊಂಡು ಬಾರದಂತೆ,ಲಾಕ್ ಡೌನ್ ನಿಯಮ ಪಾಲಿಸುವಂತೆ ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡಿದರು. ಹೋಟೇಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶವಿದ್ದು ಇದನ್ನು ಉಲ್ಲಂಘಿಸಿದ ೭ ಹೋಟೇಲ್ ಗಳ ಮೇಲೆ ದಾಳಿ ನಡೆಸಿ ತಲಾ ೫ ಸಾವಿರ ದಂಡ ವಿದಿಸಲಾಗಿದೆ.

Share

Leave a Comment