ಬೆಳೆ ಹಾನಿ ಸಮೀಕ್ಷಾ ವರದಿಗೆ ಸೂಚನೆ

ಸಿಂಧನೂರು.ಏ.16- ನಿನ್ನೆ ಸುರಿದ ಬಿರುಗಾಳಿ ಸಮೇತ ಆಲಿಕಲ್ಲು ಮಳೆಗೆ ಸಾವಿರಾರು ಎಕರೆಯಲ್ಲಿ ನಷ್ಟಕ್ಕೊಳಗಾದ ಭತ್ತ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಹಂಪನಗೌಡ ಬಾದರ್ಲಿ, ತಕ್ಷಣವೇ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಮೀಕ್ಷೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.
ನಿನ್ನೆ ಸಂಜೆ ಸುರಿದ ಆಲಿಕಲ್ಲು ಮಳೆಗೆ ಸಾವಿರಾರು ಎಕರೆಯಲ್ಲಿ ಬೆಳೆದ ಭತ್ತ ನೆಲಕ್ಕೆ ತಾಗಿಕೃಷಿಕರು ಆತಂಕಗೊಂಡ ಹಿನ್ನೆಲೆ ಪಟ್ಟದ ಹಂಚಿನಾಳ ಕ್ಯಾಂಪ್, ಬಳಿಗೇರಾ ಕ್ಯಾಂಪ್, ಭೀಮರೆಡ್ಡಿ ಕ್ಯಾಂಪ್ ಸೇರಿದಂತೆ ಇನ್ನಿತರ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಪರಿಶೀಲಿಸಿ ಬಳಿಕ ರೈತರೊಂದಿಗೆ ಚರ್ಚಿಸಿದ ಅವರು ನಗರ ಸೇರಿ ಗ್ರಾಮೀಣ ವ್ಯಾಪ್ತಿಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಕೋಟ್ಯಾಂತರ ಭತ್ತ ಬೆಳೆ ನಷ್ಟವಾಗಿರುವ ಕುರಿತು ಅಂದಾಜಿಸಲಾಗಿದೆ.
ಅನಿರೀಕ್ಷಿತ ಮಳೆ ರೈತರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಶೀಘ್ರವೇ ಭತ್ತ ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸುವುದರೊಂದಿಗೆ ಸರಕಾರಕ್ಕೆ ಸಂಕ್ಷಿಪ್ತವರದಿ ಸಲ್ಲಿಕೆ ಮಾಡುವಂತೆ ದೂರವಾಣಿ ಕರೆ ಮೂಲಕ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಜಿ.ಪಂ. ಸದಸ್ಯರಾದ ಬಸವರಾಜ ಹಿರೇಗೌಡ, ಬಾಬುಗೌಡ ಬಾದರ್ಲಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Leave a Comment