ಬೆಳೆ   ವಿಮಾ ಕಡಿತ:  ಕೇಂದ್ರದ ನಿರ್ಧಾರಕ್ಕೆ  ಚಿದು ಆಕ್ರೋಶ

ನವದೆಹಲಿ, ಫೆ 20 – ಬೆಳೆ  ವಿಮಾ ಯೋಜನೆಯಲ್ಲಿ ಸರ್ಕಾರ  ತನ್ನ ಕೊಡುಗೆಯನ್ನು ಕಡಿಮೆ ಮಾಡುವ ನಿರ್ಧಾರ ನಿಜವಾಗಿಯೂಯೂ ರೈತ ವಿರೋಧಿ  ಕ್ರಮ   ಎಂದೂ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ

ದೂರಿದ್ದಾರೆ.

  ಈ ನಿರ್ಧಾರವು ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ತಪ್ಪು ಹಾದಿ,  ತಪ್ಪಿದ ನೀತಿ ನಿಯಮಗಳಿಗೆ  ಆದ್ಯತೆಗಳಿಗೆ ನೀಡುತ್ತಿರುವ ಸ್ಪಷ್ಟ ಉದಾಹರಣೆಯಾಗಿದೆ ಎಂದು ಅವರು  ಸರಣಿ ಟ್ವೀಟ್‌ ಮಾಡಿದ್ದಾರೆ

ಬೆಳೆ ವಿಮಾ ಯೋಜನೆಗೆ ತನ್ನ ಕೊಡುಗೆ  ಕಡಿಮೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ, ಕ್ರಮ   ರೈತ ವಿರೋಧಿಯಲ್ಲದೆ ಬೇರೆಯೆನು ? ಎಂದೂ   ಅವರು ಪ್ರಶ್ನೆ  ಮಾಡಿದ್ದಾರೆ.

ಹೆಚ್ಚು ಬೆಳೆ  ಪ್ರದೇಶವನ್ನು ಬೆಳೆ ವಿಮೆಯಡಿ ತರುವುದು ಅಗತ್ಯವಾಗಿದ ಾದರ ಸರ್ಕಾರದ . ಹೊಸ ನಿರ್ಧಾರಗಳು ಲಕ್ಷಾಂತರ ರೈತರನ್ನು ಅಪಾಯಕ್ಕೆ ಸಿಲುಕಿಸುವ,   ವ್ಯಾಪ್ತಿಯನ್ನು ಕಡಿಮೆ ಮಾಡುವ ಹುನ್ನಾರವಾಗಿದೆ  ಇದು ರೈತ ಮತ್ತು ಜನ  ವಿರೋಧಿ ನೀತಿಗೆ ಹಿಡಿದ ಕನ್ನಡಿಯಾಗಿದೆ .  ತಪ್ಪು ಆದ್ಯತೆಗಳ ಮತ್ತೊಂದು ಸ್ಪಷ್ಟ ಉದಾಹರಣೆ  ಎಂದೂ  ಚಿದಂಬರಂ ಕಿಡಿಕಾರಿದ್ದಾರೆ.

 

Leave a Comment