ಬೆಳೆ ನಾಶ ಪರಿಹಾರಕ್ಕೆ ಆಗ್ರಹ

ಮೈಸೂರು,ಆ.೧೧-ಕಬಿನಿ ಜಲಾಶಯದ ನೀರು ರೈತರ ಹೊಲ ಗದ್ದೆಗಳಿಗೆ ಹರಿದು ನೂರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ರೈತರ ಬೆಳೆ ನಾಶವಾಗಿದ್ದು,ಹೆಚ್.ಡಿ.ಕೋಟೆ ತಾಲ್ಲೂಕಿನ ಬೆಳ್ತೂರು ಗ್ರಾಮದ ರೈತರು ಕಂಗಾಲಾಗಿದ್ದು ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ರೈತರು ಬ್ಯಾಂಕ್ ಹಾಗೂ ಸ್ತ್ರೀ ಶಕ್ತಿ ಸಂಘಗಳಿಂದ ಸಾಲ ತಂದು ನಾಟಿ ಮಾಡಿದ್ದರು. ಆದರೆ  ಪ್ರವಾಹದ ರಭಸಕ್ಕೆ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಆತಂಕಗೊಂಡಿದ್ದು ಸಂಕಷ್ಟಕ್ಕೆ ಸಿಲುಕಿದ್ದು  ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡದೇ ಇದ್ದಲ್ಲಿ ಆತ್ಮಹತ್ಯೆಯ ಮಾರ್ಗ ಹಿಡಿಯುವುದಾಗಿ ಎಚ್ಚರಿಸಿದ್ದಾರೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಜಲಾಶಯದಿಂದ ೭೩.೩೦೦ ಕ್ಯೂಸೆಕ್ ನೀರು ಬರುತ್ತಿದ್ದು, ೮೦.೦೦೦ ಕ್ಯೂಸೆಕ್ ಹೊರ ಹರಿವು ಬಿಟ್ಟಿದ್ದರಿಂದ ಈ ಅನಾಹುತವಾಗಿದೆ. ಜಲಾಶಯದಿಂದ ನಾಲೆಗಳಿಗೆ ೧೨೦೦ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ ಇಂದಿನ ನೀರಿನ ಮಟ್ಟ ೨೨೮೧.೪೧ ಅಡಿಯಾಗಿದ್ದು, ಜಲಾಶಯದ ಗರಿಷ್ಠ ನೀರಿನ ಮಟ್ಟ ೨೨೮೪ ಅಡಿಯಾಗಿದೆ.

ಕೇರಳದಲ್ಲಿ ಅವಾಂತರ

ಕೇರಳದಲ್ಲಿ ಎಡೆ ಬಿಡೆದೆ ಸುರಿಯುತ್ತಿರುವ ಮಳೆಯಿಂದಾಗಿ 29 ಮಂದಿ ಸಾವನ್ನಪ್ಪಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲಾ ಜಲಾಶಯಗಳು ತುಂಬಿ ಹರಿಯುತ್ತಿದ್ದ ದೇವರ ನಾಡಿನಲ್ಲಿ ಉಂಟಾದ ಪ್ರವಾಹದಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ.

Leave a Comment