ಬೆಳೆವಿಮೆ ವ್ಯಾಪ್ತಿಗೆ ಟಿಬೆಟಿ ರೈತರು

ಮುಂಡಗೋಡ,ಆ.13- ನಿರಾಶ್ರಿತ ಟಿಬೆಟನ್ ರೈತರೂ ಸಹ ಇನ್ನು ಮುಂದೆ ಬೆಳೆವಿಮಾ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಫ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಟಿಬೆಟನ್ ರೈತರನ್ನು ಸೇರಿಸಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಕ್ತ ವರ್ಷದಿಂದ ಈ ರೈತರು ಬೆಳೆವಿಮೆ ಪಡೆಯಲಿದ್ದಾರೆ. ಇದಲ್ಲದೇ ಬೆಳೆಸಾಲ, ಕೃಷಿ ಅನುಷ್ಟಾನ ಉಪಕರಣಗಳು, ಕೃಷಿ ಯಂತ್ರಗಳು, ಬೀಜ, ರಸಗೊಬ್ಬರ ಸಹಾಯಧನ ಸೌಲಭ್ಯವನ್ನು ನಿರಾಶ್ರಿತ ಟಿಬೆಟಿಯನ್ನರಿಗೆ ಕೆಲ ಷರತ್ತುಗಳೊಂದಿಗೆ ವಿಸ್ತರಿಸಲು ಆದೇಶದಲ್ಲಿ ತಿಳಿಸಲಾಗಿದೆ.

ಮುಂಡಗೊಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅವರಿಗೆ ಒಟ್ಟು 4,045 ಏಕರೆ ಭೂಮಿಯನ್ನು ಸರ್ಕಾರ ಮಂಜೂರಿ ಮಾಡಿದೆ. ಇದರಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಅವರು ಸಾಗುವಳಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಬಗ್ಗೆ ಟಿಬೆಟನ್ ರೈತರಿಗೆ ಮಾಹಿತಿ ನೀಡಲಾಗಿದೆ. ಗೋವಿನಜೋಳಕ್ಕೆ ವಿಮಾ ಕಂತು ತುಂಬುವ ಅವಧಿ ಮುಗಿದಿದ್ದು, ಭತ್ತಕ್ಕೆ ವಿಮಾ ಸೌಲಭ್ಯ ಪಡೆಯಬಹುದು. ಮುಂದಿನ ವರ್ಷದಿಂದ ಎರಡೂ ಬೆಳೆಗಳು ವಿಮಾ ವ್ಯಾಪ್ತಿಗೆ ಬರುತ್ತವೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment