ಬೆಳಗ್ಗಿನ ಉಪಹಾರ ತ್ಯಜಿಸದೀರಿ…..?

ಸಮಯದ ಅಭಾವದಿಂದಾಗಿ ನಾವು ಹೆಚ್ಚಿನ ಸಮಯಗಳಲ್ಲಿ ಉಪಹಾರವನ್ನು ಸೇವಿಸುವುದೇ ಇಲ್ಲ. ನಮ್ಮ ದೇಹಕ್ಕೆ ಈ ಆಹಾರದ ಶಕ್ತಿ ಅಗತ್ಯವಿದ್ದರೂ ನಾವು ಆ ಸಮಯದಲ್ಲಿ ಪೂರೈಸುವುದಿಲ್ಲ. ಇದರಿಂದ ಉಂಟಾಗುವ ಅಪಾಯಗಳನ್ನು ನಿಮಗೆ ಊಹಿಸಲೂ ಸಾಧ್ಯವಿಲ್ಲ….
ನಮ್ಮ ದಿನದ ಆಹಾರಗಳಲ್ಲಿ ಬೆಳಗಿನ ಉಪಾಹಾರವೇ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ರಾತ್ರಿಯ ನಿದ್ದೆಯ ಅವಧಿಯಲ್ಲಿ ಶರೀರ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಹಲವು ಕಾರ್ಯಗಳು ನಡೆದು ದೇಹದ ಶಕ್ತಿ ಕಳೆದುಕೊಂಡಿರುತ್ತದೆ. ಒಂದು ರೀತಿಯಲ್ಲಿ ಅಷ್ಟು ಹೊತ್ತಿಗಾಗಿ ಉಪವಾಸವಿದ್ದಂತೆ. ಹಾಗಾಗಿ ಬೆಳಗಿನ ಉಪಹಾರ ಕಡ್ಡಾಯವಾಗಿ ಸೇವಸಿ. ಈ ಉಪಾಹಾರ ಉತ್ತಮ ಪೌಷ್ಟಿಕ, ಪ್ರೋಟೀನುಯುಕ್ತವಾಗಿರುವುದು ಅಗತ್ಯ. ಬೆಳಗಿನ ಬ್ರೇಕ್ಫಾಸ್ಟ್ ಅಪ್ಪಿತಪ್ಪಿಯೂ ಬ್ರೇಕ್ ಮಾಡಬೇಡಿ.
ಉಪಾಹಾರವನ್ನು ತ್ಯಜಿಸುವ ಮಹಿಳೆಯರಲ್ಲಿ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್ ಈ ತಿಂಗಳು ಪ್ರಕಟಿಸಿರುವ ನಿಯತಕಾಲಿಕೆಯಲ್ಲಿ ಮಹಿಳೆಯರು ಯಾರು ಉಪಾಹಾರವನ್ನು ತ್ಯಜಿಸುತ್ತಾರೋ, ಅವರಿಗೆ ಸಾಮಾನ್ಯವಾಗಿ ಉಪಾಹಾರವನ್ನು ಸೇವಿಸುವ ಮಹಿಳೆಯರಿಗೆ ಬರುವುದಕ್ಕಿಂತ ಹೆಚ್ಚಾಗಿ ಮಧುಮೇಹ ಬರುವ ಸಾಧ್ಯತೆ ಆರು ಪಟ್ಟು ಹೆಚ್ಚಂತೆ. ಅದರಲ್ಲಿಯೂ ಇವರಿಗೆ ಟೈಪ್ ೨ ಮಧುಮೇಹ ಬರುವ ಸಾಧ್ಯತೆ ಹೆಚ್ಚಂತೆ.
ಉಪಹಾರವನ್ನು ನೀವು ತ್ಯಜಿಸಿದಾಗ, ಮೆದುಳು ಕಡಿಮೆ ಪ್ರಮಾಣದಲ್ಲಿ ರಕ್ತ ಮತ್ತು ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ ಇದು ಅನೇಕ ಅರಿವಿನ ಕಾರ್ಯಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.
ಯಾರು ಉಪಾಹಾರವನ್ನು ಸೇವಿಸುತ್ತಾರೋ, ಅವರಲ್ಲಿ ಸ್ಮರಣೆ ಶಕ್ತಿಗೆ ಸಂಬಂಧಿಸಿದ ಮನೋಜನ್ಯ ಅಂಶಗಳು ಸರಿಯಾಗಿ ಕೆಲಸ ಮಾಡುತ್ತವೆ ಎಂದು ತಿಳಿದುಬಂದಿದೆ. ಸರಳವಾಗಿ ಹೇಳಬೇಕೆಂದರೆ ಉಪಾಹಾರ ಸೇವಿಸುವವರಲ್ಲಿ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗಿರುತ್ತದೆ!
ಹೆಚ್ಚು ಸಮಯಗಳಿಂದ ಖಾಲಿ ಹೊಟ್ಟೆಯಲ್ಲಿ ಇರುವುದು ಆಮ್ಲತೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಇದರಿಂದ ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಉಂಟಾಗುತ್ತದೆ.
ಬೆಳಗ್ಗಿನ ಸಮಯದಲ್ಲಿ ಉಪಹಾರವನ್ನು ತ್ಯಜಿಸುವವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಾರೆ ಎಂಬುದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ದೇಹದಲ್ಲಿ ಚಯಾಪಚಯ ವ್ಯವಸ್ಥೆಯಲ್ಲಿ ಬದಲಾವಣೆಯುಂಟಾಗುವುದೇ ಹೃದಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ.

Leave a Comment