ಬೆಳಗಾವಿ ಉಪರಾಜಧಾನಿ ಹೇಳಿಕೆಗೆ ಖಂಡನೆ

ಕಲಬುರಗಿ ಆ6: ರಾಜ್ಯದ ಉಪರಾಜಧಾನಿ ಸ್ಥಾನಮಾನವನ್ನು ಬೆಳಗಾವಿಗೆ ನೀಡುವ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಯನ್ನು ಹೈದ್ರಾಬಾದ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಬಲವಾಗಿ  ಖಂಡಿಸಿದೆ.

ಅಖಂಡ ಕರ್ನಾಟಕದ ಪರವಾಗಿ ನಿಂತಿರುವ ಹೈದರಾಬಾದ ಕರ್ನಾಟಕದ ಪ್ರದೇಶದ ವಿಭಾಗೀಯ ಕೇಂದ್ರ ಕಲಬುರಗಿ ನಗರಕ್ಕೆ ಉಪ ರಾಜಧಾನಿ ಸ್ಥಾನ ನೀಡುವಂತೆ ಆಗ್ರಹಿಸಿ ಒಕ್ಕೂಟದ ವಿವಿಧ ಸಂಘಟನೆಯವರು ಆಗಸ್ಟ್ ಎರಡನೆಯ ವಾರದಿಂದ ನಿರಂತರ ಹೋರಾಟ ಆರಂಭಿಸುವರು ಎಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಮುಂಬೈ ಕರ್ನಾಟಕದವರು ಉತ್ತರ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದರು. ಹೈಕ ಭಾಗದ ಜನತೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಬಂದ್ ವಿಫಲವಾಯಿತು.ಪ್ರತ್ಯೇಕ ರಾಜ್ಯದ ಕೂಗು ಎದ್ದಿರುವ ಹಿನ್ನೆಲೆಯಲ್ಲಿ ಅದನ್ನು  ಶಮನಮಾಡುವ ಉದ್ದೇಶದಿಂದ ಮುಖ್ಯಮಂತ್ರಿಗಳು ಬೆಳಗಾವಿಗೆ ಉಪರಾಜಧಾನಿ ನೀಡುವ ಬಗ್ಗೆ ಮಾತನಾಡಿದ್ದಾರೆ.ಇದು ಸರ್ವಥಾ ಖಂಡನೀಯ ಎಂದರು

ಮಹಾರಾಷ್ಟ್ರದ ರಾಜಧಾನಿ ಮುಂಬೈಯಿಂದ ಬಹುದೂರವಿರುವ ಹಿಂದುಳಿದ ಪ್ರದೇಶವಾದ

ನಾಗಪುರವನ್ನು ಉಪರಾಜಧಾನಿಯನ್ನಾಗಿ  ಮಾಡಲಾಗಿದೆ. ಇದೇ ಮಾನದಂಡವನ್ನು ಇಟ್ಟುಕೊಂಡು ಕಲಬುರಗಿಯನ್ನು ಉಪರಾಜಧಾನಿಯನ್ನಾಗಿ ಮಾಡುವದು ಸೂಕ್ತ ಮತ್ತು ನ್ಯಾಯಯುತ.

ಸರಕಾರದ ಎಲ್ಲ ಉಪಕಚೇರಿಗಳು, ಹೈಕ ವಿಶೇಷಕೋಶದ ಕೆಂದ್ರ  ಕಚೇರಿಯನ್ನು ಕಲಬುರಗಿಯಲ್ಲಿಯೇ ಆರಂಭಿಸುವಂತೆ ಒಕ್ಕೂಟ ಆಗ್ರಹಿಸುತ್ತದೆ ಎಂದರು…

Leave a Comment