ಬೆಲ್ ಬಾಟಂ’ @ 125 ಡೇಸ್ ನಾಟ್‍ಔಟ್

ಬೆಂಗಳೂರು, ಜುಲೈ 10 – ಕನ್ನಡ ಚಿತ್ರಗಳು ಆರ್ಧ ಶತಕ ಪೂರೈಸುವುದೇ ಕಡಿಮೆಯಾಗಿರುವ ದಿನ ದಿನಮಾನದಲ್ಲಿ ರೆಟ್ರೋಕತೆ ಹೊಂದಿರುವ ‘ಬೆಲ್‍ಬಾಟಂ’  ಚಿತ್ರ ಸತತ 125 ದಿವಸ ಯಶಸ್ವಿ ಪ್ರದರ್ಶನ ಕಂಡಿದ್ದು, ಇದೇ ಸಂತಸದಲ್ಲಿ  ಕಲಾವಿದರು, ತಂತ್ರಜ್ಞರನ್ನು ನಿರ್ಮಾಪಕರು ಅಭಿನಂದಿಸಿ ಗೌರವಿಸಿದ್ದಾರೆ  ಇದೇ ಸಂದರ್ಭದಲ್ಲಿ ಬೆಲ್ ಬಾಟಂ ಚಿತ್ರದ ‘ಕುಸುಮ’ ಪಾತ್ರದ ಮೂಲಕ ಗಮನ ಸೆಳೆದಿರುವ ನಾಯಕಿ ಹರಿಪ್ರಿಯಾ, ಸಿನೆಮಾದಲ್ಲಿ ತಾವು ಕಳ್ಳಭಟ್ಟಿ ಮಾರಿದ್ದರೂ, ಅದರ ವಾಸನೆಯನ್ನೂ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ

“ರಂಗಭೂಮಿ ನಟನಾಗಿ ನಿರ್ಮಾಣ ಮಾಡುವ ಬಯಕೆ ಇತ್ತು. ಅದರಂತೆ ಧೈರ್ಯ ಮಾಡಿ ಹಣ ಹೂಡಿದ್ದು ಸಾರ್ಥಕವಾಗಿದೆ ಇದಕ್ಕೆಲ್ಲಾ ಅಮ್ಮನ ಆರ್ಶಿವಾದ ಕಾರಣ  ಈ ಯಶಸ್ಸು ಮತ್ತಷ್ಟು ಉತ್ತಮ ಚಿತ್ರಗಳ ನಿರ್ಮಾಣಕ್ಕೆ ಸ್ಫೂರ್ತಿ ನೀಡಿದೆ ‘ಏತಕೆ ಕನಸಿನಲ್ಲಿ’, ದಿವ್ಯಾಂಗರು ಹಾಡಿರುವ ‘ಸಿದ್ದಯ್ಯ ಸ್ವಾಮಿ’ ಗೀತೆಗಳು ಜನಪ್ರಿಯವಾಗಿವೆ” ಎಂದು ನಿರ್ಮಾಪಕ ಕೆ.ಸಿ. ಸಂತೋಷ್‍ಕುಮಾರ್ ತಿಳಿಸಿದ್ದಾರೆ

ನೂತನ ಸಂಸದ ತೇಜಸ್ವಿಸೂರ್ಯ, ನಟರಾದ ರಕ್ಷಿತ್‍ಶೆಟ್ಟಿ, ಕಿಶೋರ್, ಯೋಗರಾಜ್ ಭಟ್, ಚಿತ್ರತಂಡದವರ ಕುಟುಂಬ ಸದಸ್ಯರು, ಚಿತ್ರದ ನಾಯಕ ರಿಶಬ್‍ಶೆಟ್ಟಿ ಸೇರಿದಂತೆ ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

Leave a Comment