ಬೆಲೆ ಕುಸಿತ ಖಂಡಿಸಿ ಪ್ರತಿಭಟನೆ

ಬ್ಯಾಡಗಿ, ಫೆ 12- ಸ್ಥಳೀಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರಗಳಲ್ಲಿ ದಿಡೀರ್ ಕುಸಿತಗೊಂಡಿದೆ ಎಂದು ಆರೋಪಿಸಿ ಮಾರಾಟಕ್ಕೆ ಬಂದಿದ್ದ ರೈತರು ಕೆಲಕಾಲ ಪ್ರತಿಭಟನೆ ನಡೆಸಿದರಲ್ಲದೇ ಎಪಿಎಂಸಿ ಕಛೇರಿಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ನಡೆಯಿತು.
ಕಳೆದ ಗುರುವಾರವಷ್ಟೇ 8 ರಿಂದ 11 ಸಾವಿರದವರೆಗೆ ಮಾರಾಟವಾಗಿದ್ದ ಕಡ್ಡಿ ತಳಿ ಮೆಣಸಿನಕಾಯಿ, ಸೋಮವಾರ ಕೇವಲ 6 ರಿಂದ 9 ಸಾವಿರಕ್ಕೆ ಮಾರಾಟವಾಗಿದ್ದು ಪ್ರತಿ ಕ್ವಿಂಟಲ್‍ಗೆ ಸುಮಾರು 2 ಸಾವಿರ ರೂ.ಗಳಷ್ಟು ಕಡಿಮೆಯಾಗಿದೆ ಎಂಬುದು ರೈತರ ಆರೋಪವಾಗಿತ್ತು, ಎಪಿಎಂಸಿ ಕಛೇರಿ ನುಗ್ಗಿದ ಸಾವಿರಾರು ರೈತರು ವರ್ತಕರು ಸೇರಿದಂತೆ ಎಪಿಎಂಸಿ ಸಿಬ್ಬಂದಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ದರಗಳನ್ನು ಹಾಕಿಕೊಡುವಂತೆ ಒತ್ತಾಯ: ಪ್ರತಿ ಎಕರೆಗೆ 70 ಸಾವಿರಕ್ಕೂ ಅಧಿಕ ಹಣವನ್ನು ವ್ಯಯಿಸಿದ್ದೇವೆ ಆದರೆ ಇಂದಿನ ದರಕ್ಕೆ ಮೆಣಸಿನಕಾಯಿ ಮಾರಾಟವಾದರೇ ಹಾಕಿದ ಬಂಢವಾಳ ಕೂಡ ಮರಳುವುದಿಲ್ಲ, ವ್ಯಾರಾರಸ್ಥರು ಎಲ್ಲರೂ ಮಾತಾಡಿಕೊಂಡು ಉದ್ದೇಶಪೂರ್ವಕವಾಗಿ ದರಗಳನ್ನು ಕಡಿತಗೊಳಿಸಿದ್ದಾರೆ ರೈತನನ್ನು ನಷ್ಟಗೊಳಿಸಿದ ನೀವುಗಳು ಎಂದಿಗೂ ಉದ್ಧಾರವಾಗುವುದಿಲ್ಲ ಎಂದು ಆರೋಪಿಸಿದ ಅವರು ಪ್ರತಿ ಕ್ವಿಂಟಲ್‍ಗೆ ಸರಾಸರಿ 2 ಸಾವಿರ ರೂ.ಗಳನ್ನು ಪ್ರತಿ ಲಾಟಿಗೆ ಹಾಕಿಕೊಡುವಂತೆ ಆಗ್ರಹಿಸಿದರು.
ರೈತರನ್ನು ಸಮಾಧಾನಪಡಿಸಲು ಹರಸಾಹಸಪಟ್ಟ ಪೊಲೀಸರು: ಮುಂಜಾಗ್ರತಾ ಕ್ರಮವಾಗಿ, ಪೊಲೀಸ್ ಇಲಾಖೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 2 ತುಕಡಿಗಳು ಹಾಗೂ ನೂರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಿತ್ತಾದರೂ, ನೆರದಿದ್ದ ರೈತರನ್ನು ಸಮಾಧಾನಪಡಿಸಲು ಹರಸಾಹಸಪಡಬೇಕಾಯಿತು, ಎಪಿಎಂಸಿ ಕಛೇರಿ ಗೇಟಿನಿಂದ ಆಚೆಯೇ ರೈತರನ್ನು ಕಟ್ಟಿ ಹಾಕಿ ಪೊಲೀಸರು ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಿದರು.
ಮತ್ತೊಮ್ಮೆ ಟೆಂಡರ್‍ಗಡಿ ನ್ಯಾಮಗೌಡ ಸ್ಪಷ್ಟನೆ: ದರಗಳಲ್ಲಿ ಹೇಳಿಕೊಳ್ಳುವಂತಹ ಕುಸಿತವಾಗಿಲ್ಲ, ಕಳೆದ ವಾರಕ್ಕಿಂತ 500 ರಿಂದ 1 ಸಾವಿರ ರೂಗಳವರೆಗೆ ಮಾತ್ರ ಕಡಿಮೆಯಾಗಿದೆ, ಆವಕ ಹೆಚ್ಚಾದ ಹಿನ್ನೆಲೆಯಲ್ಲಿ ಇದು ಸಹಜ ಪ್ರಕ್ರಿಯೆಯಾಗಿದ್ದು ರೈತರು ಸುಧಾರಿಸಿಕೊಳ್ಳುವಂತೆ ಮನವಿ ಮಾಡಿದರಲ್ಲದೇ ತಮ್ಮ ದರ ಕಡಿಮೆ ಎನಿಸಿದಲ್ಲಿ ನಾಳೆ ಟೆಂಡರ್ ಇಡುವಂತೆ ಮನವಿ ಮಾಡಿದರು.
ಮಾರುಕಟ್ಟೆ ರಜೆ ಘೋಷಣೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ:ಗುರುವಾರ ಫೆ.14 ರಂದು ಸ್ಥಳೀಯ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಮಾರುಕಟ್ಟೆಗೆ ರಜೆ ಘೋಷಣೆಯಾದ ಹಿನ್ನೆಲೆಯಲ್ಲಿ ಎರಡು ವಾರಕ್ಕಾಗುಷ್ಟು ಮೆಣಸಿನಕಾಯಿ ಮಾಲು ಒಂದೇ ದಿವಸ ಮಾರುಕಟ್ಟೆಗೆ ಮಾರಾಟಕ್ಕೆ ಆಗಮಿಸಿದ್ದರಿಂದ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ಹೆಸರೇಳಲಿಚ್ಚಿಸಿದ ವ್ಯಾಪಾರಸ್ಥರು ಪತ್ರಿಕೆಗೆ ತಿಳಿಸಿದರು.
ಸಂಧಾನ ವಿಫಲ: ಪ್ರತಿಭಟನೆಯ ನಡುವೆಯೇ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯು ವಿಫಲವಾಯಿತು. ರೈತರನ್ನುದ್ಧೇಶಿಸಿ ಮಾತನಾಡಿದ ಅವರು, ದರಗಳಲ್ಲಿ ಗಣನೀಯ ಪ್ರಮಾಣದ ಕುಸಿತವಾಗಿಲ್ಲ ತಮಗೆ ತಪ್ಪು ಮಾಹಿತಿ ರವಾನೆಯಾಗಿದೆ, ಬಹಳಷ್ಟು ರೈತರು ದರ ಸೂಕ್ತವೆಂದು ಕೊಡಲು ನಿರ್ಧರಿಸಿದ್ದಾರೆ ಯಾವುದೇ ಕಾರಣಕ್ಕೂ ಮದ್ಯಂತರದಲ್ಲಿ ದರಗಳನ್ನು ಹೆಚ್ಚಿಸಲು ಸಾಧ್ಯವಿಲ್ಲ ನಾಳೆ ಮತ್ತೆ ಟೆಂಡರ್‍ಗೆ ಇಡುವಂತೆ ಮನವಿ ಮಾಡಿದರು. ಇದಕ್ಕೊಪ್ಪದ ರೈತರು ಪ್ರತಿಭಟನೆಯನ್ನು ಮುಂದುವರೆಸಿದರು.
ಸೋಮವಾರ ಮಾರುಕಟ್ಟೆ ದರ: ಸೋಮವಾರ ಮಾರುಕಟ್ಟೆಗೆ ಒಟ್ಟು 255083 ಚೀಲ ಆವಕವಾಗಿದ್ದು ಬ್ಯಾಡಗಿ ಕಡ್ಡಿತಳಿ ಪ್ರತಿ ಕ್ವಿಂಟಲ್‍ಗೆ ಕನಿಷ್ಟ 850, ಗರಿಷ್ಟ 10800 ಸರಾಸರಿ 7924 ದರಗಳಿಗೆ ಮಾರಾಟವಾದರೇ, ಡಬ್ಬಿತಳಿ ಕನಿಷ್ಟ 1025ಗರಿಷ್ಟ 13589 ಸರಾಸರಿ 9687 ಹಾಗೂ ಗುಂಟೂರ ತಳಿ ಕನಿಷ್ಟ 500 ಗರಿಷ್ಟ 7936 ಸರಾಸರಿ 4630

Leave a Comment