ಬೆಲೆ ಎರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಅಳ್ನಾವರ,ಸೆ11 ಪೆಟ್ರೋಲ್, ಡೀಸೆಲ್ ದರ ಏರಿಕೆ ಮತ್ತು ಹಣದುಬ್ಬರ ಏರಿಕೆ ಖಂಡಿಸಿ ಕಾಂಗ್ರೆಸ ಪಕ್ಷ ಕರೆ ನೀಡಿದ ಭಾರತ ಬಂದ ಪ್ರಯುಕ್ತ ಇಲ್ಲಿನ ಬ್ಲಾಕ್ ಕಾಂಗ್ರೆಸ ಮತ್ತು ಕಲಘಟಗಿ ಯುಥ ಕಾಂಗ್ರೆಸ್ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಗಣೇಶ ದೇವಸ್ಥಾನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಪಟ್ಟಣ ಪಂಚಾಯ್ತಿ ಕಚೇರಿ ಎದುರು ರಸ್ತೆ ಮೇಲೆ ದರಣಿ ಕುಳಿತು ಕೇಂದ್ರ ಸರ್ಕಾರ ಬೆಲೆ ಎರಿಕೆ ದೋರಣೆಯನ್ನು ಖಂಡಿಸಿದರು. ‘ಮೋದಿ ಹಟಾವೊ ದೇಶ ಬಚಾವೊ’ ಹಾಗೂ ಕೇಂದ್ರದ ‘ಬಿಜೆಪಿ ಸರ್ಕಾರಕ್ಕೆ ದಿಕ್ಕಾರ’ ಮುಂತಾದ ಘೋಷಣೆಗಳನ್ನು ಕೂಗಲಾಯಿತು. ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬಸ್ ಸಂಚಾರ ಇರಲಿಲ್ಲ. ಶೀಘ್ರವೆ ಬೆಲೆ ಏರಿಕೆ ಇಳಿಸಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿಗಳಿಗೆ ನೀಡಿದ ಮನವಿಯನ್ನು ಉಪ ತಹಶೀಲ್ದಾರ ಟಿ.ಬಿ. ಬಡಿಗೇರ ಸ್ವೀಕರಿಸಿದರು
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ, ಜಿಲ್ಲಾ ಪಂಚಾಯ್ತಿ ಸದಸ್ಯ ನಿಂಗಪ್ಪಾ ಘಾಟಿನ್, ಶಿವಾನಂದ ಹೊಸಕೇರಿ, ವಿಶ್ವಂಬರ ಬನಸಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಬಾಗ್ಯವತಿ ಕುರುಬರ, ಮಧು ಬಡಸ್ಕರ, ಶಶಿಧರ ಇನಾಮದಾರ, ನಿಂಗಪ್ಪ ಬೇಕ್ವಾಡಕರ, ಕಿರಣ ಗಡಕರ, ಹನಮಂತ ಶಿಂದೆ ಮುಂತಾದವರು ಮಾತನಾಡಿ, ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಎರುತ್ತಿದೆ ಇದರಿಂದ ಜನ ಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ. ದಿನ ಬಳಕೆ ವಸ್ತುಗಳ ಬೆಲೆ ಬಡವರ ಪಾಲಿಗೆ ಬರೆ ಏಳೆದಂತೆ ಆಗಿದೆ. ನೋಟ ಬ್ಯಾನ್ ಕ್ರಮದಿಂದ ಬದಲಾವಣೆ ಅಗಲಿಲ್ಲ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಕಾರಣ ಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವದು ಖಚಿತ ಎಂದರು.
ಪರಮೇಶ್ವರ ತೇಗೂರ, ವಿಯನಾಕ ಕುರುಬರ, ಪರಶುರಾಮ ಬೇಕನೇಕರ, ಉಸ್ಮಾನ ಬಾತಖಂಡಿ, ಮಲ್ಲಪ್ಪ ಗಾಣಿಗೇರ, ಮಂಜುನಾಥ ಕುಳೆನ್ನವರ, ದೇವರಾಜ ಪರಸಣ್ಣವರ, ಅನ್ವರಖಾನ ಬಾಗೇವಾಡಿ, ಮಗೆಪ್ಪಾ ಮಜಲಿ, ಎಂ.ಎಂ. ತೇಗೂರ, ಡಿ.ಬಿ. ಪಾಟೀಲ, ಇಸ್ಮಾಯಲ್ ದೇವರಾಯಿ, ಸಾಜಿದ ಅವರಾದಿ, ತಮೀಮ ತೇರಗಾಂವ, ಹಸೇನಲಿ ಶೇಖ, ಅಶೋಕ ಜೊಡಟ್ಟಿ, ಮುರಗೇಶ ಇನಾಮದಾರ, ಪುಂಡಲಿಕ ಭೋವಿ, ಎಸ್.ಎಂ ಜಾಧವ, ಇದ್ದರು.

Leave a Comment