ಬೆನ್ನ ಮೇಲೆ ಮೋದಿ!

ಅಭಿಮಾನದ ಪರಾಕಾಷ್ಠೆ
ಹಳೆಯಂಗಡಿ, ಸೆ.೯- ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನವನ್ನು ಪ್ರಕಟಿಸಲು ಅಭಿಮಾನಿಯೊಬ್ಬರು ತಮ್ಮ ಬೆನ್ನ ಮೇಲೆ ಮೋದಿಯ ಭಾವಚಿತ್ರವನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕಿನ್ನಿಗೋಳಿ ಸಮೀಪದ ಎಸ್‌ಕೋಡಿ ನಿವಾಸಿ, ಬಿಜೆಪಿ ಕಿನ್ನಿಗೋಳಿ ಶಕ್ತಿಕೇಂದ್ರದ ಪದಾಧಿಕಾರಿಯಾದ ಅಮಿತ್ ಶೆಟ್ಟಿ ಎನ್ನುವ ಯುವಕನೇ ಅಭಿಮಾನದ ಪರಾಕಾಷ್ಠೆ ಮೆರೆದವರು.
ಅಮಿತ್ ಹಿಂದಿನಿಂದಲೂ ಮೋದಿ ಅಭಿಮಾನಿಯಾಗಿದ್ದು ಅವರ ವಿಚಾರಧಾರೆಗಳನ್ನು ಫಾಲೋ ಮಾಡುತ್ತಿದ್ದವರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿ ಗಾದಿ ಏರಬೇಕೆಂದು ಬಯಸಿರುವ ಅಮಿತ್ ತನ್ನ ಬೆನ್ನ ಮೇಲೆ ಮೋದಿಯ ಬೃಹತ್ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಯೂಥ್ ಐಕಾನ್ ಆಗಿದ್ದಾರೆ. ಬರೋಬ್ಬರಿ ಐದಾರು ಗಂಟೆಗಳ ಕಾಲ ಇದಕ್ಕಾಗಿ ಒಂದೇ ಭಂಗಿಯಲ್ಲಿ ನಿಂತು ಟ್ಯಾಟೂ ಹಾಕಿಸಿ ಜೈ ಮೋದಿ ಅನ್ನುತ್ತಿದ್ದಾರೆ ಅಮಿತ್. ಇಷ್ಟೇ ಅಲ್ಲದೆ ಕೆಳಗೆ ಬಿಜೆಪಿಯ ಕಮಲ ಚಿಹ್ನೆಯನ್ನೂ ಹಚ್ಚೆ ಹಾಕ್ಕೊಂಡಿದ್ದಾರೆ. ಎಜೆ ಟ್ಯಾಟೂ ಸ್ಟುಡಿಯೋ ಕಿನ್ನಿಗೋಳಿ ಇದರ ಗಿರಿ ಎ ಜೆ ಅವರು ಟ್ಯಾಟೂ ಮೂಲಕ ಮೋದಿಯವರನ್ನು ಪಡಿಮೂಡಿಸಿ ಸೈ ಅನ್ನಿಸಿಕೊಂಡಿದ್ದಾರೆ. ಸದ್ಯ ಅಮಿತ್ ಮತ್ತವರ ಬೆನ್ನಿನ ಮೋದಿ ಟ್ಯಾಟೂ ಜನಾಕರ್ಷಣೆಗೆ ಕಾರಣವಾಗಿದೆ.

Leave a Comment