ಬೆನ್ನು ಕ್ಷುದ್ರಗ್ರಹದಲ್ಲಿ ನೀರಿನ ಕಣಗಳ ಪತ್ತೆ

  • ಉತ್ತನೂರು ವೆಂಕಟೇಶ್

ನಾಸಾದ ಓರಿಸಿಸ್-ರೆಕ್ಸ್ ಬಾಹ್ಯಾಕಾಶ ನೌಕೆ ಭೂಮಿಗೆ ಕಳುಹಿಸಿರುವ  ಬೆನ್ನು ಕ್ಷುದ್ರ ಗ್ರಹದ ಮಾದರಿಗಳ ಅಧ್ಯಯನ ನಡೆಸಿರುವ ವಿಜ್ಞಾನಿಗಳ ತಂಡ ಆ ಗ್ರಹದಲ್ಲಿ ನೀರಿನ ಅಂಶಗಳು ಇರುವುದನ್ನು ಪತ್ತೆ ಹಚ್ಚಿದೆ.

೨೦೧೬ ರಲ್ಲಿ ನಾಸಾ ಉಡಾವಣೆ ಮಾಡಿದ ಓರಿಸಿಸ್-ರೆಕ್ಸ್ ಬಾಹ್ಯಾಕಾಶ ನೌಕೆ ಈಗ ಬೆನ್ನು ಕ್ಷುದ್ರಗ್ರಹವನ್ನು ೧೯ ಕಿ.ಲೋ ಮೀಟರ್ ಅಂತರದಿಂದ ಶೋಧನೆ ಮಾಡುತ್ತಿದೆ.

ನೌಕೆಯ ೨ ಸ್ಪೋಟೋ ಮೀಟರ್ ಗಳು ಗ್ರಹದತ್ತ ಮುಖ ಮಾಡಿದ್ದು, ಗ್ರಹದ ಮೇಲ್ಮೆ ಶೋಧನೆಯನ್ನು ನಡೆಸುತ್ತಿವೆ.

ನೌಕೆ ಈವರೆಗೆ ಭೂಮಿಗೆ ರವಾನಿಸಿರುವ ಮಾದರಿಗಳ ಅಧ್ಯಯನದಿಂದ ಗ್ರಹದಲ್ಲಿ ನೀರಿನ ಅಂಶವಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

16-vichara-3

ಬೆನ್ನು ಕ್ಷುದ್ರಗ್ರಹದ ನಿಗೂಢತೆಯ ಶೋಧನೆಗೆಂದು ನಾಸ ೨೦೧೬ ರಲ್ಲಿ ಉಡಾವಣೆ ಮಾಡಿದ್ದ ಓಸಿರಿಸ್-ರೆಕ್ಸ್ ಬಾಹ್ಯಾಕಾಶ ನೌಕೆ  ೨.೨೫ ದಶ ಲಕ್ಷ
ಕಿಮೀ. ಪ್ರಯಾಣಿಸಿ ಈಗ ಗ್ರಹದಿಂದ ಕೇವಲ ೧೯ ಕಿಮೀ ಅಂತರದಿಂದ ಗ್ರಹದ ಶೋಧನೆಯಲ್ಲಿ ತೊಡಗಿದೆ.

ಇದೇ ವರ್ಷ ಆಗಸ್ಟ್ ನಿಂದ ಡಿಸೆಂಬರ್ ಮೊದಲ ವಾರದವರೆವಿಗೆ  ಗ್ರಹದ ಮೇಲ್ಮೈ ಶೋಧನೆಯಲ್ಲಿ ಸಂಗ್ರಹಿಸಿದ ಮಾದರಿಗಳ ಅಧ್ಯಯನ ನಡೆಸಿರುವ  ವಿಜ್ಞಾನಿಗಳ ತಂಡ ,ಆ ಮರಿಗಳಲ್ಲಿ ಆಮ್ಲ ಜನಕ ಮತ್ತು ಜಲಜನಕದ ಕಣಗಳಿಂದ ಕೂಡಿರುವ ಹೈಡ್ರಾಕ್ಸಿಲಿನ್ ಅನ್ನು ಪತ್ತೆ ಹಚ್ಚಿದೆ. ಈ ಪತ್ತೆಯಿಂದ ಒಂದಾನೊಂದು ಕಾಲ ಘಟ್ಟದಲ್ಲಿ  ಅಲ್ಲಿ ನೀರು ಇದ್ದಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ.

ಈಗ ಓರಿಸಿಸ್-ರೆಕ್ಸ್ ಬಾಹ್ಯಾಕಾಶ ನೌಕೆ ಭೂಮಿಗೆ ಕಳುಹಿಸಿರುವ  ಬೆನ್ನು ಕ್ಷುದ್ರ ಗ್ರಹದ ಮಾದರಿಗಳ ಅಧ್ಯಯನದಿಂದ ಬಾಹ್ಯಾಕಾಶದಲ್ಲಿ ಕ್ಷುದ್ರಗ್ರಹಗಳಲ್ಲಿ ಏನಾಗುತ್ತಿದೆ ಎಂಬ ಆಲೋಚನೆ ಮತ್ತು ಪ್ರಯೋಗಾಲಯಗಳಲ್ಲಿ ಉಲ್ಕೇಗಳ ಕುರಿತಂತೆ ವಿಜ್ಞಾನಿಗಳ ಅಧ್ಯಯನ ನಡುವೆ ಸಂಬಂಧವಿರುವುದು ತಿಳಿದು ಬರುತ್ತದೆ ಎಂದು  ಆರಿಜೋನಾ ವಿಶ್ವವಿದ್ಯಾನಿಲಯದ ಲೂನಾರ್ ಮತ್ತು ಪ್ಲಾನಟೋರಿಯಮ್ ಪ್ರಯೋಗಾಲಯದ ಹಿರಿಯದ ಹಿರಿಯ ಸಂಶೋಧಕಕ ವಿಜ್ಞಾನಿ ಎಲ್ಲೇನ್ ಹೋವೆಲ್ ಹೇಳಿದ್ದಾರೆ.

ಜಲಜನಕ ಯುಕ್ತ ಖನಿಜಗಳು ಬೆನ್ನು ಉಪಗ್ರಹದಲ್ಲಿ ಇರುವುದನ್ನು ಓರಿಸಿಸ್ ನೌಕೆ ಶೋಧನೆ ಖಚಿತಪಡಿಸಿದ್ದು ಈ ನಿಗೂಢ ಕ್ಷುದ್ರಗ್ರಹದಲ್ಲಿ ನೀರಿನ ಅಂಶ ಇರುವ ಬಗ್ಗೆ ನಾಸಾ ವಿಜ್ಞಾನಿಗಳು ಇನ್ನಷ್ಟು ತನಿಖೆಗೆ ಮುಂದಾಗಲು ಕಾರಣವಾಗಿದೆ.

Leave a Comment