ಬೆಚ್ಚಿ ಬೀಳುತ್ತಿದೆ ಹುಬ್ಬಳ್ಳಿ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಎಂದು….?

ಹುಬ್ಬಳ್ಳಿ, ಸೆ 22-ಚೂರಿ ಇರಿತ ಪ್ರಕರಣಗಳು ಮನಸ್ಸಿನಿಂದ ಮಾಸುವ ಮೊದಲೇ ಮತ್ತೊಂದು ಶೂಟೌಟ್ ನಡೆದು ಅವಳಿನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.ವಾಣಿಜ್ಯನಗರಿ ಖ್ಯಾತಿಯ ಹುಬ್ಬಳ್ಳಿ ಕಳೆದ ದಿನಗಳಿಂದ ಹರಿಯುತ್ತಿರುವ ನೆತ್ತರಿನಿಂದ ತಲ್ಲಣಗೊಂಡಿದೆ‌.ಅಲ್ಲದೆ ಪುಂಡಪೋಕರಿಗಳ ಅಟ್ಟಹಾಸಕ್ಕೆ ಕಡಿವಾಣವಿಲ್ಲವಾಗಿದೆ.
ಚಂಡು, ಗಿಲ್ಲಿ ದಾಂಡು,ಆಡುತ್ತಿದ್ದ ಮಕ್ಕಳು ಇಂದು ಚಾಕು ಚೂರಿಯಿಂದ ಮಾತನಾಡುತ್ತಿದ್ದಾರೆ.ಶಾಂತಿ ಪ್ರೀಯವಾಗಿದ್ದ ಹುಬ್ಬಳ್ಳಿ ಮಹಾನಗರ ಇಂದು ಅಶಾಂತಿಯ ತಾಣವಾಗಿ ನಿರ್ಮಾಣವಾಗಿದೆ. ಕ್ಷುಲ್ಲಕ ಕಾರಣವಿದ್ದರೂ ನೆತ್ತರು ಹರಿಯುತ್ತದೆ.
ಹು-ಧಾ ಮಹಾನಗರ ಸುಮಾರು ದಿನಗಳಿಂದ ಸಂಭವಿಸುತ್ತಿರುವ ಅಮಾನವೀಯ ಘಟನೆಗಳು ಲಗಾಮ ಇಲ್ಲದ ಕುದುರೆಯಂತಾಗಿ.ಮಹಾನಗರದ ಶಾಂತಿಗೆ ದಕ್ಕೆ ತಂದಿದೆ.
ರಾಜ್ಯಾದ್ಯಂತ ಹೆಸರು ವಾಸಿಯಾಗಿರುವ ಹುಬ್ಬಳ್ಳಿಯ ಗಣೇಶ ಉತ್ಸವ ಕೆಲವು ಕುಟುಂಬಗಳಿಗೆ ಮರೆಯಲಾಗದ ನೋವನ್ನು ತಂದಿಟ್ಟಿದೆ‌‌.
ಆಟವಾಡುತ್ತ ಬೆಳೆದು, ಹುಬ್ಬಳಿಗೆ ಕಲೆಯಲು ಹೋದ ಮಗ ಗಣೇಶನ ನೋಡಲು ಹೋಗಿ ಹೆಣವಾಗಿ ಮನೆಗೆ ಬಂದ ಎಂಬುವಂತ ಮನಕಲಕುವಂತ ಮಾತು ಹೆತ್ತಮಗನನ್ನು ಕಳೆದುಕೊಂಡ ಹೆತ್ತವರ ಕಣ್ಣಿರಿನ ಹಸಿ ಆರುವ ಮೊದಲೇ ಮತ್ತೊಂದು ಶೂಟೌಟನಿಂದಾಗಿ ಬಿಹಾರಿ ಮೂಲದ ಕುಟುಂಬ ಕಣ್ಣಿರೀನಲ್ಲಿ ಕೈ ತೊಳೆಯುವಂತಾಗಿದೆ.
ಒಟ್ಟಾರೆಯಾಗಿ ಹುಬ್ಬಳ್ಳಿ ಮಹಾನಗರದಲ್ಲಿ ಸದ್ದು ಮಾಡುತ್ತಿರುವ ಚಾಕು ಚೂರಿಗಳ ಹಾವಳಿಯಿಂದ ಜನ ತತ್ತರಿಸಿ ಹೋಗುತ್ತಿದ್ದು, ಹೊಸ ಆಡಳಿತ ತಂತ್ರವನ್ನು ಜನರು ಎದುರು ನೋಡುತ್ತಿದ್ದಾರೆ.
ಅವಳಿನಗರದಲ್ಲಿ ಅಕ್ರಮ ಗಾಂಜಾ ಮಾರಾಟ, ಚಾಕು ಇರಿತ, ದರೋಡೆ,ಶೂಟೌಟ್ ಸೇರಿದಂತೆ ಹಲವಾರು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲು ಎರುತ್ತಿದ್ದು, ಜನರು ಕತ್ತಲಾದರೇ ಸಾಕು ಭಯದಲ್ಲಿ  ನಡೆದಾಡುವಂತ ಪರಿಸ್ಥಿತಿಯೊಂದು ಹುಬ್ಬಳ್ಳಿ ಜನತೆಗೆ ಬಂದಿರುವುದು ವಿಪರ್ಯಾಸಕರ ಸಂಗತಿಯಾಗಿದೆ.ಅಲ್ಲದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೂಡ ಜನರು ಹಿಂದೇಟು ಹಾಕುತ್ತಿರುವುದು ಅವಳಿನಗರದ ಕೀರ್ತಿಗೆ ಬಂದಿರುವ ಕಪ್ಪು ಚುಕ್ಕೆಯಾಗದೆ‌.

Leave a Comment