ಬೆಂಗಳೂರು ಶಾಲಾ ಮಕ್ಕಳಿಂದ ಕೆರೆ ಹಬ್ಬ

ಬೆಂಗಳೂರು, ಫೆ. 14; ಕೆರೆಗಳ ಉಳಿವಿಗಾಗಿ ಶಾಲಾ ಕಾಲೇಜು ಮಕ್ಕಳನ್ನು ಕೆರೆ ಆವರಣಕ್ಕೆ ಕರೆಯಿಸಿ, ಅದರ ಇತಿಹಾಸದ ಕುರಿತು ಅರಿವು ಮೂಡಿಸುವ ಸಲುವಾಗಿ ಮಕ್ಕಳ ಕೆರೆ ಹಬ್ಬವನ್ನು ನಮ್ಮ ಬೆಂಗಳೂರು ಪ್ರತಿಷ್ಠಾನ ಹಮ್ಮಿಕೊಂಡಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರ ಶಾಲಾ ಕಾಲೇಜು ಮಕ್ಕಳನ್ನು ಹಬ್ಬಕ್ಕೆ ಆಹ್ವಾನಿಸಲಾಗುತ್ತದೆ. ಈ ವರ್ಷದ ಮೊದಲ ಮಕ್ಕಳ ಕೆರೆ ಹಬ್ಬಕ್ಕಾಗಿ ಪ್ರತಿಷ್ಠಾನ ಶಾಲೆ, ಕಾಲೇಜುಗಳು ಮತ್ತು ಸ್ಥಳೀಯ ಸರಕಾರಿ ಸಂಸ್ಥೆಯೊಂದಿಗೆ ಕೈ ಜೋಡಿಸಿವೆ.

ತಮ್ಮ ಸುತ್ತಮುತ್ತಲಿರುವ ಕೆರೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಅವುಗಳ ಸಂರಕ್ಷಣೆಗೆ ಅವರೂ ಮುಂದಾಗುವಂತೆ ಪ್ರೇರೇಪಿಸುವುದು ಮಕ್ಕಳ ಕೆರೆ ಹಬ್ಬದ ಉದ್ದೇಶವಾಗಿದೆ. 2020ರ ಫೆಬ್ರುವರಿಯಿಂದ ವರ್ಷದ ಅಂತ್ಯದೊಳಗೆ ಹತ್ತು ಕೆರೆಗಳಲ್ಲಿ ಮಕ್ಕಳ ಕೆರೆ ಹಬ್ಬ ನಡೆಸಲು ನಮ್ಮ ಬೆಂಗಳೂರು ಪ್ರತಿಷ್ಠಾನ ಯೋಜಿಸಿದೆ.

ಕೆರೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ

ಇದಕ್ಕಾಗಿ ಗುರುತಿಸಲಾದ ಕೆರೆಗಳಲ್ಲಿ ಮೊದಲನೆಯದಾಗಿ ಜೋಗಿ ಕೆರೆಯಲ್ಲಿ ಮಕ್ಕಳ ಕೆರೆ ಹಬ್ಬ ನಡೆಯಲಿದೆ. ಕೆರೆಯ ಸುತ್ತ ನಡಿಗೆ, ಚಿತ್ರಕಲೆ ಸ್ಪರ್ಧೆ, ಸಸಿ ನೆಡುವುದು, ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆ ಇತ್ಯಾದಿ ಚಟುವಟಿಕೆಗಳನ್ನು ಆಯೋಜಿಸಿ ಆ ಕೆರೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಪುನರುಜ್ಜೀವನದಿಂದ ಆಗುವ ಪ್ರಯೋಜನಕೆರೆಯ ಸಂರಕ್ಷಣೆ

ಈ ಚಟುವಟಿಕೆಗಳು ಸುತ್ತಮುತ್ತಲಿನ ಮಕ್ಕಳನ್ನು ಕೆರೆ ಆವರಣಕ್ಕೆ ತರುವುದಷ್ಟೇ ಅಲ್ಲದೇ ಕೆರೆಯ ಸಂರಕ್ಷಣೆಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನೂ ಖಚಿತಪಡಿಸುತ್ತದೆ. ಕೆರೆಯ ಪರಂಪರೆ, ಸಮುದಾಯದಲ್ಲಿ ಅವುಗಳಿಗಿರುವ ಪಾತ್ರ, ಕೆರೆ ಪುನರುಜ್ಜೀವನದಿಂದ ಆಗುವ ಪ್ರಯೋಜನಗಳು ಇತ್ಯಾದಿ ಕುರಿತು ಹಬ್ಬ ತಿಳಿವಳಿಕೆ ನೀಡುತ್ತದೆ.

Leave a Comment