ಬೆಂಗಳೂರಿಗೆ ನಿಯೋಗ 5 ರಂದು

ಕಲಬುರಗಿ ಸ 3:ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದ ನಿಯೋಗ ಸ.5 ರಂದು ಬೆಂಗಳೂರಿಗೆ ತೆರಳಿ ಎಂಬಿ ಪಾಟೀಲರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು  ಕೆಪಿಸಿಸಿ ಅಧ್ಯಕ್ಷ ಕಾರ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗುವದು ಎಂದು ಬಳಗದ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜಕೀಯ ಪದವಿಗಾಗಿ ಎಂಬಿ ಪಾಟೀಲ ಮತ್ತು ಅವರ ತಡದವರು ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ನಿಂತರು. ಇದರ ಫಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಣಿಸಿತು. ಇದನ್ನು ಸಂಬಂಧಪಟ್ಟವರು ಮರೆಯಬಾರದು . ಕೆಪಿಸಿಸಿ ಅಧ್ಯಕ್ಷ ಕಾರ್ಯಾಧ್ಯಕ್ಷರ ಮುಖಾಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮನವಿ ಸಲ್ಲಿಸಲಾಗುವದು ಎಂದರು..

Leave a Comment