ಬೆಂಗಳೂರಲ್ಲಿ ಬೀದಿ ನಾಯಿಗಳ ಅಟ್ಟಹಾಸ, ಬಾಲಕಿಯ ಕಣ್ಣನ್ನೇ ಕಚ್ಚಿದ ಶ್ವಾನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ನಡುವೆ ವಿವೇಕ ನಗರದ ನೀಲಸಂದ್ರ ರೋಸ್ ಗಾರ್ಡನ್ನಲ್ಲಿ ನಾಲ್ಕು ವರ್ಷ ಹತ್ತು ತಿಂಗಳ ವಯಸ್ಸಿನ ಬಾಲಕಿಯ ಬಲಗಣ್ಣಿಗೆ ಬೀದಿನಾಯಿಯೊಂದು ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.

ಇದೀಗ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ. ಇನ್ನು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ಹಾಗೂ ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ, ಇದಲ್ಲದೇ ನಮ್ಮ ಮಗುವಿಗೆ ಆದ ರೀತಿಯಲ್ಲಿ ಮತ್ತೊಂದು ಮಗುವಿಗೆ ಆಗಬಾರದು. ಹೀಗಾಗಿ, ಶೀಘ್ರವೇ ನಾಯಿಗಳನ್ನು ಸ್ಥಳಾಂತರಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

Leave a Comment