ಬೆಂಕಿ ಹಚ್ಚಿ  ಪತ್ನಿ ಕೊಂದ ಪತಿ

ಕಲಬುರಗಿ ಡಿ 7:  ತೀವ್ರ ಸುಟ್ಟಗಾಯಗಳಿಂದ ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಗ್ರಾಮದ ವಿವಾಹಿತ ಮಹಿಳೆ ಈಶಮ್ಮ ಸುರೇಶ ಕಡ್ಲಿ ( 30) ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾಳೆ.

ಈಶಮ್ಮಳಿಗೆ ಆಕೆಯ ಪತಿ ಸುರೇಶನೇ ಸೀಮೆಎಣ್ಣೆ ಸುರುವಿ ಬೆಂಕಿ ಹಚ್ಚಿ ಕೊಂದಿದ್ದಾನೆ ಎಂದು ಈಶಮ್ಮನ ಪಾಲಕರು ದೂರು  ಸಲ್ಲಿಸಿದ್ದಾರೆ.

ಮಹಿಳೆಗೆ ಬೆಂಕಿ ಹತ್ತಿದಾಗ ಮನೆಯಲ್ಲಿ ಹಾಗೂ ಸುತ್ತಮುತ್ತಲಿನ ಮನೆಗಳಲ್ಲಿ ಯಾರೂ ಇರಲಿಲ್ಲ. ಆಕೆಯ ಚೀರಾಟ ಕೇಳಿ ಯಾರೂ ಸಹಾಯಕ್ಕೆ ಧಾವಿಸಲಿಲ್ಲ. ಶೇ 80 ಕ್ಕಿಂತ ಅಧಿಕ ದೇಹದ ಭಾಗ ಬೆಂಕಿಯಿಂದ ಸುಟ್ಟು ಹೋಗಿತ್ತು  ಎಂದು ತಿಳಿದುಬಂದಿದೆ

10 ವರ್ಷಗಳ ಹಿಂದೆ ಇವರ ವಿವಾಹವಾಗಿತ್ತು. ಇವರಿಗೆ ಇಬ್ಬರು  ಮಕ್ಕಳಿದ್ದಾರೆ.

ಮೋಜು ಮಾಡಲು ತವರು ಮನೆಯಿಂದ ಹಣ ತರುವಂತೆ ಪತಿ ಸುರೇಶ ಪತ್ನಿಯನ್ನು ಪೀಡಿಸುತ್ತಿದ್ದನು.ಕೆಲವು  ದಿನಗಳ ಹಿಂದೆ ಆಕೆಯ  ತವರು ಮನೆಯವರು ಹೊಲ ಮಾರಿದ ದುಡ್ಡು ತಂದುಕೊಡುವಂತೆ ಪತಿ ಪೀಡಿಸುತ್ತಿದ್ದನು.ಹಣ ತರದಿದ್ದರೆ ಪತ್ನಿಯ ಜೀವ ತೆಗೆಯುವದಾಗಿ ಬೆದರಿಕೆ ಹಾಕುತ್ತಿದ್ದನೆಂದು  ದೂರು ಸಲ್ಲಿಸಲಾಗಿದೆ.

ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ…

Leave a Comment