ಬೆಂಕಿ ದುರಂತ: ನ್ಯಾಯಾಂಗ ತನಿಖೆಗೆ ಕೇಜ್ರಿವಾಲ್ ಆದೇಶ

  ನವದೆಹಲಿ, ಫೆ. 12 – ನಗರದ ಕರೋಲ್ ಬಾಗ್‌ನ ಹೊಟೇಲ್‌ವೊಂದರಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಅಗ್ನಿ ದುರಂತ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ದುರಂತ ಸಂಭವಿಸಿದ ಅರ್ಪಿತ್ ಪ್ಯಾಲೇಸ್ ಹೋಟೆಲ್ ಗೆ  ಕೇಜ್ರಿವಾಲ್ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಅವರು, ದುರಂತ ಕುರಿತಂತೆ ತಕ್ಷಣವೇ ನ್ಯಾಯಾಂಗ ತನಿಖೆಗೆ ಆದೇಶಿಸಿಸಲಾಗಿದೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಪ್ರಕಟಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಕರೋಲ್‌ ಬಾಗ್ ಪ್ರದೇಶದಲ್ಲಿನ ಕಟ್ಟಡಗಳನ್ನು ಪರಿಶೀಲಿಸುವಂತೆ ದೆಹಲಿ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸಹ ಮಧ್ಯ ದೆಹಲಿಯ ಕರೋಲ್ ಬಾಗ್ ನ ಅರ್ಪಿತ್‌  ಪ್ಯಾಲೇಸ್ ಹೋಟೆಲ್‌ಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.ದುರಂತದಲ್ಲಿ ಸಾವಿನ ಸಂಖ್ಯೆ 17ಕ್ಕೇರಿದ್ದು, ಇಬ್ಬರು ಗಾಯಗೊಂಡಿದ್ದಾರೆ. ದುರಂತ ಸಂಭವಿಸದ ಹೋಟೆಲ್‌ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ, ನಾಲ್ಕು ಅಂತಸ್ಸುಗಳ ಬದಲಿಗೆ ಆರು ಅಂತಸ್ಸು ನಿರ್ಮಿಸಿತ್ತು. ಈ ಪ್ರದೇಶದಲ್ಲಿ ಕಟ್ಟಡಗಳಲ್ಲಿನ ಅಗ್ನಿ ಪರಿವೀಕ್ಷಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬೆಳಗಿನ ಜಾವ 4.35ಕ್ಕೆ ಅಗ್ನಿ ದುರಂತ ಸಂಭವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ನಿರತವಾಗಿದ್ದವು. ಬೆಳಿಗ್ಗೆ 8.30ರ ವೇಳೆಗೆ ಬೆಂಕಿ ನಂದಿಸಲಾಯಿತು ಎಂದು ಅಗ್ನಿಶಾಮಕ ಅಧಿಕಾರಿಗಳು ಯುಎನ್‌ಐಗೆ ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ಒಂದು ಮಗು ಹಾಗೂ ಮಹಿಳೆ ಸೇರಿದ್ದಾರೆ. ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದಾಗ ಕೆಲವರು ಕಿಟಕಿ, ತಾರಸಿಗಳಿಂದ ಜಿಗಿಯುತ್ತಿರುವ ದೃಶ್ಯಗಳು ಕಂಡು ಬಂದಿವೆ.  ಅನೇಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅಗ್ನಿ ಅವಗಢಕ್ಕೆ ಕಾರಣವೇನೆಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಅವರು ಹೇಳಿದ್ದಾರೆ.

Leave a Comment