ಬೆಂಕಿ ಅವಘಡ-ಗಾಯಾಳು ಮಹಿಳೆ ಸಾವು

ಮುಂಡಗೋಡ,ಜು12; ತಾಲೂಕಿನ ಅರಶೀಣಗೇರಿ ಗ್ರಾಮದ  ಯುವತಿ ಚಿಕಿತ್ಸೆ ಫಲಕಾರಿಯಾಗದೇ  ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಾಳೆ.

 
ತಾಲೂಕಿನ ಅರಶೀಣಗೇರಿ ಗ್ರಾಮದ ಐಶ್ವರ್ಯ ಇಳಗೇರಿ ಎಂಬಾತಳೇ ಸಾವನ್ನಪ್ಪಿದ ಯುವತಿ. ಈಕೆ  ಜು.6ರಂದು  ಮನೆಯ ಬಚ್ಚಲ ಕೋಣೆಯಲ್ಲಿ  ಸ್ಟೋ ಮೇಲೆ ನೀರು ಕಾಯಿಸುತ್ತಿದ್ದಾಗ ಆಕಸ್ಮಿಕವಾಗಿ ಇವಳ ಬಟ್ಟೆಗೆ ಬೆಂಕಿಯು ತಗುಲಿ ಸಂಪೂರ್ಣ ದೇಹ ಸುಟ್ಟಗಾಯವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಳು ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ ಸಾವನ್ನಪ್ಪಿದ್ದಳೆಂದು ಕುಟಂಬದವರು ಇಲ್ಲಿನ ಪೊಲೀಸ್ ಠಾಣೆಯಲ್ಲಿ  ಸೋಮವಾರ ರಾತ್ರಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.

Leave a Comment