ಬೃಹದಾಕಾರವಾಗಿ ಬೆಳೆದ ವೀರಶೈವ ಲಿಂಗಾಯತ ಸಮಸ್ಯೆ

ದಾವಣಗೆರೆ.ಆ.25; ವೀರಶೈವ, ಲಿಂಗಾಯತ ಬೇರೆ ಎಂಬ ಸಮಸ್ಯೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಆದರೆ ಇವೆರಡು ಒಂದೇ ಎಂದು ಕೈಗಾರಿಕೋದ್ಯಮಿ ಹಾಗೂ ಶ್ರೀ ಅನ್ನದಾನೇಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ಅಧ್ಯಕ್ಷ ಅಥಣಿ ಎಸ್ ವೀರಣ್ಣ ಹೇಳಿದ್ದಾರೆ. ನಗರದ ದೇವರಾಜು ಅರಸು ಬಡಾವಣೆಯಲ್ಲಿರುವ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಹಮ್ಮಿಕೊಂಡಿದ್ದ ಲಿಂ, ಶ್ರೀಗುರು ಅನ್ನದಾನ ಮಹಾಶಿವಯೋಗಿಗಳವರ 42ನೇ ಪುಣ್ಯಾರಾಧನೆ, 228ನೇ ಶಿವಾನುಭವ ಸಂಪದ, 501 ಮುತ್ತೈದೆಯರಿಗೆ ಉಡಿತುಂಬುವ ಹಾಗೂ ಎಸ್‍ಎಸ್‍ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೀರಶೈವರು ಹಾಗೂ ಲಿಂಗಾಯತರು ಬೇರೆ ಎಂಬುದು ಹುಟ್ಟಿಕೊಂಡು ಇಂದು ನಮ್ಮಲ್ಲಿಯೇ ಸಮಸ್ಯೆ ತಂದಿದೆ. ಅಂದಿನ ಮುಖ್ಯಮಂತ್ರಿಗಳು ಯಾವುದೋ ಒಂದು ಸಂದರ್ಭದಲ್ಲಿ ಮಾಡಿರುವ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಆ ಸಮಸ್ಯೆ ಬೆಳೆದು ಹೆಮ್ಮರವಾದಾಗ ಕಲ್ಲಿನಂತೆ ನಿಂತವರು ವೀರಶೈವಲಿಂಗಾಯತರೇ. ದಾವಣಗೆರೆ ಭಾಗದಲ್ಲಿ ವೀರಶೈವರು ಎಂದು ಹೇಳಿಕೊಳ್ಳುತ್ತೇವೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಎನ್ನುತ್ತಾರೆ ಅಷ್ಟೇ. ವೀರಶೈವ ಲಿಂಗಾಯತ ಎಂಬ ಸಮಸ್ಯೆ ಹುಟ್ಟಿಕೊಳ್ಳುವ ಮೊದಲು ಈ ಬಗ್ಗೆ ನಮಗಾರಿಗೂ ತಿಳಿದೇ ಇರಲಿಲ್ಲ, ನಾವೆಲ್ಲಾ ಒಂದೇ ಎಂಬ ಭಾವನೆಯಿಂದಿದ್ದೇವು. ಸಮಸ್ಯೆ ಹುಟ್ಟಿದಾಗಿನಿಂದ ಗೊಂದಲ ನಿರ್ಮಾಣವಾಗಿದೆ.  ಶಾಸಕರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ಬೆನ್ನುಲುಬಾಗಿ ನಿಂತು ಶ್ರೀಗಳು ವೀರಶೈವ ಲಿಂಗಾಯತ ಎರಡು ಒಂದೇ ಎಂದು ಪ್ರತಿಪಾದಿಸಿದ್ದಾರೆ.  ಎಲ್ಲಾ ಪೂಜ್ಯರೊಂದಿಗೆ ಶ್ರೀಗಳು ಸಭೆ ಸೇರಿ ಎರಡು ಒಂದೇ ಎಂಬ ತೀರ್ಮಾನ ಕೈಗೊಳ್ಳಲಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಸಹ ನಮ್ಮ ಸಮಾಜದವರೇ ಇದ್ದಾರೆ. ನಮ್ಮವರಿದ್ದರೇ ಪ್ರೋತ್ಸಾಹ ಸಿಗುತ್ತದೆ. ಸಮಾಜ ಬಾಂಧವರು ಮುಖ್ಯವಾಹಿನಿಗೆ ಬರಲು ಕಾರಣವಾಗುತ್ತದೆ. ವೀರಶೈವ ಲಿಂಗಾಯತರ ನಾಯಕರು ರಾಜಕೀಯದಲ್ಲಿದ್ದರೇ ಜಿಲ್ಲೆಗೂ ಒಳ್ಳೆಯ ಭವಿಷ್ಯ ಸಿಗಲಿದೆ. ರಾಜ್ಯದಲ್ಲಿ ಲಿಂಗಾಯತ ಸಮುದಾಯದವರು ಮುಖ್ಯಮಂತ್ರಿಯಾಗಿದ್ದ ವೇಳೆ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದಾರೆ. ಕರ್ನಾಟಕ ಎಂದರೇ ಲಿಂಗಾಯತರು ಎಂಬ ಮಾತು ಹಿಂದೆ ಇತ್ತು. 80 ರಿಂದ 90 ಮಂದಿ ಲಿಂಗಾಯತರು ಶಾಸಕರಾಗಿರುತ್ತಿದ್ದರು. ಆದರೆ ಇಂದು ಈ ಸಂಖ್ಯೆ ಕುಸಿದಿದೆ ಅಷ್ಟೇ.ು ಅನ್ನದಾನ ಮಹಾಶಿವಯೋಗಿಗಳು ಹಿಂದುಳಿದ ಪ್ರದೇಶಗಳಾದ ಗದಗ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ಕ್ರಾಂತಿ ಮಾಡಿದವರು ದಾವಣಗೆರೆಯಲ್ಲೂ ಸಹ ಅನ್ನದಾನೇಶ್ವರ ಮಠದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಹಾಲಕೆರೆಯ ಶ್ರೀಮುಪ್ಪಿನ ಬಸವಲಿಂಗದೇವರು, ಕುವೆಂಪು ವಿವಿಯ ಉಪಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಉಪನ್ಯಾಸಕ ಎಫ್.ಎನ್.ಹುಡೇದ್ ಇದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವಶ್ರೀರಕ್ಷೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ವೀರಪ್ಪ ಎಂ ಭಾವಿ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು.
ಬಾಕ್ಸ್
10ಟಿಛಿ = ಒಳಪಂಗಡದ ವಿಲೀನದ ಹೊರತು ಮಾನ್ಯತೆ ಸಾಧ್ಯವಿಲ್ಲ
ದಾವಣಗೆರೆ, ಆ. 25 – ಎಲ್ಲಾ ಸಮಾಜವನ್ನು ಒಂದೇ ಎಂಬ ಭಾವನೆಯಲ್ಲಿ ಕಾಣುವವರು ಮುಖ್ಯಮಂತ್ರಿ ಯಡಿಯೂರಪ್ಪನವರು. ಎಲ್ಲಾ ಮಠಮಾನ್ಯಗಳಿಗೂ ಸಾಕಷ್ಟು ಅನುದಾನ ನೀಡಿದ್ದಾರೆ. ಈ ಸರ್ವಧರ್ಮ ಸಮನ್ವಯತೆಯ ಭಾವನೆ ಅವರಲ್ಲಿದೆ. ಅವರು ಮುಖ್ಯಮಂತ್ರಿಯಾಗಿರುವುದು ಲಿಂಗಾಯತರಿಗಷ್ಟೇ ಎಲ್ಲಾ ಸಮುದಾಯದವರಿಗೂ ಸಂತೋಷ ತಂದಿದೆ. ಹೈಕಮಾಂಡ್ ಅವರಿಗೆ ಆಡಳಿತ ನಡೆಸುವ ಸ್ವಾತಂತ್ರ ನೀಡಬೇಕು. ಆಗ ಕರ್ನಾಟಕದ ಚಿತ್ರಣವನ್ನೇ ಅವರು ಬದಲಾಯಿಸುತ್ತಾರೆಂಬ ಆತ್ಮವಿಶ್ವಾಸವಿದೆ.ಅವರು ಸಮರ್ಥ ನಾಯಕರಾಗಿದ್ದಾರೆ. ಮಂತ್ರಿಮಂಡಲ ರಚಿಸಲು 15 ದಿನವಾಗಿದೆ. ನಂತರ ಅವರಿಗೆ ಖಾತೆ ನೀಡಲು ಸಹ ವಿಳಂಬವಾಗುತ್ತಿದೆ. ಇದೆಲ್ಲವನ್ನು ಹೈಕಮಾಂಡ್ ನಿಯಂತ್ರಿಸಲು ಹೊರಟಿದೆ ಇದು ಸರಿಯಲ್ಲ. ಆರ್‍ಎಸ್‍ಎಸ್ ಅನಧಿಕೃತವಾಗಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಹೈಕಮಾಂಡ್ ನವರು ಸಹ ಎಷ್ಟು ಬೇಕೋ ಅಷ್ಟೇ ಆರ್‍ಎಸ್‍ಎಸ್ ಮಾತನ್ನು ಕೇಳಬೇಕು. ಆಗ ಮಾತ್ರ ಕರ್ನಾಟಕದ ಪ್ರಗತಿ ಸಾಧ್ಯ. ವೀರಶೈವ ಲಿಂಗಾಯತ ಎರಡು ಒಂದೇ ಈ ಬಗ್ಗೆ ಯಾವುದೇ ಗ್ರಂಥ ತೆಗೆದು ನೋಡಿದರು ಒಂದೇ ಎಂಬುದು ತಿಳಿದುಬರುತ್ತದೆ. ಆದರೆ ಇತ್ತೀಚಿಗೆ ಮಹಾಪಂಡಿತರು ಸೇರಿಕೊಂಡು ಲಿಂಗಾಯತ ಧರ್ಮ ಬೇರೆ ಎಂಬುದನ್ನು ಬಿತ್ತಿದ್ದಾರೆ. ಇದು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರವು ಹಿಂದು ಧರ್ಮಬಿಟ್ಟು ಮತ್ತೊಂದು ಧರ್ಮಕ್ಕೆ ಮಾನ್ಯತೆ ನೀಡುವುದಿಲ್ಲ, ನಮಗೆಲ್ಲಾ ವೀರಶೈವ ಲಿಂಗಾಯತ ಒಂದೇ ಎಂಬ ವಿಶಾಲ ಮನೋಭಾವನೆ ಬರಬೇಕು. ನಮಗೆ ಮಾನ್ಯತೆ ಸಿಗಬೇಕಾದರೆ ಒಳಪಂಗಡಗಳು ಒಂದಾಗಬೇಕು. ಇಲ್ಲದಿದ್ದರೇ ಮಾನ್ಯತೆ ಸಿಗುವುದು ಕಷ್ಟ. ಸಮಗ್ರತೆಗೆ ಧಕ್ಕೆ ತರುವ ಕೆಲಸ ಮಾಡಬಾರದು. ಒಳಪಂಗಡಗಳನ್ನು ವಿಲೀನ ಮಾಡಬೇಕು. ಎಲ್ಲಿಯವರೆಗೆ ವೀರಶೈವ ಲಿಂಗಾಯತ ಒಳಪಂಗಡಗಳು ವಿಲೀನವಾಗುವುದಿಲ್ಲವೋ ಅಲ್ಲಿಯವರೆಗೆ ಸ್ವಾತಂತ್ರತೆ ಬರಲು ಸಾಧ್ಯವಿಲ್ಲ, ನಮಗೆಲ್ಲಾ ಸಮಗ್ರತೆಯ ಕಲ್ಪನೆ ಬರಬೇಕು. ಅಖಿಲ ಭಾರತ ವೀರಶೈವ ಮಹಾಸಭಾ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಎಲ್ಲಾ ಒಳಪಂಗಡಗಳು ವಿಲೀನವಾಗಬೇಕಾದರೆ ಅದಕ್ಕೊಂದು ಕಮಿಟಿ ರಚಿಸಬೇಕು. ಸಮಗ್ರ ವೀರಶೈವ ಲಿಂಗಾಯತರ ಕಲ್ಪನೆ ಬರಬೇಕು ಎಂದರು. ಶಾಸಕ ಶಾಮನೂರು ಶಿವಶಂಕರಪ್ಪನವರು ವೀರಶೈವ ಲಿಂಗಾಯತ ಒಂದೇ ಎಂದು ಹಠತೊಟ್ಟು ನಿಂತಿದ್ದಾರೆ. ಅವರಿಗೆ ಎಲ್ಲರು ಬೆಂಬಲಿಸಬೇಕು. ಧರ್ಮದ ವಿಷಯದಲ್ಲಿ ಒಗ್ಗಟ್ಟಿನಿಂದ ತಮ್ಮ ಸಿದ್ದಾಂತವನ್ನು ಅವರು ಪ್ರತಿಪಾದಿಸಿದ್ದಾರೆ. ಅದಕ್ಕಾಗಿ ನಾವೆಲ್ಲರು ಅವರಿಗೆ ಸಹಕಾರ ನೀಡಬೇಕೆಂದರು.

Leave a Comment