ಬೂಮ್ರಾಗೆ ವಿಶ್ರಾಂತಿ ವ್ಯಾಪಕ ಟೀಕೆ

ಮುಂಬೈ, ಜ ೯- ಮುಂದಿನ ವಿಶ್ವಕಪ್ ದೃಷ್ಠಿಯಿಂದ ಸತತವಾಗಿ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ಅಗತ್ಯವಿದೆ ಎಂದು ನಿರ್ಧಾರ ತೆಗೆದಕೊಂಡ ಬಿಸಿಸಿಐ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ೨೦ ಸರಣಿಗೆ ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಿರುವ ಬಿಸಿಸಿಐ ಕ್ರಮವನ್ನು ಅಭಿಮಾನಿಗಳು ಖಂಡಿಸಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

bumrah-2

ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬುಮ್ರಾಗೆ ವಿಶ್ವಕಪ್‌ಗೆ ಮೊದಲು ವಿಶ್ರಾಂತಿ ನೀಡಬೇಕಿದ್ದರೆ ಐಪಿಎಲ್ ನಿಂದ ಹೊರಗುಳಿಯಬಹುದಿತ್ತು. ಅದು ಬಿಟ್ಟು ಆಸ್ಟ್ರೇಲಿಯಾದಂತಹ ಪ್ರಮುಖ ಸರಣಿಗೆ ವಿಶ್ರಾಂತಿ ನೀಡುವ ಅಗತ್ಯವೇನಿತ್ತು ಎಂಬು ಅಭಿಮಾನಿಗಳು ಕಿಡಿ ಕಾರಿದ್ದಾರೆ.

ವಿಶ್ವಕಪ್‌ಗೆ ಪ್ರಮುಖ ವೇಗಿಗಳಿಗೆ ವಿಶ್ರಾಂತಿ ಸಿಗಲು ಐಪಿಎಲ್‌ನಿಂದ ಹೊರಗುಳಿಯಬಹುದು ಎಂದು ಈ ಮೊದಲು ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಅದರ ಬೆನ್ನಲ್ಲೇ ಬುಮ್ರಾ ಕೂಡಾ ಐಪಿಎಲ್ ನಿಂದ ಹೊರಗುಳಿಯಲು ತಮ್ಮ ತಂಡದ ಜತೆ ಮಾತುಕತೆ ನಡೆಸಲು ಚಿಂತನೆ ನಡೆಸಿದ್ದರು. ಅದರ ಬೆನ್ನಲ್ಲೇ ಬುಮ್ರಾಗೆ ಆಸ್ಟ್ರೇಲಿಯಾ ಸರಣಿಯಿಂದ ವಿಶ್ರಾಂತಿ ನೀಡಿರುವುದರ ಹಿಂದೆ ಐಪಿಎಲ್ ಫ್ರಾಂಚೈಸಿಯ ಕೈವಾಡವಿದೆಯೇ ಎಂಬ ಅನುಮಾನ ಮೂಡಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Leave a Comment