ಬುಲ್ಸ್ ಬದಲು ಗುಜರಾತ್‌ಗೆ ಗೆಲುವು- ಪ್ರೊ ಕಬಡ್ಡಿ ಸಂಸ್ಥೆ ಯಡವಟ್ಟು

ಬೆಂಗಳೂರು, ಜ ೬-  ಪ್ರೊ ಕಬಡ್ಡಿ ಲೀಗ್‌ನ ಆರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜಯಂಟ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ದಿಗ್ವಿಜಯವನ್ನು ಟ್ವೀಟ್ ಮೂಲಕ ಹೇಳುವ ಭರದಲ್ಲಿ ಪ್ರೊ ಕಬಡ್ಡಿ ಅಪಿಶೀಯಲ್ ಟ್ವಿಟರ್ ಅಕೌಂಟ್‌ನಲ್ಲಿ ಗುಜರಾತ್‌ಗೆ ಗೆಲುವು ಎಂದು ಪ್ರಕಟಿಸುವ ಮೂಲಕ ಯಡವಟ್ಟು ಮಾಡಿದೆ.

ಹೌದು, ಕನ್ನಡದಲ್ಲಿ ಟ್ವೀಟ್ ಮಾಡಿ ಶುಭಾಶಯ ಕೋರುವ ಭರದಲ್ಲಿ ಪ್ರೊ ಕಬಡ್ಡಿ ಅಫಿಶೀಯಲ್ ಟ್ವಿಟರ್ ಪೇಜ್ ಯಡವಟ್ಟು ಮಾಡಿಕೊಂಡಿದೆ. ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ತಂಡವೇ ಗೆದ್ದಿದೆ ಎಂದು ಬರೆದಿರುವುದು ಅಫಿಶಿಯಲ್ ಪೇಜ್ನಲ್ಲಿ ಪೋಸ್ಟ್ ಆಗಿತ್ತು. ಇದನ್ನು ನೋಡಿದ ಅಭಿಮಾನಿಗಳು ದಿಗ್ಭ್ರಾಂತರಾಗಿದ್ದರು.

ವಿಷಯ ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ಟ್ವಿಟರ್ ಪೇಜ್ ನಿರ್ವಾಹಕರು, ಯಡವಟ್ಟಾದ ಟ್ವೀಟ್ ಡಿಲಿಟ್ ಮಾಡಿ ರಿಟ್ವೀಟ್ ಮಾಡಿದ್ದಾರೆ.  ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಬೆಂಗಳುರು ಬುಲ್ಸ್ ಭರ್ಜರಿ ಜಯ ಗಳಿಸಿ ಪ್ರೊ ಕಬಡ್ಡಿ ಕಪ್ಗೆ ಚೊಚ್ಚಲ ಮುತ್ತಿಕ್ಕಿತ್ತು. ಇದು ರಾಜ್ಯ ಸೇರಿ ಹೊರ ರಾಜ್ಯದ ಅಭಿಮಾನಿಗಳಿಗೆ ಖುಷಿ ಇಮ್ಮಡಿಗೊಳಿಸಿತ್ತು. ಈ ಮಧ್ಯೆ ಪ್ರೊ ಕಬಡ್ಡಿ ಅಪಿಶಿಲಯ್ ಟ್ವಿಟರ್ ನಿರ್ವಾಹಕರ ಅವಾಂತರಿಂದ ಅಭಿಮಾನಿಗಳು ಕೊಂಚ ಗೊಂದಲಕ್ಕೀಡಾಗಿದ್ದರು.

Leave a Comment