ಬುಲೆಟ್ ಅಂತ್ಯಕ್ರಿಯೆ

ಬೆಂಗಳೂರು, ಏ. ೭- ಅನಾರೋಗ್ಯದಿಂದ ನಿನ್ನೆ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆ ಹೆಬ್ಬಾಳದಲ್ಲಿಂದು ನಡೆಯಿತು. ಪಾರ್ಥೀವ ಶರೀರದ ದರ್ಶನ ಪಡೆಯಲು ಬುಲೆಟ್ ಪ್ರಕಾಶ್ ಅವರ ನಿವಾಸದ ಮುಂದೆ ನೂರಾರು ಜನರು ಪಾಲ್ಗೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರದಿ ಸಾಲಿನಲ್ಲಿ ಬಂದು ಅಂತಿಮ ನಮನ ಸಲ್ಲಿಸಿದರು.

ಮಡಿವಾಳ ಸಂಪ್ರದಾಯದಂತೆ ಹೆಬ್ಬಾಳದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕುಟುಂಬದ ಸದಸ್ಯರು ಹಾಗೂ ಚಿತ್ರರಂಗದ ಅನೇಕರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ರಾಮಯ್ಯ ಆಸ್ಪತ್ರೆಯಲ್ಲಿಡಲಾಗಿದ್ದ ಮೃತ ದೇಹವನ್ನು ಪುತ್ರ ರಕ್ಷಕ್ ಹಾಗೂ ನಟ ದುನಿಯಾ ವಿಜಯ್ ಹೆಬ್ಬಾಳದ ಭುವನೇಶ್ವರಿ ನಗರದಲ್ಲಿರುವ ನಿವಾಸಕ್ಕೆ ತಂದರು.
ಈ ವೇಳೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸರದಿ ಸಾಲಿನಲ್ಲಿ ನಿಂತು ನಮನ ಸಲ್ಲಿಸಿದರು.

Leave a Comment