ಬುರ್ಕಿನಾ ಫಾಸೊದಲ್ಲಿ ಭಯೋತ್ಪಾದಕರ ದಾಳಿಗೆ ೧೨ ನಾಗರಿಕರು ಬಲಿ

ಮಾಸ್ಕೊ, ಜ.೧೨- ಉತ್ತರ ಬುರ್ಕಿನಾ ಫಾಸೊದ ಸೌಮ್ ಪ್ರಾಂತ್ಯದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ೧೨ ನಾಗರಿಕರು ಬಲಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆಂದು ಭದ್ರತಾ ಸಚಿವಾಲಯ ಮಾಹಿತಿ ನೀಡಿದೆ.
ಅರ್ಬಿಂದಾದ ಗ್ಯಾಸೆಲಿಕಿ ಗ್ರಾಮಕ್ಕೆ ಕಳೆದ ಗುರುವಾರ ೩೦ ಮಂದಿ ಶಸ್ತ್ರಸಜ್ಜಿತ ಆಕ್ರಮಣಾಕಾರರು, ಏಕಾಏಕಿ
ನಡೆಸಿದ ದಾಳಿಗೆ ೧೨ ಮಂದಿ
ನಾಗರಿಕರು ಬಲಿಯಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ ಎಂದು ಭದ್ರತಾ ಸಚಿವಾಲಯ ಫೇಸ್ಬುಕ್ನಲ್ಲಿ ಬರೆದುಕೊಂಡಿದೆ.
ಆಕ್ರಮಣಾಕಾರರು ನಾಗರಿಕರನ್ನು ಬಲಿ ತೆಗೆದುಕೊಂಡಿದ್ದೂ ಅಲ್ಲದೆ, ಧಾನ್ಯದ ಗೋದಾಮು, ಜಟಕಾ ಬಂಡಿ ಮತ್ತು ಆರು ಅಂಗಡಿಗಳಿಗೆ ಬೆಂಕಿ ಇಟ್ಟು ೫ ದ್ವಿಚಕ್ರವಾಹನಗಳು ಮತ್ತು ಹಲವು ಗೂಳಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

Leave a Comment