ಬುಧ ಗ್ರಹ ಶೋಧನೆಗೆ ಹೊರಟ ‘ಬೇಪಿ’ ಉಪಗ್ರಹ

ಉತ್ತನೂರು ವೆಂಕಟೇಶ್

ಸೂರ್ಯನ ಅತೀವ ಶಾಖಕ್ಕೆ ಬೆಂದು ಬರಡಾಗಿರುವ ಬುಧಗ್ರಹ ಶೋಧನೆಗಾಗಿ ಯೂರೋಪ್ ಮತ್ತು ಜಪಾನ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಶೋಧನಾ ನೌಕೆಯನ್ನು ಉಡಾವಣೆ ಮಾಡಿವೆ.

ಬರಡು ಗ್ರಹವೆಂದೇ ಪರಿಗಣಿಸಿರುವ ಬುಧಗ್ರಹದ ಅಧ್ಯಯನಕ್ಕೆಂದು ಯೂಪೋಪಿಯನ್ ಮತ್ತು ಜಪಾನ್ ಬಾಹ್ಯಾ ಕಾಶ ಸಂಸ್ಥೆಗಳು ಜಂಟಿಯಾಗಿ ಬೇಪಿ ಹೆಸರಿನ ಬಾಹ್ಯಾಕಾಶ ನೌಕೆಯನ್ನು ಕಳೆದ ವಾರ ಉಡಾವಣೆ ಮಾಡಿವೆ.

೨೦೨೫ ರವರೆಗೆ ಬುಧಗ್ರಹದ ಅಧ್ಯಯನ ಮಾಡುವ ನೌಕೆಯಲ್ಲಿ ಪ್ರತ್ಯೇಕ ಶೋಧನಾ ನೌಕೆಗಳಿದ್ದು, ಇವು ಬುಧನ ವಾತಾವರಣ, ತಾಪಮಾನದಲ್ಲಿನ ತೀವ್ರ ಬದಲಾವಣೆ, ಅಲ್ಲಿಯ ಆಯಸ್ಕಾಂತೀಯ ವಾತಾವರಣ ಇತ್ಯಾದಿ ಅಧ್ಯಯನ ನಡೆಸಲಿವೆ.

ಸೂರ್ಯನಿಗೆ ಅತಿ ಹತ್ತಿರದ ಗ್ರಹವಾದ ಬುಧನಲ್ಲಿಯ ಅತಿಯಾದ ತಾಪಮಾನದಲ್ಲಿ ಶೋಧನಾ ಕಾರ್ಯ ನಡೆಸುವುದೇ ಭಾರಿ ಸವಾಲಿನದಾಗಿದೆ.

28vichar2

ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಏರಿಯನ್- ೫ ರಾಕೆಟ್, ಬೇಪಿ ಕೊಲಂಬೊ ಬಾಹ್ಯಾಕಾಶ ಶೋಧನಾ ನೌಕೆಯನ್ನು ಹೊತ್ತು ಅಕ್ಟೋಬರ್ ೨೦ ರಂದು ಫ್ರೆಂಚ್ ಗಯವಾದ ಕೌರು ವಾಯು ನೆಲೆಯಿಂದ ಉಡಾವಣೆಕೊಂಡಿದೆ.

ಈ ನೌಕೆಗೆ ಇಟಲಿಯ ವಿಜ್ಞಾನಿ ಗುಸೆಪ್ಪೆ, ಬೇಪ ಕೊಲಂಬೊ ಸ್ಮರಣಾರ್ಥ ಬೇಪಿ ಎಂದು ಹೆಸರಿಡಲಾಗಿದೆ.

ತಾನು ಹೊತ್ತು ಹೋದ ಎರಡು ಶೋಧನಾ ನೌಕೆಗಳಾದ ‘ಬೇಪಿ‘ ಮತ್ತು ‘ಮಿಯೋ‘ ನೌಕೆಗಳನ್ನು ಏರಿಯನ್ ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈ ನೌಕೆಗಳು ಸೂರ್ಯನಿಗೆ ಅತಿ ಸಮೀಪದ ಗ್ರಹವಾದ ಬುಧಗ್ರಹದ ಅಧ್ಯಯನದಲ್ಲಿ ೨೦೨೫ರವರೆಗೆ ತೊಡಗಲಿವೆ.

ಉಡಾವಣೆಗೊಂಡ ನಂತರದಲ್ಲಿ ರಾಕೆಟ್‌ನಿಂದ ಎರಡೂ ಶೋಧನಾ ಸೌಕೆಗಳು ಯಶಸ್ವಿಯಾಗಿ ಬೇರ್ಪಟ್ಟಟು ಕಕ್ಷೆಯಲ್ಲಿ ಸೇರಿವೆ ಎಂದು ಯೂರೋಪಿಯನ್ ಸ್ಪೇನ್ ಏಜೆನ್ಸಿ ಹೇಳಿದೆ.

೧.೩ ಶತಕೋಟಿ ಯೂರೋ (೧.೫ ಶತಕೋಟಿ ಡಾಲಱ್ಸ್) ಮೊತ್ತದ ಈ ಯೋಜನೆ ಭಾರಿ ಸವಾಲಿನದಾಗಿದ್ದು, ಬುಧಗ್ರಹದ ತೀವ್ರ ತಾಪಮಾನದಲ್ಲಿ ಶೋಧನಾ ಕಾರ್ಯಾ ಮಾಡಬೇಕಿದೆ. ಭೂಮಿಯ ಉಪಗ್ರಹವಾದ ಚಂದ್ರನಿಗಿಂತ ಗಾತ್ರದಲ್ಲಿ ತುಸು ಹೆಚ್ಚಾಗಿರುವ ಬುಧಗ್ರಹ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ೧೯೭೪ರಲ್ಲಿ ಉಡಾವಣೆಯಾಗಿದ್ದ ನಾಸಾದ ಮ್ಯಾರಿನರ್-೧೦ ಶೋಧನಾ ನೌಕೆ ೨೦೧೫ರ ವರೆಗೆ ಬುಧಗ್ರಹದ ಶೋಧನೆ ನಡೆಸಿದೆ. ಗ್ರಹ ಕುರಿತಂತೆ ಸಾವಿರಾರು ಚಿತ್ರಗಳನ್ನು ಭೂಮಿಗೆ ರವಾನಿಸಿದೆ.

ಮುಂದಿನ ಏಳು ವರ್ಷಗಳ ಕಾಲ ಅಂದರೆ ೨೦೨೫ರವರೆಗೆ ಬುಧಗ್ರಹದ ಅಧ್ಯಯನ ನಡೆಸಲಿರುವ ಈ ಶೋಧನಾ ನೌಕೆಗಳು ಬುಧಗ್ರಹದ ತೀವ್ರ ತಾಪಮಾನ ಅದರ ಕಾಂತೀಯ ಶಕ್ತಿ ಇತ್ಯಾದಿಗಳ ಕುರಿತಂತೆ ಅಧ್ಯಯನ ನಡೆಸಲಿದೆ.

ಬುಧಗ್ರಹ ಸೂರ್ಯನೆ ಸಮೀಪ ಇರುವ ಕಾರಣ ಇಲ್ಲಿಯ ತಾಪಮನಾನ ೪೩೦ ಡಿಗ್ರಿ ಸೆಲ್ಸಿಯಸ್‌ಗೂ ಅಧಿಕವಾಗಿದ್ದದು, ಈ ತಾಪಮನಾನದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವಂತೆ ನೌಕೆಯನ್ನು ವಿನ್ಯಾಸ ಮಾಡಲಾಗಿದೆ.

ಸೂರ್ಯನಿಗೆ ಅತಿ ಹತ್ತಿರದ ಗ್ರಹವಾಗಿರುವ ಬುಧ ಬೆಂಗಾಡಿನಂತೆ ಬರಡುಗ್ರಹ, ಇಲ್ಲಿ ನೀರಿನ ಅಂಶವಾಗಲಿ, ಗಾಳಿಯಾಗಲಿ ಆಮ್ಲಜನಕವಾಗಲಿ ಇಲ್ಲ. ಜೀವರಾತಿಯ ಸಾಧ್ಯಯತೆ ಇಲ್ಲವೇ ಇಲ್ಲ.

ಸುಮಾರು ೩೪೦೦ ಮೈಲುಗಳಷ್ಟು ವ್ಯಾಸ ಹೊಂದಿರುವ ಈ ಗ್ರಹದಲ್ಲಿ ವಾತಾವರಣವಿಲ್ಲ. ತೀವ್ರ ರೀತಿಯ ತಾಪಮಾನ. ಸೂರ್ಯನತ್ತ ಮುಖ ಮಾಡಿರುವ ಗ್ರಹದ ಭಾಗದಲ್ಲಿ ೪೫೦ ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನವಿದ್ದರೆ ಅದರ ವಿರುದ್ಧ ಭಾಗದಲ್ಲಿ ಮೈನಸ್ ತಾಪಮಾನ ಮತ್ತು ಕಗ್ಗತ್ತಲು.

ಬುಧನ ಮೇಲ್ಮೈ ಕಡಿದಾದ ಬೆಟ್ಟಗುಡ್ಡಗಳು, ಮತ್ತು ಆಳವಾದ ಕೊರಕುಲುಗಳಿಂದ ಕೂಡಿದೆ. ಇದರ ಒಳಭಾಗದಲ್ಲಿ ಕಲ್ಲು ಮತ್ತು ಇತರ ಮೂಲವಸ್ತತುಗಳು ಇವೆ. ವಾತಾವರಣದಲ್ಲಿ ಜಲಜನಕ ಹೀಲಿಯಂ ಅನಿಲಗಳು ಇವೆ ಎಂದು ಅಧ್ಯಯನದಿಂದ ತಿಳಿದಿದೆ.

Leave a Comment