ಬುಧ ಗ್ರಹದಲ್ಲಿ ಹಿಂದೊಮ್ಮೆ ಜೀವ ಪರಿಸರವಿತ್ತು

 

ಇಂದು ಬರಡು ಬಿದ್ದಿರುವ ಬುಧಗ್ರಹದಲ್ಲಿ ಹಿಂದೊಮ್ಮೆ ಸಾಗರವಿತ್ತು, ಜೀವ ಪರಿಸರವಿತ್ತು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಗಾಳಿ, ನೀರು, ವಾತಾವರಣವಿಲ್ಲದೆ ಬರೀ ಬರಡು ಗ್ರಹವಾಗಿರುವ ಬುಧಗ್ರಹದಲ್ಲಿ ಹಿಂದೊಮ್ಮೆ ಜೈವಿಕ ವಾತಾವರಣವಿತ್ತು.

ಗ್ರಹದ ರಚನೆಯ ಆರಂಭದಿಂದ ಎರಡು ಶತಕೋಟಿ ವರ್ಷಗಳಷ್ಟು ಕಾಲ ಬುಧನಲ್ಲಿ ಜೈವಿಕ ಪರಿಸರವಿತ್ತು ಎಂದು ನಾಸಾ ವಿಜ್ಞಾನಿಗಳು ನಡೆಸಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಎಲ್ಲಾ ಗ್ರಹಗಳಿಗಿಂತ ಇದು ಸೂರ್ಯನಿಗೆ ಅತಿ ಹತ್ತಿರದಲ್ಲಿರುವುದರಿಂದ ಎಲ್ಲಾ ವಸ್ತುಗಳು ಕರಗಿ ಬೂದಿಯಾಗುವಷ್ಟು ಶಾಖದಿಂದಾಗಿ ಇಂದು ಇದು ಶುಷ್ಕ ಗ್ರಹವಾಗಿದೆ.

ಬುಧಗ್ರಹ ರಚನೆಯಾದ ನಂತರದಲ್ಲಿಯ ಎರಡು ಶತಕೋಟಿ ವರ್ಷಗಳಷ್ಟು ಕಾಲ ಜೀವ ಅಗತ್ಯದ ವಾತಾವರಣವಿತ್ತು. ಅಲ್ಲಿ ಸಾಗರವಿತ್ತು, ಪರಿಸರವಿತ್ತು ಎಂದು ನ್ಯೂಯಾರ್ಕ್‌ನಲ್ಲಿರುವ ನಾಸಾ ಗೊಡ್ಡಾರ್ಡ್ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ಸಂಶೋಧಕ ಮೈಕೇಲ್ ವೇ ಹೇಳಿದ್ದಾರೆ.

ಅನ್ಯಗ್ರಹಗಳಲ್ಲಿ ಜೈವಿಕ ಪರಿಸರ ಮತ್ತು ಜೀವಿಗಳು ಇರುವ ಸಾಧ್ಯತೆಯ ಕುರಿತಂತೆ ಅಧ್ಯಯನ ನಡೆಸುತ್ತಿರುವ ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಭೂಮಿಯ ಮೇಲೆ ಹಿಂದಿನ ಹಾಗೂ ಈಗಿನ ವಾತಾವರಣ ಬದಲಾವಣೆಗಳನ್ನು ಗುರುತಿಸುವ ರೀತಿಯಲ್ಲಿಯೇ ಬುಧಗ್ರಹದ ವಾತಾವರಣದ ಅಧ್ಯಯನ ನಡೆಸಿದ್ದಾರೆ. ಅಧ್ಯಯನದ ನಂತರದ ವರದಿಯಲ್ಲಿ ಈಗ ಬರಡಾಗಿರುವ ಬುಧಗ್ರಹದ ಆರಂಭಿಕ ದಿನಗಳಿಂದ ಎರಡು ಶತಕೋಟಿ ವರ್ಷಗಳಷ್ಟು ವರ್ಷಗಳ ಕಾಲ ವಾಸಯೋಗ್ಯ ವಾತಾವರಣ ಹೊಂದಿತ್ತು ಎಂದು ಹೇಳಿದೆ. ಈ ಅಧ್ಯಯನ ವರದಿ ಜಿಯೋಫಿಸಿಕಲ್ ರಿಸರ್ಚ್ ಲೆಟಱ್ಸ್‌ನಲ್ಲಿ ಪ್ರಕಟವಾಗಿದೆ.

ಬುಧಗ್ರಹ ಸೂರ್ಯನಿಗೆ ಅತಿ ಹತ್ತಿರವಿರುವ ಗ್ರಹವಾದ್ದರಿಂದ ಸೂರ್ಯನ ಅತೀವ ಶಾಖಕ್ಕೆ ಸಿಕ್ಕಿ ಅಲ್ಲಿಯ ಸಾಗರ ಆವಿಯಾಗಿ ಹೋಗಿದೆ. ಸೂರ್ಯನ ಪ್ರಕರಣ ಸೂರ್ಯ ಕಿರಣಗಳಲ್ಲಿ ಅತಿನೇರಳೆ ಕಿರಣಗಳಿಂದಾಗಿ ಅಲ್ಲಿಯ ಜಲಜನಕ ಬಾಹ್ಯಾಕಾಶ ಸೇರಿ ಹೋಗಿದೆ. ಬರೀ ಇಂಗಾಲಾಮ್ಲ ವಿಭಜನೆಗೊಳ್ಳುವತ್ತ ಅತಿಯಾದ ತಾಪಮಾನದಿಂದ ಜೈವಿಕ ವಾತಾವರಣವೇ ಪೂರ್ಣಮಯವಾಗಿ ಇಂದಿನ ಬರಡು ಗ್ರಹವಾಗಿದೆ ಎಂದೂ ವಿಜ್ಞಾನಿಗಳು ಅಧ್ಯಯನದಲ್ಲಿ ಹೇಳಿದ್ದಾರೆ.

ಸೂರ್ಯನಿಗೆ ಅತಿ ಹತ್ತಿರ

ಸೌರಮಂಡಲದ 9 ಗ್ರಹಗಳಲ್ಲಿ ಬುಧಗ್ರಹ ಅತ್ಯಂತ ಚಿಕ್ಕದು ಹಾಗೂ ಸೂರ್ಯನಿಗೆ ಅತಿ ಹತ್ತಿರ ಗ್ರಹ. ಸೂರ್ಯನಿಂದ 57.9 ದಶಲಕ್ಷ ಮೈಲುಗಳ ದೂರದಲ್ಲಿರುವ ಇದು ವಾತಾವರಣವೇ ಇಲ್ಲದ ಬರಡು ಗ್ರಹ. ಕೊರಕಲು ಕಲ್ಲು ಬಂಡೆಗಳಿಂದ ಕೂಡಿರುವ ಈ ಗ್ರಹದ ತಾಪಮಾನ 864 ಡಿಗ್ರಿ ಪ್ಯಾರನ್ ಹೀಟ್‌ನಷ್ಟಿದೆ. ಸೂರ್ಯನಿಗೆ ಅಭಿಮುಖವಾಗಿರುವ ಭಾಗದ ಉಷ್ಣಾಂಶ ಇಷ್ಟೊಂದು ತಾಪಮಾನದಿಂದ ಕೂಡಿದ್ದರೆ, ಇದರ ಇನ್ನೊಂದು ಪಾರ್ಶ್ವದಲ್ಲಿ ಅತಿ ಕಡಿಮೆ ತಾಪಮಾನವೂ ಇದೆ. ಹೋಲಿಕೆಯಲ್ಲಿ ಚಂದ್ರನನ್ನು ಹೋಲುತ್ತದೆಯಾದರೂ ಸೂರ್ಯನಿಗೆ ಅತಿ ಹತ್ತಿರವಿರುವುದರಿಂದ ಯಾವುದೇ ವಸ್ತುವನ್ನು ಕರಗಿಸಬಲ್ಲಷ್ಟು ತಾಪಮಾನ ಇಲ್ಲಿ ಇರುವುದರಿಂದ ಗಾಳಿ, ನೀರು ಇಲ್ಲಿನ ಶುಷ್ಕ ಗ್ರಹವಾಗಿದೆ.

ಈ ಗ್ರಹದ ಶೋಧನೆಗೆಂದು ನಾಸಾ ಮೊದಲಿಗೆ ಮರೀನರ್ – 10 ಬಾಹ್ಯಾಕಾಶ ನೌಕೆಯನ್ನು ಕಳುಹಿಸಿತ್ತು. ನವೆಂಬರ್ 3, 1973 ರಲ್ಲಿ ಬುಧನತ್ತ ಸಾಗಿದ್ದ ಈ ಬಾಹ್ಯಾಕಾಶ ನೌಕೆ 2700ಕ್ಕೂ ಹೆಚ್ಚು ಅಲ್ಲಿಯ ವಾತಾವರಣ ಕುರಿತ ಛಾಯಾಚಿತ್ರಗಳನ್ನು ಕಳುಹಿಸಿತ್ತು. ನಂತರದಲ್ಲಿ ಮರೀನರ್ ಬಾಹ್ಯಾಕಾಶ ನೌಕೆಯನ್ನು 2004 ರಲ್ಲಿ ನಾಸಾ ಕಳುಹಿಸಿತ್ತು.

ಅದರ ಅಧ್ಯಯನ ನಡೆಸಿದ್ದ ಈ ನೌಕೆ ಲಕ್ಷಕ್ಕೂ ಮೀರಿ ಚಿತ್ರಗಳನ್ನು ರವಾನಿಸಿತ್ತು. ಅವುಗಳ ಅಧ್ಯಯನದಿಂದ ಇದರಲ್ಲಿ ಬರೀ ಬಂಡೆಗಳು ಅತಿಯಾಗಿ ಕಬ್ಬಿಣದಿಂದ ಕೂಡಿದ ದ್ರವ್ಯರಾಶಿಯನ್ನು ಹೊಂದಿರುವುದು ಪತ್ತೆಯಾಗಿದೆ.

 

 

 

 

Leave a Comment