ಬುಡಕಟ್ಟು ಸಮುದಾಯ ಕಲೆ, ಸಂಸ್ಕೃತಿಯ ಮೂಲ

ಕಲಬುರಗಿ,ಆ.12″ಜಾನಪದ ಸೇರಿದಂತೆ ಎಲ್ಲ ಕಲೆ, ಸಂಸ್ಕೃತಿಗೆ ಮೂಲಾಧಾರ ಬುಡಕಟ್ಟು ಸಮುದಾಯ” ಎಂದು ಹಿರಿಯ ಸಾಹಿತಿ ಡಾ.ಸೂಗಯ್ಯ ಹಿರೇಮಠ ಹೇಳಿದರು.
ಕನ್ನಡ ಜಾನಪದ ಪರಿಷತ್ ನಗರದ ಕನ್ನಡ ಭವನದಲ್ಲಿಂದು ಹಮ್ಮಿಕೊಂಡಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
“ಜಾಗತೀಕರಣದ ಈ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕಾದರೆ ಬುಡಕಟ್ಟು ಸಮುದಾಯ ಮಾತ್ರವಲ್ಲ ಆಸಕ್ತರು ಸಹ ಈ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಕಲೆ ಸಂಸ್ಕೃತಿ ಉಳಿಯಲು ಬೆಳೆಯಲು ಸಾಧ್ಯ. ಭಾಷೆ ಅಳಿದರೆ ಇಡೀ ಜನಾಂಗವೇ ಅಳಿಯುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಪ್ರಯತ್ನ ಮಾಡಬೇಕಾಗಿದೆ” ಎಂದರು.
” ಬುಡಕಟ್ಟು ಸಮುದಾಯದ ಬಗ್ಗೆ ಮೊದಲು ಚಿಂತನೆ ಮಾಡಿದವರು ಪಾಶ್ಚಾತ್ಯರು. ಅವರ ಚಿಂತನೆಯ ಫಲ ಬುಡಕಟ್ಟು ಸಮುದಾಯ ಬೆಳಕಿಗೆ ಬರಲು ಸಾಧ್ಯವಾಯಿತು. ಅಲೆಮಾರಿ ಜನಾಂಗ ಒಂದು ಕಡೆ ನೆಲೆಯೂರಿತ್ತು. ಈ ಜನಾಂಗ ಒಂದು ಕಡೆ ನೆಲೆನಿಂತಿದ್ದು ಬಹು ದೊಡ್ಡ ಬದಲಾವಣೆ” ಎಂದರು.
ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ, ಜಾನಪದ ಅಕಾಡೆಮಿ ನೂತನ ಸದಸ್ಯ ಪ್ರಕಾಶ ಅಂಗಡಿ ಕನ್ನಳ್ಳಿ, ನಾಟಕ ಅಕಾಡೆಮಿ ನೂತನ ಸದಸ್ಯ ಸಂದೀಪ ಬಿ., ಬುಡ್ಗ ಜಂಗಮ ಸಮುದಾಯದ ಜಿಲ್ಲಾಧ್ಯಕ್ಷ ಮಾರುತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
@12bc = ಸನ್ಮಾನ
ಕಲಾವಿದರಾದ ದೇವೇಂದ್ರ ಅಣಕೇರಿ, ಮಹಾದೇವಪ್ಪ ರಾಮತೀರ್ಥ, ಕಸ್ತೂರಿಬಾಯಿ ಮತ್ತು ನೀಲಕಂಠಪ್ಪ ಮಾಸ್ಟರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯತು.
ಜಾನಪದ ಅಕಾಡೆಮಿ ನೂತನ ಸದಸ್ಯ ಪ್ರಕಾಶ ಅಂಗಡಿ ಕನ್ನಳ್ಳಿ ಮತ್ತು ನಾಟಕ ಅಕಾಡೆಮಿ ನೂತನ ಸದಸ್ಯ ಸಂದೀಪ ಬಿ.ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.
ಚನ್ನವೀರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ದೊಡ್ಡಿ ಸ್ವಾಗತಿಸಿದರು. ವಿ.ಆರ್.ಚಾಂಬಾಳ, ಎಸ್.ಎಂ.ಪಟ್ಟಣಕರ್, ರಾಜಶೇಖರ ಮಾಂಗ್, ಸಿದ್ರಾಮಪ್ಪ ರಂಜೋಳಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Comment