ಬುಕ್ಕಿ ಬಂಧನ : 68 ಸಾವಿರ ಜಪ್ತಿ

ರಾಯಚೂರು.ಜು.11- ಸಾರ್ವಜನಿಕ ಪ್ರದೇಶದಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಪಡೆದು 68,200 ನಗದು ಜಪ್ತಿ ಮಾಡಿರುವ ಘಟನೆ ಲಿಂಗಸೂಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣ ವ್ಯಾಪ್ತಿಗೆ ಬರುವ ಚಿತ್ತಾಪೂರು ಗ್ರಾಮದ ಸಾರ್ವಜನಿಕ ಪ್ರದೇಶದಲ್ಲಿ ತಂದೆ-ಮಗ ರಾಜಾರೋಷ ಮಟ್ಕಾ ಚೀಟಿ ಬರೆಯುವ ಡಿಎಸ್ಪಿ, ಸಿಪಿಐ ಮಾರ್ಗದರ್ಶನ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್ಐ ದಾದಾವಲಿ ನೇತೃತ್ವದ ಸಿಬ್ಬಂದಿ ವರ್ಗ, ದಂಧೆಯಲ್ಲಿ ತೊಡಗಿದ್ದ ಹುಲಿಗೆಪ್ಪ ರವರನ್ನು ಬಂಧಿಸಿ 68,200 ನಗದು ಸಮೇತ ಮಟ್ಕಾ ಚೀಟಿ ಜಪ್ತಿ ಮಾಡಿದ್ದಾರೆ.
ದಾಳಿ ಸಂದರ್ಭದಲ್ಲಿ ಪರಾರಿಯಾಗಿರುವ ಆರೋಪಿ ಪುತ್ರ ಯಮನೂರು ಬಂಧನಕ್ಕೆ ಬಲೆ ಬೀಸಲಾಗಿದೆಂದು ಪಿಎಸ್ಐ ತಿಳಿಸಿದ್ದಾರೆ.

Leave a Comment