ಬೀದಿ ಬದಿ ಆಹಾರ ಪದಾರ್ಥ ಮಾರಾಟ ಸಚಿವರ ಅಸಹಾಯಕತೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಮಾ. ೨೦- ಚೈನಿಸ್ ರೆಸ್ಟೊರೆಂಟ್ ಮತ್ತು ಬೀದಿ ಬದಿಯಲ್ಲಿ ಮಾರಾಟ ಮಾಡುವ ಗೋಬಿ ಮಂಚೂರಿ, ಫ್ರೈಡ್ ರೈಸ್ ರುಚಿ ಮತ್ತು ಪರಿಮಳ ಬರುವಂತೆ ಬಳಸುತ್ತಿರುವ ಟೆಸ್ಟಿಂಗ್ ಪೌಡರ್ ಮತ್ತು ರಾಸಾಯನಿಕ ವಸ್ತುಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದೇ ಇಲ್ಲ ಇದರಿಂದಾಗಿ ಇಲಾಖೆ ಈ ವಿಚಾರದಲ್ಲಿ ವೈಫಲ್ಯ ಅನುಭವಿಸಿದೆ ಎಂದು ಆರೋಗ್ಯ ಸಚಿವ ರಮೇಶ ಕುಮಾರ ಅವರು ವಿಧಾನ ಪರಿಷತ್‌ನಲ್ಲಿಂದು ಖುದ್ದು ಒಪ್ಪಿಕೊಂಡರು.

ಬಿಜೆಪಿಯ ರಾಮಚಂದ್ರಗೌಡ ಅವರು, ಬೀದಿ ಬದಿಯಲ್ಲಿ ಮಾರಾಟ ಮಾಡುವ ಚೈನಿಸ್ ಆಹಾರ ಪದಾರ್ಥಗಳಲ್ಲಿ ಟೆಸ್ಟಿಂಗ್ ಪೌಡರ್‌ನ್ನು ಬಳಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಕುರಿತಂತೆ ಇಲಾಖೆಯ ಅಧಿಕಾರಿಗಳ ಬಳಿ ಯಾವುದೇ ಉತ್ತರ ಇಲ್ಲಾ ಎಂದು ರಮೇಶ ಕುಮಾರ ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಆಹಾರ ಪದಾರ್ಥಗಳಲ್ಲಿ ಬಳಸುತ್ತಿರುವ ಮೋನೋ ಸೋಡಿಯಂ, ಗುಲ್ಟಾ ಮೇಟ್ ರಾಸಾಯನಿಕ ಪೌಡರ್ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸಿದಲ್ಲಿ ತಲೆನೋವು, ಹೊಟ್ಟೆ ತೋಳಿಸುವುದು, ಅತಿಯಾಗಿ ಬೆವರುವುದು, ಎದೆ ನೋವು, ತಲೆ ಸುತ್ತುವುದು ಹಾಗೂ ನಿಶಕ್ತಿ ಉಂಟಾಗುತ್ತದೆ ಎಂದು ತಿಳಿಸಿದರು.

ಗ್ರಾಹಕರ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಈ ರಾಸಾಯನಿಕ ವಸ್ತು ಬಳಕೆಯ ಬಗ್ಗೆ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಾಗುವುದು. ಈ ಸಂಬಂಧ ಕಡಿಮೆ ಅವಧಿಯಲ್ಲಿ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು ಎಂದು ಹೇಳಿದರು.

ಮೋನೋ ಸೋಡಿಯಂ, ಗುಲ್ಟಾಮೇಟ್ ಪೌಡರ್ ನ್ನು ಹೆಚ್ಚು ಬಳಸದಂತೆ ಅನುಮತಿ ನೀಡಲಾಗಿದೆ. ಅದರಂತೆ ಮಾರುಕಟ್ಟೆಗಳಲ್ಲಿ ಈ ಪೌಡರ್ ಲಭ್ಯವಾಗುತ್ತಿದೆ ಎಂದು ಅವರು ಹೇಳಿದರು.

ಗ್ರಾಹಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಟೆಸ್ಟಿಂಗ್ ಪೌಡರ್ ನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಸದಸ್ಯ ರಾಮಚಂದ್ರಗೌಡ ಅವರ ಆಗ್ರಹಕ್ಕೆ ಸಚಿವರು ನಿಷ್ಠುರ ಕ್ರಮ ಕೈಗೊಳ್ಳುಲಾಗುವುದೆಂದು ಹೇಳಿದರು.

 

Leave a Comment