ಬೀದರ್‌; ಶಾಹಿನ್ ಶಾಲೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ

ಬೀದರ್,ಫೆ.14.ಬೀದರ್‌ನ ಶಾಹಿನ್ ಶಾಲೆಯಲ್ಲಿ ಮಾಡಿದ ಒಂದು ಸಣ್ಣ ನಾಟಕ ದೇಶದ್ರೋಹದ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಶಾಲೆಯ ವಿದ್ಯಾರ್ಥಿನಿ ಇನ್ನೂ ಆಘಾತದಿಂದ ಹೊರ ಬಂದಿಲ್ಲ. ತಾಯಿ ಜೈಲು ಸೇರಿದ್ದು, ಮಗು ಹಾಸ್ಟೆಲ್‌ನಲ್ಲಿ ಆಶ್ರಯ ಪಡೆಯುತ್ತಿದೆ.

ಶುಕ್ರವಾರ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಶಾಹಿನ್ ಶಾಲೆಗೆ ಭೇಟಿ ನೀಡಿದರು. ಬಿಜೆಪಿ ಸರ್ಕಾರವು ಪೊಲೀಸ್ ಇಲಾಖೆಯನ್ನು ದುರುಪಯೋಗಿಸಿಕೊಂಡು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ ಕಾರಣಕ್ಕೆ ಶಿಕ್ಷಕರು ಮತ್ತು ಪೋಷಕರ ಮೇಲೆ ದೇಶದ್ರೋಹದ ಮೊಕದ್ದಮೆ ಹಾಕಿದ್ದಾರೆ ಎಂದು ಆರೋಪಿಸಿದರು.

ನಾಟಕವಾಡಿದ್ದ ವಿದ್ಯಾರ್ಥಿನಿ ತಾಯಿ ನಜಮುನ್ನೀಸಾ ಜೈಲು ಸೇರಿದ್ದು ಇನ್ನೂ ಜಾಮೀನು ಸಿಕ್ಕಿಲ್ಲ. 11 ವರ್ಷದ ಮಗು ಅತಂತ್ರಗಳಾಗಿದ್ದಾಳೆ. ಖಾಸಗಿ ಹಾಸ್ಟೆಲ್‌ನಲ್ಲಿ ಆಕೆಗೆ ವಾಸ್ತವ್ಯ ಒದಗಿಸಲಾಗಿದ್ದು, ಆಕೆ ಆಘಾತಕ್ಕೆ ಒಳಗಾಗಿದ್ದಾಳೆ. ಪರೀಕ್ಷೆ ಬರೆಯಲು ಸಹ ಹೋಗುತ್ತಿಲ್ಲ.

ಫೆಬ್ರವರಿ 7ರಂದು ಬಾಲಕಿ ಶಾಲೆಗೆ ಬಂದಿಲ್ಲ. ತಾಯಿ ಬಂಧನದ ಬಳಿಕ ಪಕ್ಕದ ಮನೆಯಲ್ಲಿ ಉಳಿದುಕೊಂಡಿದ್ದಳು. ಆದರೆ, ಪೊಲೀಸರು ಹಾಗೂ ಮಾಧ್ಯಮದವರು ಘಟನೆ ಸಂಬಂಧ ವಿಚಾರಿಸಲು ಪದೇ ಪದೇ ಬರುತ್ತಿರುವ ಕಾರಣ ಮಕ್ಕಳ ಕಲ್ಯಾಣ ಸಮಿತಿ ನಿರ್ದೇಶನದ ಅನ್ವಯ ಬಾಲಕಿಯನ್ನು ಖಾಸಗಿ ಹಾಸ್ಟೆಲ್‌ಗೆ ಕಳಿಸಲಾಗಿದೆ.

Leave a Comment