ಬಿ.ಸುಬ್ಬಯ್ಯ ಶೆಟ್ಟಿಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿಗೆ

ಬೆಂಗಳೂರು, ಜೂ 11 – ಮಂಗಳೂರಿನ ಸರಳ ಸಜ್ಜನ ರಾಜಕಾರಣಿ ಬಿ.ಸುಬ್ಬಯ್ಯ ಶೆಟ್ಟಿ ಅವರು 2019ನೇ ಸಾಲಿನ  ಶಾಂತವೇರಿ ಗೋಪಾಲಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ ರಾಮೇಗೌಡ ತಿಳಿಸಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಪಾಲಗೌಡರು ಅಪ್ಪಟ ಸಮಾಜವಾದಿ, ಅಪ್ರತಿಮ ನಾಡು, ನುಡಿ-ಪ್ರೇಮಿ, ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಗೀತ ಇವುಗಳ ಬಗೆಗೆ ಅತೀವ ಒಲವನ್ನು ಹೊಂದಿದ್ದರು. ಗೋಪಾಲಗೌಡರ ಜೀವನಾದರ್ಶಗಳನ್ನು ಪಾಲಿಸಿಕೊಂಡು ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ  ಅನುಪಮ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ಸಂಸ್ಥೆಯಿಂದ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದೇವೆ.

  ಪ್ರಶಸ್ತಿ ಪ್ರದಾನ ಸಮಾಂಭವನ್ನು ಜೂನ್ 25 ರಂದು ಸಂಜೆ 5.15ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಲಾಗಿದ್ದು, ಶಾಸಕ ಎಚ್ .ವಿಶ್ವನಾಥ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪತ್ರಕರ್ತ ರಾಜಶೈಲೇಶಚಂದ್ರ ಗುಪ್ತ, ಸಾಹಿತಿ ಡಾ.ಇಂದಿರಾ ಹೆಗಡೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

 

Leave a Comment