ಬಿ.ಪಿ. ನಿಯಂತ್ರಣಕ್ಕೆ ಸರಳ ಸೂತ್ರ

ಅಧಿಕ ರಕ್ತದೊತ್ತಡಕ್ಕೆ ಕೆಲವಾರು ಕಾರಣಗಳಿವೆ. ಸ್ಥೂಲಕಾಯ ಅಥವಾ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬು ಮೊದಲ ಕಾರಣ. ಆದರೆ ಸೋಮಾರಿಗಳಾಗಿದ್ದು ತೆಳ್ಳನೆಯ ಶರೀರ ಹೊಂದಿರುವವರೂ ಅಧಿಕ ಬಿಪಿ ಹೊಂದಿರುತ್ತಾರೆ.

ವ್ಯತಿರಿಕ್ತವಾಗಿ ಕೊಂಚ ದಪ್ಪ ಎಂದು ಕಂಡುಬಂದರೂ ತಮ್ಮ ಕ್ರೀಡೆ, ನಿತ್ಯದ ವ್ಯಾಯಮ ಮೊದಲಾದ ಚಟುವಟಿಕೆಯಿಂದ ಇರುವವರ ರಕ್ತದೊತ್ತಡ ಆರೋಗ್ಯಕರ ಮಟ್ಟದಲ್ಲಿರುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡಕ್ಕೆ ನಮ್ಮ ಶಾರೀರಿಕ ಚಟುವಟಿಕೆಗಳು ನೇರವಾಗಿ ಸಂಬಂಧಿಸಿದೆ ಎಂದು ಸುಲಭವಾಗಿ ಹೇಳಬಹುದು.

ನಿಯಮಿತವಾಗಿ ಬಿಪಿ ಪರೀಕ್ಷಿಸಿ ರಕ್ತದೊತ್ತಡದ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಬಾರದು.

ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ವಿಧಾನವೆಂದರೆ ನಿಯಮಿತವಾಗಿ ವ್ಯಾಯಾಮ ಮಾಡುತ್ತಿರಬೇಕು. ಒಳ್ಳೆಯ ವ್ಯಾಯಾಮ ದಿನಚರಿಯಿಂದಾಗಿ ಹೃದಯವು ತುಂಬಾ ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡಲು ನೆರವಾಗುವುದು. ಇದರಿಂದ ರಕ್ತದೊತ್ತಡವು ನೈಸರ್ಗಿಕವಾಗಿ ಕಡಿಮೆಯಾಗುವುದು. ತುಂಬಾ ಚಟುವಟಿಕೆಯಿಂದ ಇದ್ದರೆ ಆಗ ರಕ್ತದೊತ್ತಡವನ್ನು ಕೆಲವು ವಾರಗಳಲ್ಲಿ ನಿಯಂತ್ರಣಕ್ಕೆ ತರಬಹುದು.

health-bp

ನಿಯಮಿತವಾಗಿ ಆಲ್ಕೋಹಾಲ್ ಸೇವನೆ ಮಾಡಿದರೆ ಅಧಿಕ ರಕ್ತದೊತ್ತಡವು ಹೆಚ್ಚಾಗುವುದು ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿ ಇರಬೇಕು ಎಂದಾದರೆ ಆಲ್ಕೋಹಾಲ್ ಸೇವನೆ ಬೇಡ ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿ ಇರಬೇಕು ಎಂದಾದರೆ ಆಗ ನೀವು ಉಪ್ಪು ಸೇವನೆಯನ್ನು ಮಿತವಾಗಿ ಇಟ್ಟುಕೊಳ್ಳಬೇಕು. ಹೆಚ್ಚು ಉಪ್ಪು ಸೇವಿಸಿದರೆ ಅದರಿಂದ ದೇಹದಲ್ಲಿ ಸೋಡಿಯಂ ಅಂಶವು ಹೆಚ್ಚಾವುದು. ಇದರಿಂದ ಕಿಡ್ನಿಗೆ ನಿಮ್ಮ ದೇಹದಿಂದ ದ್ರವವನ್ನು ಹೊರಗೆ ಹಾಕಲು ತುಂಬಾ ಕಷ್ಟವಾಗುವುದು. ಇದರ ಪರಿಣಾಮವಾಗಿ ರಕ್ತದೊತ್ತಡ ಕೂಡ ಹೆಚ್ಚಾಗುವುದು. ಇದರಿಂದ ಉಪ್ಪನ್ನು ಮಿತವಾಗಿ ಸೇವನೆ ಮಾಡಿ..

ಕೆಫಿನ್ ಕಡಿಮೆ ಮಾಡಿ ಕೆಫಿನ್ ರಕ್ತದೊತ್ತಡವನ್ನು ಹಠಾತ್ ಆಗಿ ಹೆಚ್ಚಿಸುವುದು. ನಿಯಮಿತವಾಗಿ ಅತಿಯಾಗಿ ಕಾಫಿ ಸೇವನೆ ಮಾಡಿದರೆ ಅದರಿಂದ ಹೃದಯದ ಸಮಸ್ಯೆಗಳು, ಅಧಿಕ ರಕ್ತದೊತ್ತಡವು ಬರಬಹುದು. ಚಾಕಲೇಟ್ ತಿನ್ನಿ!. ಹೌದು, ಕಡುಬಣ್ಣದ ಚಾಕಲೇಟ್ ಅಧಿಕ ರಕ್ತದೊತ್ತಡವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸಣ್ಣ ತುಂಡು ಕಡು ಚಾಕಲೇಟ್ ಅದ್ಭುತವನ್ನೇ ಉಂಟು ಮಾಡಲಿದೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡಲಿದೆ. ಯಾವಾಗಲೂ ಸಂತಸದಿಂದ ಮತ್ತು ಒತ್ತಡ ರಹಿತವಾಗಿರಿ.!

ದಾಸವಾಳದ ಹೂವಿನ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಎಂದು ಸಾಕಷ್ಟು ವರ್ಷಗಳಿಂದ ಹೇಳಲಾಗುತ್ತದೆ.ಆದರೆ ಇತ್ತೀಚಿಗೆ ಇದು ಆಶ್ಚರ್ಯಕರ ರೀತಿಯಲ್ಲಿ ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುತ್ತದೆ ಎಂಬುದು ಸಾಬೀತಾಗಿದೆ.

ಸ್ವಲ್ಪ ದಾಸವಾಳದ ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ನೀರಿನಲ್ಲಿ ಕುದಿಸಿ.ಇದಕ್ಕೆ ಜೇನು, ಲಿಂಬೆ ರಸ ಮತ್ತು ಎರಡು ಚಕ್ಕೆಯನ್ನು ಹಾಕಿ ಕುದಿಸಿ. ಸ್ವಲ್ಪ ಹೊತ್ತು ತಣಿಯಲು ಬಿಟ್ಟು ನಂತರ ಇದನ್ನು ಕುಡಿಯಿರಿ. ಈ ರೀತಿ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ತಡೆಯಬಹುದು.

ಕಲ್ಲಂಗಡಿ ಹಣ್ಣು ಕಲ್ಲಂಗಡಿ ಹಣ್ಣಿನಲ್ಲಿರುವ ಸಿಟ್ರುಲಿನ್ ಎಂಬ ಸಾವಯುವ ಸಂಯುಕ್ತವು ಹೃದಯವು ರಕ್ತವನ್ನು ಪಂಪ್ ಮಾಡಲು ಸಹಕರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವುದು ರೂಡಿಸಿಕೊಳ್ಳಿ.ಕಲ್ಲಂಗಡಿ ಬೀಜವೂ ಕೂಡ ರಕ್ತವನ್ನು ತಿಳಿಗೊಳಿಸಿ, ಮೂತ್ರಪಿಂಡದ ಕಾರ್ಯವನ್ನು ಸುಗಮಗೊಳಿಸಿ, ಅಧಿಕ ರಕ್ತದೊತ್ತಡವನ್ನು ತಡೆಯಲು ಸಹಕರಿಸುತ್ತದೆ.

ನುಗ್ಗೆಕಾಯಿ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಫಲಕಾರಿ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೊಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಸಂಶೋಧನೆಗಳು ಸಾದರಪಡಿಸಿರುವಂತೆ, ಈ ಸಸ್ಯದ ಎಲೆಗಳಲ್ಲಿರುವ ಸಾರವು ರಕ್ತದೊತ್ತಡದ ಸಂಕೋಚನ (systolic) ಮತ್ತು ವ್ಯಾಕೋಚನವನ್ನು (diastolic) ಕಡಿಮೆಗೊಳಿಸಲು ಸಹಾಯಕಾರಿಯಾಗುತ್ತದೆ ಬೆರ್ರಿ ಸೇವನೆ ಮಾಡಿ ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡಲು ಬೆರ್ರಿಗಳು ತುಂಬಾ ಒಳ್ಳೆಯದು. ಇದರಲ್ಲಿ ಫ್ಲಾವನಾಯ್ಡ್‌ಗಳು ಸಮೃದ್ಧವಾಗಿದೆ.

ಇದು ರಕ್ತದೊತ್ತಡ ನಿಯಂತ್ರಣ ಮಾಡುವಂತಹ ನೈಸರ್ಗಿಕ ಅಂಶವನ್ನು ಹೊಂದಿದೆ ಮತ್ತು ರಕ್ತದೊತ್ತಡವನ್ನು ಇದು ನಿಯಂತ್ರಣದಲ್ಲಿ ಇಡುವುದು. ಬೆರ್ರಿಗಳನ್ನು ಹಾಗೆಯೇ ಸೇವನೆ ಮಾಡಬಹುದು. ಇದಕ್ಕೆ ಉಪ್ಪು ಸೇರಿಸಬೇಡಿ. ಸ್ಟ್ರಾಬೆರಿ, ರಸ್ಬೇರಿ ಮತ್ತು ನೇರಳೆ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಿ.

Leave a Comment