ಬಿ.ಜೆ.ಪಿ ಕ್ಷಮೆ ಯಾಚನೆಗೆ ಜೆ.ಡಿ.ಎಸ್ ಒತ್ತಾಯ

ಹುಣಸೂರು. ಜೂ.19. ಸುಮಾರು ನಲವತ್ತು ವರ್ಷದ ರಾಜಕೀಯ ಇತಿಹಾಸದಲ್ಲಿ ಹಲವಾರು ಜನಪರ ಅಭಿವೃದಿ ಯೋಜನೆಗಳನ್ನು ರೂಪಿಸುವ ಮೂಲಕ ಕಳಂಕರಹಿತ ರಾಜಕೀಯ ಜೀವನ ನಡೆಸುತ್ತಾ ಬಂದ ಶಾಸಕ ಎಚ್.ವಿಶ್ವನಾಥ್ ಹಾಗೂ ಅವರ ಮಗನ ವಿರುದ್ದ ಇಲ್ಲ ಸಲ್ಲದ ಗಂಭಿರ ಆರೋಪಗಳನ್ನು ಮಾಡಿರುವ ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಹಾಗೂ ಹಿರಿಯ ವಕೀಲ ಬಿ.ಎಸ್.ಯೋಗಾನಂದಕುಮಾರ್ ಶಾಸಕರ ಕ್ಷಮೆ ಕೋರದಿದ್ದಲ್ಲಿ ಅವರ ವಿರುದ್ಧ ಜೆ.ಡಿ.ಎಸ್ ವತಿಯಿಂದ ಪ್ರತಿಭಟನೆ ಮಾಡಲಾಗುವುದೆಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ವಕೀಲ ಶಿವಕುಮಾರ್ ಎಚ್ಚರಿಸಿದ್ದಾರೆ.
ನಗರದ ಪತ್ರಕರ್ತರ ಸಂಘದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಬಿ.ಎಸ್.ಯೋಗಾನಂದಕುಮಾರ್ ಮೊದಲು ತಾಲ್ಲೂಕಲ್ಲಿ ಬಿ.ಜೆ.ಪಿಯನ್ನು ಸಂಘಟನೆ ಮಾಡಲಿ ಅದನ್ನು ಬಿಟ್ಟು ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ತಾಲ್ಲೂಕು ಬಿ.ಜೆ.ಪಿ ನಾಯಕರುಗಳಿಗೆ ಅವರ ವರಿಷ್ಠರು ಎಚ್ಚರಿಕೆ ನೀಡಲಿ ಎಂದರು.
ನಂತರ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಮೂರ್ತಿ ದಶಕಗಳಿಂದಲ್ಲೂ ಬೆರಳೆಣಿಕೆಯಷ್ಟಿರುವ ಬಿ.ಜೆ.ಪಿ ಕಾರ್ಯಕರ್ತರು ಇಷ್ಟು ದಿನ ತಟಸ್ಥರಾಗಿದ್ದು, ಈಗ ಚಳುವಳಿ ನಡೆಸುತ್ತಿರುವುದು ಅನುಮಾನ ಮೂಡಿಸುತ್ತಿದೆ ಎಂದರು.
ನಂತರ ಮಾತನಾಡಿದ ಜೆ.ಡಿ.ಎಸ್ ಮುಖಂಡ ಶಿವಶೇಖರ್ ಭ್ರಷ್ಠ ಅಧಿಕಾರಿ ಪರ ವಕಾಲತ್ತು ವಹಿಸಿ ಶಾಸಕರ ತೆಜೋವಧೆ ಮಾಡುತ್ತಿರುವ ಯೋಗನಂದರವರು ಶಾಸಕರ ಕ್ಷಮೆಯಾಚನೆ ಮಾಡದಿದ್ದರೆ ಅವರ ಕರ್ಮಕಾಂಡಗಳನ್ನು ಬಯಲಿಗೆ ತರಲಾಗುವುದೆಂದು ಎಚ್ಚರಿಸಿದ ಅವರು ದನದ ಮಾಂಸದಂಗಡಿ ಬಗ್ಗೆ ಯೋಗನಂದ್ ಮಾತನಾಡುತ್ತಾರಲ್ಲ ಊರ ಹೊರಗೆ ಇದ್ದ ಅಂಗಡಿಗಳನ್ನು ಊರಿನೊಳಗೆ ತಂದದ್ದು ಯಾರು ? ಎಂದು ಮೊದಲು ಪರಾಮರ್ಶಿಸಲಿ ಎಂದರು.
ಸುದ್ದಿಗೊಷ್ಠಿಯಲ್ಲಿ ಜೆ.ಡಿ.ಎಸ್‍ತಾಲ್ಲೂಕು ಅಧ್ಯಕ್ಷ ಮಾದೇಗೌಡ, ಯುವ ಜೆ.ಡಿ.ಎಸ್ ಅಧ್ಯಕ್ಷ ಲೋಕೇಶ್ ಉಪಸ್ಥಿತರಿದ್ದರು

Leave a Comment