ಬಿಹಾರದ 8 ಕ್ಷೇತ್ರಗಳಿಗೆ 6ನೇ ಹಂತದ ಚುನಾವಣೆಗೆ ಅಧಿಸೂಚನೆ ಪ್ರಕಟ

ಪಾಟ್ನಾ, ಏ 16 – ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ 6ನೇ ಹಂತದಲ್ಲಿ ಮೇ 12ರಂದು ಚುನಾವಣೆ ನಡೆಯಲಿದ್ದು, ಇಂದು ಅಧಿಸೂಚನೆ ಹೊರಬಿದ್ದಿದೆ.

ಅಧಿಸೂಚನೆ ಹೊರಬಿದ್ದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ.

ವಾಲ್ಮೀಕಿನಗರ, ಪಶ್ಚಿಮ ಚಂಪರಣ್, ಪೂರ್ವಿ ಚಂಪರಣ್, ಶಿಯೋಹರ್, ವೈಶಾಲಿ, ಗೋಪಾಲ್‌ಗಂಜ್‌, ಸಿವಾನ್‌, ಮಹಾರಾಜ್‌ಗಂಜ್ ಕ್ಷೇತ್ರಗಳಿಗೆ ಮೇ 12ರಂದು ಮತದಾನ ನಡೆಯಲಿದೆ.

 ಏಪ್ರಿಲ್‌ 23ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಏ 24ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.  ಏ 26ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 23ರಂದು ಮತದಾನ ನಡೆಯಲಿದೆ.

 

Leave a Comment