ಬಿಹಾರದ ಮೇಲೆ ಪ್ರವಾಹದ ಕರಾಳ ಛಾಯೆ

ನವದೆಹಲಿ, ಆ. ೧೩- ನೇಪಾಳದಲ್ಲಿ ಎಡಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆ ಅಲ್ಲಿ ಭಾರಿ ಅನಾಹುತವನ್ನು ಸೃಷ್ಟಿಸಿರುವುದರ ಜೊತೆಗೆ ಬಿಹಾರದಲ್ಲೂ ಪ್ರವಾಹವ ಆತಂಕವನ್ನು ಸೃಷ್ಟಿಸಿದೆ. ಬಿಹಾರದಲ್ಲಿ ಹರಿಯುವ ಕೋಷಿನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕೋಷಿ ನದಿಯ ಒಳಹರಿವು ನಿರಂತರವಾಗಿ ಏರಿಕೆಯಾಗುತ್ತಿದ್ದು ಯಾವುದೇ ಸಂದರ್ಭದಲ್ಲಿ ಪ್ರವಾಹ ಹಾವಳಿ ಸೃಷ್ಟಿಸುವ ಸಂಭವ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೇಪಾಳ ತತ್ತರ
ಶುಕ್ರವಾರದಿಂದ ಸುರಿಯುತ್ತಿರುವ  ಭಾರಿ ಮಳೆಯಿಂದಾಗಿ ನೇಪಾಳದಲ್ಲಿ ಭೂಕುಸಿತ, ಪ್ರವಾಹದ ಹಾವಳಿ ಮಿತಿಮೀರಿದ್ದು ಸುಮಾರು 2000 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಮಳೆ ಪ್ರವಾಹ, ಭೂಕುಸಿತಗಳಿಗೆ ಸಿಕ್ಕಿ 20 ಮಂದಿ ಮೃತಪಟ್ಟಿದ್ದು 50 ಮಂದಿ ನಾಪತ್ತೆಯಾಗಿದ್ದಾರೆ.

ಮಳೆ ಸುರಿಯುತ್ತಲೇ ಇದ್ದು, ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ರಸ್ತೆಗಳು ನೀರಿನಲ್ಲಿ ಮುಳುಗಿದ್ದು, ಕೆಲವು ಭಾಗಗಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

Leave a Comment