ಬಿಸಿಸಿಐ ಅಧ್ಯಕ್ಷರಾಗಿ ದಾದಾ ಹೊಸ ಇನ್ನಿಂಗ್ಸ್ ಆರಂಭ

ಮುಂಬೈ, ಅ ೨೩- ಭಾರತ ಕ್ರಿಕೆಟ್ ಮಾಜಿ ನಾಯಕ ದಾದಾ ಎಂದೆ ಪ್ರಖ್ಯಾತರಾಗಿರುವ ಗೌರವ್ ಗಂಗೂಲಿ ಬಿಸಿಸಿಐನ 39ನೇ ಅಧ್ಯಕ್ಷರಾಗಿ ಇಂದು ಮುಂಬೈನ ಕ್ರಿಕೆಟ್ ಮಂಡಳಿಯ ಪ್ರಧಾನ ಕಚೇರಿಯಲ್ಲಿ ಅಧಿಕಾರವಹಿಸಿಕೊಂಡರು.
ಈ ಮೂಲಕ ಸೌರವ್ ಗಂಗೂಲಿ ತಮ್ಮ ಹೊಸ ಇನ್ಸಿಂಗ್ಸ್ ಆರಂಭಿಸಿದರು. ಅಕ್ಟೋಬರ್ ತಿಂಗಳ ಆರಂಭದಲ್ಲಿ ನಡೆದ ಅಧ್ಯಕ್ಷೀಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾದ ನಂತರ ಬಿಸಿಸಿಐ ಉನ್ನತ ಹುದ್ದೆಗೆ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿ ಗಂಗೂಲಿ ಅವರು ಆಗಿದ್ದರು.
ಹೊಸ ಆಡಳಿತದಲ್ಲಿ ಗೃಹ ಸಚಿವ ಅಮಿತ್ ಷಾ ಅವರ ಪುತ್ರ ಜೇ. ಶಾ. ಅವರು ಮಂಡಳಿಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರೆ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಸೋದರ ಅರುಣ್ ಸಿಂಗ್ ದುಮಾಲ್, ಹೊಸ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.
ಕೇರಳದ ಹಿರಿಯ ಆಡಳಿತ ಅಧಿಕಾರಿ ಜಯೇಶ್ ಜಾರ್ಜ್ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಹಾಗೂ ಉತ್ತರ ಖಾಂಡದ ಮಹೀಮಾ ವರ್ಮಾ ಹೊಸ ಉಪಾಧ್ಯಕ್ಷ ರಾದರು.
ಈ ಮೂಲಕ ಸುಪ್ರೀಂ ಕೋರ್ಟ್ ನೇಮಿಸಿದ್ದ ವಿನೋದ್ ರೈ ನೇತೃತ್ವದ ಆಡಳಿತ ಅಧಿಕಾರಿಗಳ ಸಮಿತಿ ಆಳ್ವಿಕೆ ಇಂದು ಅಂತ್ಯ ಕಂಡಿತು. ಸುಮಾರು 3 ವರ್ಷಗಳ ಕಾಲ ಈ ಆಡಳಿತ ಅಧಿಕಾರಿಗಳು ಬಿಸಿಸಿಐ ನ ಆಡಳಿತ ನಡೆಸಿದ್ದರು.
ಇದು ಉತ್ತಮ ಅನುಭವ ಮತ್ತು ಸುದೀರ್ಘ ಪಯಣ ಇಷ್ಟು ದಿನ ಪಯಣ ಮುಂದುವರೆಯುತ್ತದೆ ಎಂದೂ ಭಾವಿಸಿರಲಿಲ್ಲ. ಚುನಾವಣೆಗಳು ಮತ್ತು ಪದಾಧಿಕಾರಿಗಳು ಹಿಂತಿರುಗುತ್ತಿದ್ದಾರೆ. ಈಗ ಅವರಿಂದ ಆಡಳಿತ ನಡೆಸಲ್ಪಡುತ್ತಿದ್ದಾರೆ ಇದು ನನಗೆ ಸಂತೋಷ ತಂದಿದೆ ಎಂದೂ ಸಿಇಓ ಸಭೆಯ ಮುಕ್ತಾಯ ನಂತರ ಯೆಡೂಲ್ ಜೀ ಮಾಧ್ಯಮಗಳಿಗೆ ತಿಳಿಸಿದ್ದರು.
ಭಾರತದ ಅತ್ಯಂತ ಪ್ರಸಿದ್ಧ ಕ್ರಿಕೆಟ್ ನಾಯಕರಲ್ಲಿ ಗಂಗೂಲಿ ಸಹ ಒಬ್ಬರು. ತಮ್ಮ 10ನೇ ತಿಂಗಳ ಅಧಿಕಾರದ ಅವಧಿಯಲ್ಲಿ ಯೋಜನೆಗಳನ್ನು ರೂಪಿಸಿದ್ದರು. 6 ವರ್ಷಗಳ ನಂತರ ಆಡಳಿತಾತ್ಮಕ ಅಧಿಕಾರಿಯೊಬ್ಬರು ಕೆಳಗಿಳಿಯುವಂತೆ ಒತ್ತಾಯಿಸುವ ಹೊಸ ಸಂವಿಧಾನದಲ್ಲಿ ತಣ್ಣನೆಯ ವಾತಾವರಣವಿರುವುದರಿಂದ ಭಾರತದ ಮಾಜಿ ನಾಯಕ ಮುಂದಿನ ಜುಲೈನಲ್ಲಿ ಜಾಗ ಖಾಲಿ ಮಾಡಬೇಕಾಗುತ್ತದೆ. ಗಂಗೂಲಿ ಕಳೆದ 5 ವರ್ಷಗಳಿಂದ ಸಿಎಬಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Leave a Comment