ಬಿಸಿಲು-ಮಳೆಯಿಂದ ತುಕ್ಕು ಹಿಡಿಯುತ್ತಿರುವ ಯಂತ್ರೋಪಕರಣ

ನಂಜನಗೂಡು. ಜು.11- ನಗರಸಭೆಯ ಅವರಣದಲ್ಲಿ ಸುಮಾರು ಒಂದು ವರ್ಷಗಳಿಂದ ಎರಡರಿಂದ ಮೂರು ಲಕ್ಷ ಬೆಳೆಬಾಳುವ ಕಸವಿಂಗಡಣೆ ಮಾಡುವ ಯಂತ್ರೋಪಕರಣ ಬಿಸಿಲಿನಿಂದ ಒಣಗಿ-ಮಳೆಯಿಂದ ನೆನೆದು ತುಕ್ಕು ಹಿಡಿದು ಹಾಳಾಗುತ್ತಿದೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರ ಒತ್ತಾಯ.
ಕಳೆದ ಒಂದು ವರ್ಷದಿಂದ ಕಸವಿಂಗಡಣೆ ಮಾಡುವ ಯಂತ್ರೋಪಕರಣ ವನ್ನು ಒಂದು ಒಂದು ವರ್ಷದ ಹಿಂದೆ ಇದನ್ನು ಖರೀದಿ ಮಾಡಿದ್ದಾರೆ. ಯಂತ್ರೋಪಕರಣ ವನ್ನು ನಗರಸಭೆ ಆವರಣದಲ್ಲಿ ಹಾಕಿ ವರ್ಷ ಕಳೆದಿದೆ ಇದನ್ನು ಉಪಯೋಗಿಸದೆ ಒಂದೇ ಕಡೆ ಬಿದ್ದಿರುವುದರಿಂದ ಮಳೆಯಿಂದ ನೆನೆದು ತುಕ್ಕು ಹಿಡಿದಿದೆ ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ತಂದಿರುವಂತಹ ಉಪಕರಣವನ್ನು ಉಪಯೋಗಿಸಬೇಕೆಂದು ಸಾರ್ವಜನಿಕರ ಒತ್ತಾಯ.
ಅಧಿಕಾರಿಗಳು ಇದನ್ನು ತರಿಸುವ ಮುಂಚೆ ಯೋಚನೆ ಮಾಡಬೇಕಿತ್ತು ತರುವುದು ಮುಖ್ಯವಲ್ಲ ಇದರ ಉಪಯೋಗ ಮುಖ್ಯ ಆದ್ದರಿಂದ ತಕ್ಷಣ ಇದನ್ನು ಗುಜರಿಗೆ ಹಾಕುವ ಮೊದಲು ಸರಿಪಡಿಸಿದರು ಉಪಯೋಗವನ್ನು ಬಳಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ವಿಚಾರವಾಗಿ ನಗರಸಭೆಯ ಪರಿಸರ ಅಭಿಯಂತರರು ಅರ್ಚನಾ ಆರಾಧ್ಯ ರವರನ್ನು ಭೇಟಿಮಾಡಿದಾಗ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ 15 ದಿನಗಳಲ್ಲಿ ಉಪಯೋಗಿಸಿಕೊಳ್ಳಲಾಗುತ್ತದೆ ಕೆಲವು ಅಡಚಣೆ ಉಂಟಾಗಿತ್ತು ಅದನ್ನು ಸರಿಪಡಿಸಲಾಗಿದೆ 15 ದಿನಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ ಎಂದು ಸಂಜೆವಾಣಿ ಪತ್ರಿಕೆಗೆ ತಿಳಿಸಿದ್ದಾರೆ.

Leave a Comment