ಬಿಶ್ಕೇಕ್ ತಲುಪಿದ ಪ್ರಧಾನಿ ಮೋದಿ; ಪುಟಿನ್, ಕ್ಸಿ ಭೇಟಿಗೆ ಕ್ಷಣ ಗಣನೆ

ಬಿಶ್ಕೇಕ್,ಜೂ 13  -ಶಾಂಘೈ ಸಹಕಾರ ಸಂಘಟನೆ(ಎಸ್ ಸಿಓ) ಶೃಂಗಸಭೆಯಲ್ಲಿ  ಪಾಲ್ಗೊಳ್ಳಲು  ಕಿರ್ಗಿಸ್ತಾನ್ ರಾಜಧಾನಿ ಬಿಶ್ಕೇಕ್ ಗೆ   ಗುರುವಾರ  ತಲುಪಿರುವ   ಪ್ರಧಾನಿ ನರೇಂದ್ರ ಮೋದಿ,  ರಷ್ಯಾ ಅಧ್ಯಕ್ಷ  ವ್ಲಾಡಿಮೀರ್ ಪುಟಿನ್ ಹಾಗೂ ಚೈನಾ ಅಧ್ಯಕ್ಷ  ಕ್ಸಿ ಜಿನ್ ಪಿಂಗ್ ಸೇರಿದಂತೆ  ಹಲವು ನಾಯಕರನ್ನು ಭೇಟಿ ಮಾಡಲಿದ್ದಾರೆ.

ಪ್ರಧಾನಿಯಾಗಿ ಪುನರಾಯ್ಕೆಗೊಂಡ ನಂತರ  ನರೇಂದ್ರ ಮೋದಿ ಅವರ ಮೊದಲ ಬಹುಪಕ್ಷೀಯ ಸಮಾವೇಶ ಇದಾಗಿದೆ.

ಎರಡು ದಿನಗಳ  ಬಿಶ್ಕೇಕ್ ಶೃಂಗಸಭೆಗೆ ತೆರಳುವ ಮುನ್ನ  ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ  ಹೇಳಿಕೆ ನೀಡಿ, ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಬಿಡುವಿನಲ್ಲಿ  ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್, ಚೈನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್  ಸೇರಿದಂತೆ ಹಲವು ನಾಯಕರನ್ನು ಭೇಟಿಮಾಡಲು ಯೋಜಿಸಿದ್ದೇನೆ ಎಂದು ತಿಳಿಸಿದ್ದಾರೆ.

ಬಹುಪಕ್ಷೀಯ,ರಾಜಕೀಯ, ಭದ್ರತೆ, ಆರ್ಥಿಕ ಹಾಗೂ ಈ ವಲಯದ ಜನರ ನಡುವಣ ಸಂವಾದವನ್ನು   ಉತ್ತೇಜಿಸುವ ಶಾಂಘೈ ಸಹಕಾರ ಸಂಘಟನೆಗೆ  ಭಾರತ ಹೆಚ್ಚು  ಪ್ರಾಮುಖ್ಯತೆ  ನೀಡುತ್ತದೆ.  ಎರಡು ವರ್ಷಗಳ ಹಿಂದೆ ಸಂಘಟನೆಯ ಪೂರ್ಣ ಸದಸ್ಯತ್ವ ದೊರೆತ ನಂತರ ಭಾರತ  ವಿವಿಧ ಎಸ್ ಸಿ ಓ ಸಂವಾದ  ವ್ಯವಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ.

ಎಸ್ ಸಿ ಓ ಸಂಘಟನೆಯ  ಅಧ್ಯಕ್ಷತೆ ವಹಿಸಿರುವ ಕಿರ್ಗಿಸ್ತಾನ ಗಣರಾಜ್ಯಕ್ಕೆ ಭಾರತ ಸಂಪೂರ್ಣ ಸಹಕಾರ ನೀಡಿದೆ ಎಂದು ಮೋದಿ ವಿವರಿಸಿದ್ದಾರೆ.

ಜಾಗತಿಕ ಭದ್ರತಾ ಪರಿಸ್ಥಿತಿ, ಬಹುಪಕ್ಷೀಯ ಆರ್ಥಿಕ ಸಹಕಾರ, ಜನರ ನಡುವೆ ಪರಸ್ಪರ  ವಿನಿಮಯ ಹಾಗೂ ಅಂತರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಹತ್ವದ ವಿಷಯಗಳನ್ನು  ಶೃಂಗಸಭೆಯಲ್ಲಿ  ಚರ್ಚಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ಉಪಸ್ಥಿತಿಯನ್ನು ಮತ್ತಷ್ಟು  ಬಲಪಡಿಸಲು  ಪ್ರಧಾನಿ ನರೇಂದ್ರ ಮೋದಿ  ಎರಡನೇ ಅವಧಿಗೆ ಪುನರಾಯ್ಕೆಗೊಂಡ ನಂತರ  ಮೊದಲ ಬಹುಪಕ್ಷೀಯ ಸಮಾವೇಶ, ಬಿಶ್ಕೇಕ್ ನಲ್ಲಿ ಗುರುವಾರ  ಮತ್ತು ಶುಕ್ರವಾರ  ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ  ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ ಎಂದು  ವಿದೇಶಾಂಗ ವ್ಯವಹಾರಗಳ ವಕ್ತಾರರು  ಟ್ವೀಟ್ ಮಾಡಿದ್ದಾರೆ.

ಪ್ರದಾನಿ ಮೋದಿ  ಕಿರ್ಗಿಸ್ತಾನ್  ಅಧ್ಯಕ್ಷ ಜಿನೆಕೋವ್ ಅವರೊಂದಿಗೆ ನಿಯೋಗಮಟ್ಟದ ಮಾತುಕತೆ ನಡಸಲಿದ್ದು, ಭಾರತ – ಕಿರ್ಗಿ ಸ್ತಾನ್ ಉದ್ಯಮ ವೇದಿಕೆಯನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ  ಎಂದು ಅವರು ಮತ್ತೊಂದು ಟ್ವೇಟ್ ನಲ್ಲಿ ತಿಳಿಸಿದ್ದಾರೆ.

ಭಾರತ ಹಾಗೂ ಕಿರ್ಗಿಸ್ತಾನ  ಐತಿಹಾಸಿಕ ಹಾಗೂ ನಾಗರಿಕ ಸಂಬಂಧಗಳನ್ನು ಹೊಂದಿದ್ದು.  ತಮ್ಮ ಕಿರ್ಗಿಸ್ತಾನದ ಭೇಟಿಯಿಂದ ಎಸ್ ಸಿ ಓ ಸದಸ್ಯ ದೇಶಗಳು ಹಾಗೂ ಕಿರ್ಗಿಸ್ತಾನದೊಂದಿಗಿನ ನಮ್ಮ ಸಹಕಾರ ಮತ್ತಷ್ಟು ಬಲಗೊಳ್ಳಲಿದೆ  ಎಂದು ಪ್ರಧಾನಿ ಮೋದಿ ಟ್ವೀಟ್ ನಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

Leave a Comment