ಬಿಲ್ಡ್‍ಟೆಕ್ ಪ್ರದರ್ಶನ 14 ರಿಂದ

ಕಲಬುರಗಿ ಸ 12: ಕನ್ಸಲ್ಟಿಂಗ್ ಸಿವಿಲ್ ಇಂಜನೀಯರ್ಸ್ ಅಸೋಸಿಯೇಶನ್,ಬೆಂಗಳೂರಿನಯುಎಸ್ ಕಮ್ಯೂನಿಕೇಷನ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ಸ್ ಸಹಯೋಗದಲ್ಲಿ ಮೂರು ದಿನಗಳ  ಮನೆ ನಿರ್ಮಾಣ ಸಾಮಗ್ರಿ ,ಗೃಹ ಅಲಂಕಾರ ವಸ್ತುಗಳ ಬಿಲ್ಡ್‍ಟೆಕ್ ಪ್ರದರ್ಶನ ಸಪ್ಟೆಂಬರ್ 14 ರಿಂದ 16 ರವರೆಗೆ ಶರಣಬಸವೇಶ್ವರ ಕೆರೆ ಉದ್ಯಾನ ಹತ್ತಿರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

14 ರಂದು ಮಧ್ಯಾಹ್ನ 12 ಗಂಟೆಗೆ ಮೇಯರ್ ಶರಣಕುಮಾರ ಮೋದಿ ಕಾರ್ಯಕ್ರಮ ಉದ್ಘಾಟಿಸುವರು.ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಜ್ಯೋತಿ ಬೆಳಗಿಸುವರು.ಅಲ್ಟ್ರಾಟೆಕ್ ಸಿಮೆಂಟ್ಸ್ ಮಾರುಕಟ್ಟೆ ವಿಭಾಗದ ವಲಯ ಮುಖ್ಯಸ್ಥ ಎಸ್ ವಿ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಕನ್ಸಲ್ಟಿಂಗ್ ಸಿವಿಲ್ ಇಂಜನೀಯರ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ನರೇಂದ್ರ ಫಿರೋಜಾಬಾದಕರ್,ಕಾರ್ಯದರ್ಶಿ ರಾಜಶೇಖರ ಶೀಲವಂತ ಮತ್ತು ಯುಎಸ್ ಕಮ್ಯೂನಿಕೇಷನ್ ಸಂಸ್ಥೆಯ ಉಮಾಪತಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

15 ರಂದು ಬೆಳಿಗ್ಗೆ 11 ಗಂಟೆಗೆ ಭಾರತರತ್ನ ಎಂ ವಿಶ್ವೇಶ್ವರಯ್ಯ ಅವರ 157 ನೆಯ ಜನ್ಮ ದಿನದ ಅಂಗವಾಗಿ ಇಂಜನೀಯರರ ದಿನ ಆಚರಣೆ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ನಡೆಯಲಿದೆ

ವಸ್ತು ಪ್ರದರ್ಶನದಲ್ಲಿ ಸುಮಾರು 70 ರಿಂದ 80 ಕಂಪನಿಗಳು ಭಾಗವಹಿಸುತ್ತಿದ್ದು,  ಅತ್ಯಾಧುನಿಕ ಮತ್ತು ಅತ್ಯಾಕರ್ಷಕ ಗೃಹ ನಿರ್ಮಾಣದ,ಅಲಂಕಾರದ ಮತ್ತು ಅವಶ್ಯಕ ಸಾಮಗ್ರಿಗಳು ಒಂದೇ ಸೂರಿನಡಿ ದೊರಕಲಿವೆ. ಬೆಳಿಗ್ಗೆ 10.30 ರಿಂದ ಆರಂಭವಾಗುವ ಪ್ರದರ್ಶನ ರಾತ್ರಿ 8.30 ರವರೆಗೆ ನಡೆಯಲಿದೆ ಎಂದು ವಿವರಿಸಿದರು…

Leave a Comment