ಬಿರುಗಾಳಿಗೆ ಹೊಯ್ದಾಡಿದ 2 ವಿಮಾನಗಳಿಗೆ ಹಾನಿ

ನವದೆಹಲಿ, ಸೆ. ೨೨- ಹಾರಾಟದ ವೇಳೆ ಗಾಳಿಯ ಹೊಡೆತಕ್ಕೆ ಸಿಲುಕಿರುವ ಎರಡು ಏರ್ ಇಂಡಿಯಾ ವಿಮಾನಗಳು ಹಾನಿಗೊಳಗಾಗಿದ್ದು, ಕಾಕ್ ಪಿಟ್ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ಆದರೆ, ಈ ಘಟನೆಯಿಂದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ.

ದೆಹಲಿಯಿಂದ ತಿರುವನಂತಪುರಂಗೆ ಕೊಚ್ಚಿ ಮೂಲಕ 172 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ಇಂಡಿಯಾ ವಿಮಾನ ಹಾರಾಟದ ವೇಳೆ ತೀವ್ರ ಗಾಳಿಯ ಹೊಡೆತಕ್ಕೆ ಸಿಲುಕಿದೆ. ಇದರಿಂದ ವಿಮಾನದ ಕೆಲಭಾಗ ಕಾಕ್‌ಫಿಟ್ ಸೇರಿದಂತೆ, ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ಪ್ರಯಾಣಿಕಱ್ಯಾರಿಗೂ ಗಾಯಗಳಾಗಲಿಲ್ಲ. ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ವಿಮಾನಕ್ಕೆ ಹಾನಿಯುಂಟಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ವಿಮಾನಯಾನ ಸುರಕ್ಷತಾ ವಿಭಾಗಕ್ಕೆ ವರದಿ ನೀಡಲಾಗಿದ್ದು, ಸುರಕ್ಷತಾ ವಿಭಾಗ ಘಟನೆ ಕುರಿತಂತೆ ಸಂಪೂರ್ಣ ಮಾಹಿತಿಗಾಗಿ ತನಿಖೆ ಆರಂಭಿಸಿದೆಏರ್‌ಇಂಡಿಯಾ ವಿಮಾನ ಎಐಎ-048 ಕೊಚ್ಚಿಯಿಂದ ತಿರುವನಂತಪುರಕ್ಕೆ ಹಾರಾಟ ನಡೆಸುತ್ತಿದ್ದ ವೇಳೆ ಗಾಳಿ ಹೊಡೆತಕ್ಕೆ ಸಿಲುಕಿದೆ. ಯಾರಿಗೂ ಗಾಯಗಳಾಗಿರುವ ಕುರಿತು ವರದಿಯಾಗಿಲ್ಲ. ವಿಮಾನ ಸಣ್ಣ ಹಾನಿಗೊಳಗಾಗಿದೆ. ಈ ಕಾರಣದಿಂದಲೇ ವಿಮಾನ ಹಿಂದಿರುಗಲು 4 ಗಂಟೆ ವಿಳಂಬವಾಗಿದೆ.

ದೆಹಲಿಯಿಂದ ವಿಜಯವಾಡಕ್ಕೆ ಸೆ. 17 ರಂದು ತೆರಳುತ್ತಿದ್ದ ಏರ್‌ಇಂಡಿಯಾ ಗಾಳಿ ಹೊಡೆತವನ್ನು ಎದುರಿಸಿದೆ. ಗುಡುಗು ಸಹಿತ ಸಿಲುಕಿರುವ ಏರ್ ಬಸ್ ಎ-20 ವಿಮಾನ ಕ್ಯಾಬಿನ್ ಹಾನಿಗೊಳಗಾಗಿದ್ದು, ಸಿಬ್ಬಂದಿ ಗಾಯಗೊಂಡಿದ್ದಾರೆ.

Leave a Comment