ಬಿಜೆ ಪುಟ್ಟಸ್ವಾಮಿಗೆ ಎಂ.ಎಲ್.ಸಿ ನೀಡಲು ಒತ್ತಾಯ

ನಂಜನಗೂಡು. ಮೇ.31- ಗಾಣಿಗ ಜನಾಂಗದ ತಾಲೂಕು ಅಧ್ಯಕ್ಷರಾದ ಮಾದಶೆಟ್ಟಿ ಇಂದು ಪತ್ರಿಕಾಗೋಷ್ಠಿ ನಡೆಸಿ ಬಿ ಜೆ ಪುಟ್ಟಸ್ವಾಮಿ ರವರಿಗೆ ಎಂಎಲ್ ಸಿ ಸ್ಥಾನ ನೀಡಬೇಕೆಂದು ಪತ್ರಿಕಾ ಗೋಷ್ಠಿಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ .
ಮುಂದುವರೆದು ಮಾತನಾಡಿದ ಅವರು ಡಿಜೆ ಪುಟ್ಟಸ್ವಾಮಿಯವರು ಕಳೆದ 40 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಇದು ಸೇವೆ ಮಾಡುತ್ತಿದ್ದಾರೆ ಅದರಂತೆ ಸರ್ಕಾರ ಕೂಡ ಕೆಲವು ಸ್ಥಾನವನ್ನು ನೀಡಿದೆ ಆದ್ದರಿಂದ ಈ ಬಾರಿ ಎಂಎಲ್ ಸಿ ಸ್ಥಾನ ನೀಡಬೇಕು ಎಂದರು.
ನಮ್ಮ ಜನಾಂಗ ಹಿಂದುಳಿದಿದೆ ಮೂಲಭೂತ ಸೌಕರ್ಯವಿಲ್ಲದೆ ಇರುವುದರಿಂದ ನಮ್ಮ ಜನಾಂಗಕ್ಕೆ ಬೆನ್ನೆಲುಬಾಗಿ ನಿಲ್ಲುವ ಬಿಜೆ ಪುಟ್ಟಸ್ವಾಮಿಯವರು ನಮ್ಮ ಜನಾಂಗದ ಬೆನ್ನ ಹಿಂದೆ ನಿಂತು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಆದ್ದರಿಂದ ಇವರನ್ನು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ನವರು ಕೈ ಬಿಡುವುದಿಲ್ಲ ಎಂದು ನಂಬಿಕೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಮಾದಶೆಟ್ಟಿ ಗೌರವಾಧ್ಯಕ್ಷ ನಂಜಪ್ಪ ಉಪಾಧ್ಯಕ್ಷ ವೆಂಕಟೇಶ್ ಗೋಬಿ ವೆಂಕಟೇಶ್ ಕಾರ್ಯದರ್ಶಿ ರಂಗಸ್ವಾಮಿ ಸಹಕಾರ್ಯದರ್ಶಿ ಕುಮಾರ್ ಸಂಚಾಲಕರು ಇದ್ದರು.

Share

Leave a Comment