ಬಿಜೆಪಿ ಹೈಕಮಾಂಡ್ ಗೆ ಬಿ.ಎಸ್.ವೈ ಒಲ್ಲದ ಶಿಶು

ಮೈಸೂರು. ಆ.೨೫. ಬಿಜೆಪಿಯದ್ದು ಅನೈತಿಕ ಶಿಶುವಿನ ಸರ್ಕಾರ. ಈ ಸರ್ಕಾರ ಸಂವಿಧಾನಬದ್ಧವಾಗಿ ರಚನೆಯಾಗಿಲ್ಲ. ಅನರ್ಹಗೊಂಡ ಶಾಸಕರು ಧಮ್ಕಿ ಹಾಕಿರುವುದರಿಂದ ಸಂಪುಟ ವಿಸ್ತರಣೆಯಾಗಿದ್ದರೂ ಸಿಎಂಗೆ ಖಾತೆ ಹಂಚಿಕೆ ಮಾಡಲಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು. ಬಿಜೆಪಿ ನಾಯಕರು ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಬಿ.ಎಸ್.ವೈ ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಯಡಿಯೂರಪ್ಪ ಒಂದು ರೀತಿ ಬಿಜೆಪಿ ಹೈಕಮಾಂಡ್ ಗೆ ಒಲ್ಲದ ಶಿಶುವಾಗಿದ್ದಾರೆಂದು ವ್ಯಂಗ್ಯವಾಡಿದರು. ಅಮಿತ್ ಶಾ ಭೇಟಿಗಾಗಿ ಸಿಎಂ ದೆಹಲಿಗೆ ಧಾವಿಸುತ್ತಾರೆ. ಆದರೆ, ಅಮಿತ್ ಶಾ ಯಡಿಯೂರಪ್ಪ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಗೆ ಒಲ್ಲದ ಶಿಶು ಎನ್ನುವುದಕ್ಕೆ ಇದಕ್ಕಿಂತ ಬೇಕೆ ನಿದರ್ಶನ ಬೇಕೇ ಎಂದರು.

ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾನೇ ಕಾರಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಭಾವಿಸಿದ್ದು, ನನ್ನನ್ನು ಶತ್ರುವಿನಿಂತೆ ದ್ವೇಷಿಸುತ್ತಿದ್ದಾರೆ.ಅವರಿಗೆ ಆಡಳಿತ ನಿಭಾಯಿಸಲು ಸಾಧ್ಯವಾಗದಿದ್ದರೆ ನಾನು ಹೊಣೆಯೇ ಎಂದು ಇದೇ ವೇಳೆ ಎಚ್.ಡಿ.ಕುಮಾರಸ್ವಾಮಿ ಅವರನ್ನೂ ಸಿದ್ದರಾಮಯ್ಯ ಕುಟುಕಿದರು…

Leave a Comment